ಬೆಂಗಳೂರು: ಬಿಜೆಪಿ (BJP) ದಿಗ್ಗಜರ ಅಬ್ಬರಕ್ಕೆ ಕಾಂಗ್ರೆಸ್ (Congress) ಮಹಾನಾಯಕರು ತಬ್ಬಿಬ್ಬಾದ್ರಾ? ಇಂಥದ್ದೊಂದು ಪ್ರಶ್ನೆ ರಾಜಕೀಯ (Politics) ವಲಯದಲ್ಲಿ ಮತ್ತೆ ಚರ್ಚೆಗೆ ಬಂದಿದೆ. ಸಿದ್ದರಾಮಯ್ಯ (Siddaramaiah) ಮತ್ತು ಮಲ್ಲಿಕಾರ್ಜುನ ಖರ್ಗೆ (Mallikarjun Kharge ) ಅವರನ್ನು ತವರು ಜಿಲ್ಲೆಯಲ್ಲೇ ಲಾಕ್ ಮಾಡಿ ಕಮಲ ಕಲಿಗಳು ಊರೂರು ರೌಂಡ್ಸ್ ಹಾಕುತ್ತಿದ್ದಾರೆ. ಹೌದು, ಕರ್ನಾಟಕದಲ್ಲಿ (Karnataka) ಬಿಜೆಪಿ ಅಧಿಕಾರ ಹಿಡಿಯಬೇಕು ಎಂದರೆ ಸಿದ್ದರಾಮಯ್ಯ ಮತ್ತು ಖರ್ಗೆಗೆ ಮೂಗುದಾರ ಹಾಕಬೇಕು ಅನ್ನೋದು ಮೋದಿ (Modi), ಶಾ ಪ್ಲಾನ್ ಆಗಿತ್ತು. ಬಿಜೆಪಿ ಹೈಕಮಾಂಡ್ ತಂತ್ರ ಫಲ ಕೊಟ್ಟಿದೆ.
ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಸಮಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ವರುಣಾ ಬಿಟ್ಟು ಕದಲುತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ 2-3 ದಿನದಿಂದ ಕಲಬುರಗಿ ಸುತ್ತಾಮುತ್ತ ಪ್ರಚಾರ ಮಾಡುತ್ತಿದ್ದಾರೆ ಹೊರತು ರಾಜ್ಯ ಸುತ್ತುತ್ತಿಲ್ಲ.
ಸಿದ್ದರಾಮಯ್ಯ ಕಟ್ಟಿಹಾಕಲು ಅಂತನೇ ಮೋದಿ-ಅಮಿತ್ ಶಾ ಅವರು, ಸಚಿವ ಸೋಮಣ್ಣ ಅವರನ್ನ ವರುಣಾದಲ್ಲಿ ಕಣಕ್ಕಿಳಿಸಿದ್ದರು. ಖರ್ಗೆಯನ್ನ ಕಟ್ಟಿಹಾಕಲು ಅಂತನೇ ಕಲಬುರಗಿಗೆ ಮೋದಿ, ಅಮಿತ್ ಶಾ ಸೇರಿದಂತೆ ಜೆಪಿ ನಡ್ಡಾ ಲಗ್ಗೆ ಇಟ್ಟಿದ್ದರು.
ಬಿಜೆಪಿ ದಿಗ್ಗಜರ ಅಬ್ಬರ ನೋಡಿ ಮತದಾರರು ಕೈಕೊಟ್ಟರೆ ಕಷ್ಟ ಅಂತ ಸಿದ್ದರಾಮಯ್ಯ, ಖರ್ಗೆ ತವರು ಜಿಲ್ಲೆ ಬಿಟ್ಟು ಹೋಗುತ್ತಿಲ್ಲ ಎನ್ನಲಾಗಿದೆ. ಖರ್ಗೆ, ಪ್ರಿಯಾಂಕಾ ವಾದ್ರಾ, ರಾಹುಲ್ಗಾಂಧಿ ರೋಡ್ ಶೋ ನಡೆಸಿದರೆ, ಸಿದ್ದರಾಮಯ್ಯ ಶಿವಣ್ಣ, ರಮ್ಯಾ ಜೊತೆ ನಿನ್ನೆ ಇಡೀ ದಿನ ಕ್ಷೇತ್ರದಲ್ಲಿ ಕ್ಯಾಂಪೇನ್ ಮಾಡಿದ್ದಾರೆ.
ವರುಣಾದಲ್ಲಿ ಸ್ಟಾರ್ಸ್ ಪ್ರಚಾರ
ವರುಣಾದಲ್ಲಿ ಸ್ಟಾರ್ಗಳ ಅಬ್ಬರದ ಜೊತೆ ವಿವಾದದ ಕಿಚ್ಚು ವ್ಯಾಪಕವಾಗಿ ಆವರಿಸುತ್ತಿದೆ. ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ದ ನಟ ಶಿವರಾಜ್ಕುಮಾರ್ ನಡೆಗೆ ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಅಪ್ಪು ಹೆಸರಲ್ಲಿ ಸೋಮಣ್ಣ ಆಸ್ಪತ್ರೆ ಕಟ್ಟಿದ್ದನ್ನ ರಾಘಣ್ಣ ಶ್ಲಾಘಿಸಿದ್ದರು. ಆದರೆ ಶಿವಣ್ಣ ಸಿದ್ರಾಮಣ್ಣ ಪರ ಪ್ರಚಾರ ಮಾಡುತ್ತಿದ್ದಾರೆ ಅಂದಿದ್ದರು.
ಇಂದು ತಮ್ಮ ಮಾತನ್ನ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ. ಪ್ರತಾಪ್ ಸಿಂಹ ಮಾತಿಗೆ ಪ್ರತಿಕ್ರಿಯಿಸಿದ ಶಿವರಾಜ್ಕುಮಾರ್, ಸೋಮಣ್ಣ, ಪ್ರತಾಪ್ ಸಿಂಹ ನಮಗೆ ಒಳ್ಳೆಯ ಆಪ್ತರು. ಬಿಜೆಪಿಯವರು ನನ್ನನ್ನ ಸಂಪರ್ಕಿಸಿಲ್ಲ. ಅದಕ್ಕೆ ಪ್ರಚಾರಕ್ಕೆ ಹೋಗಿಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ