• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mallikarjun Kharge: ನನಗೆ ಸಿಎಂ ಸ್ಥಾನ ಬೇಕಾಗಿಲ್ಲ ಎಂದ ಖರ್ಗೆ! ರಾಹುಲ್ ಗಾಂಧಿ ಎದುರು ಕೈ ನಾಯಕರ ಒಗ್ಗಟ್ಟಿನ ಮಂತ್ರ

Mallikarjun Kharge: ನನಗೆ ಸಿಎಂ ಸ್ಥಾನ ಬೇಕಾಗಿಲ್ಲ ಎಂದ ಖರ್ಗೆ! ರಾಹುಲ್ ಗಾಂಧಿ ಎದುರು ಕೈ ನಾಯಕರ ಒಗ್ಗಟ್ಟಿನ ಮಂತ್ರ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕ ರಾಜ್ಯ ಕಾಂಗ್ರೆಸ್​ನ ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿ, ಚುನಾವಣೆಯಲ್ಲಿ 130 ರಿಂದ 140 ಸೀಟು ತರಬೇಕು ಎಂದು ಕೋಲಾರ ನೆಲದಲ್ಲಿ ಮಲ್ಲಿಕಾರ್ಜುನ ಖರ್ಗೆ ಖಡಕ್ ಸಂದೇಶ ನೀಡಿದ್ದಾರೆ.

  • News18 Kannada
  • 2-MIN READ
  • Last Updated :
  • Kolar, India
  • Share this:

ಕೋಲಾರ: ದೇಶದಲ್ಲಿ ಧೈರ್ಯದಿಂದ ಮಾತಾಡುವ ನಾಯಕ ಅಂದರೆ ರಾಹುಲ್ ಗಾಂಧಿ (Rahul Gandhi) ಮಾತ್ರ. ಬೇರೆ ಯಾರಿಗೂ ಅಂತಹ ಧೈರ್ಯ (Courage) ಇಲ್ಲ. ಹೋರಾಟ ಮಾಡದೇ ಉಳಿಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ (Democracy) ಉಳಿಯಬೇಕು ಅಂದರೆ ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರಬೇಕು. ಆದರೆ ನನಗೆ ಮುಖ್ಯಮಂತ್ರಿ ಸ್ಥಾನ (Chief Minister) ಬೇಕಾಗಿಲ್ಲ, ನೀವೇ ಯಾರಾದರೂ ಸಿಎಂ ಆಗಿ. ಆದರೆ ನನಗೆ ಇಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು ವೇದಿಕೆ ಮೇಲಿರುವ ಮುಖಂಡರಿಗೂ ನಾನು ಈ ಮಾತನ್ನು ಹೇಳಿದ್ದೇನೆ ಎಂದು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಹೇಳಿದ್ದಾರೆ. ಇದರೊಂದಿಗೆ ಖರ್ಗೆ ಸಿಎಂ ಆದರೆ ನಾನು ರೇಸ್​​ನಿಂದ ದೂರ ಉಳಿಯುತ್ತೇನೆ ಎಂಬ ಡಿಕೆ ಶಿವಕುಮಾರ್ (DK Shivakumar) ಮಾತಿಗೆ ವೇದಿಕೆ ಮೇಲೆಯೇ ಉತ್ತರ ನೀಡಿ, ರಾಜ್ಯದ ಎಲ್ಲ ನಾಯಕರು ಒಟ್ಟಾಗಿ ಜನರ ಮುಂದೇ ಹೋಗಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.



ಮೋದಿ ಸರ್ಕಾರದ ಬಗ್ಗೆ ಜನತೆ ಬೇಸತ್ತಿದ್ದಾರೆ




ಕೋಲಾರದಲ್ಲಿ ನಡೆಯುತ್ತಿರುವ ಜೈ ಭಾರತ್​ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಕೋಲಾರ ಜಿಲ್ಲೆ ಒಂದು ಬಂಗಾರದ ಜಿಲ್ಲೆ. ಇಡೀ ದೇಶದಲ್ಲಿರುವ ಮೂರು ಬಂಗಾರದ ಕುಡಿಗಳು. ಕೋಲಾರ, ರಾಯಚೂರು, ತುಮಕೂರಲ್ಲಿ ಬಂಗಾರ ಜಾಸ್ತಿ ಇರೋದು. ಮೋದಿ ಸರ್ಕಾರದ ಬಗ್ಗೆ ಜನತೆ ಬೇಸತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ 40 ಪರ್ಸೆಂಟ್ ಬಿಜೆಪಿ ಸರ್ಕಾರದ ಮೇಲೆ ಬೇಸತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇಲ್ಲಿಗೆ ಏನು ಕೊಟ್ಟಿದೆ ಎಂದು ಪ್ರಶ್ನಿಸಿದರು.







ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಬೇಕು



ರಾಹುಲ್​ ಗಾಂಧಿ ಅವರು ಮಾತ್ರ ಧೈರ್ಯದಿಂದ ಮಾತಾಡುವ ನಾಯಕ, ಬೇರೆ ಯಾರಿಗೂ ಅಂತಹ ಧೈರ್ಯ ಇಲ್ಲ. ಹೋರಾಟ ಮಾಡದೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಉಳಿಬೇಕು ಅಂದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನೀವೇ ಯಾರಾದರೂ ಸಿಎಂ ಆಗಿ, ನನಗೆ ಚೀಫ್ ಮಿನಿಸ್ಟರ್ ಪದವಿ ಬೇಕಾಗಿಲ್ಲ. ಆದರೆ ನನಗೆ ಇಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು. ಈ ಮಾತನ್ನು ವೇದಿಕೆ ಮೇಲಿರುವ ನಾಯಕರಿಗೆ ಸ್ಪಷ್ಟವಾಗಿ ಹೇಳಿದ್ದೇನೆ.








ಕಾಂಗ್ರೆಸ್​ ನಾಯಕರ ಒಳಜಗಳಕ್ಕೆ ಖರ್ಗೆ ಖಡಕ್​ ವಾರ್ನಿಂಗ್​



ಜನ ಆರಿಸಿ ಕಳುಹಿಸ್ತಾರೆ, ಶಾಸಕರು ಹೇಳಿದವರು ಮುಖ್ಯಮಂತ್ರಿ ಆಗ್ತಾರೆ, ಎರಡು ಕೈ ಕೂಡಿದರೆ ಮಾತ್ರ ಚಪ್ಪಾಳೆ. ನೀವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, 130 ರಿಂದ 140 ಸೀಟು ತರಬೇಕು ಎಂದು ಕೋಲಾರ ನೆಲದಲ್ಲಿ ಖರ್ಗೆ ಖಡಕ್ ಸಂದೇಶ ನೀಡಿದ್ದಾರೆ. ಕೋಲಾರ ಕಾಂಗ್ರೆಸ್ ನಲ್ಲಿ ರಮೇಶ್ ಕುಮಾರ್, ಕೆಎಚ್ ಮುನಿಯಪ್ಪ ನಡುವೆ ಒಳ ಜಗಳ ಜೋರಾಗಿದ್ದು, ಈ ಹಿನ್ನೆಲೆ ಇಬ್ಬರಿಗೂ ಸೇರಿ ಡಿಕೆ ಶಿವಕುಮಾರ್​, ಸಿದ್ದರಾಮಯ್ಯಗೆ ಮತ್ತೊಮ್ಮೆ ಖಡಕ್ ಸಂದೇಶ ಕೊಟ್ಟಿದ್ದಾರೆ.

First published: