ಕೊಪ್ಪಳ: ಬಜರಂಗ ದಳ (Bajrang Dal) ಹಾಗೂ ಪಿಎಫ್ಐ (PFI) ನಿಷೇಧದಿಂದ ಏನು ಲಾಭ? ನಿಷೇಧ ಮಾಡುವುದು ಪರಿಹಾರವಲ್ಲ. ಬಜರಂಗದಲ್ಲಿ ಹಿಂದುಳಿದ ವರ್ಗಗಳ ಮಕ್ಕಳನ್ನು ಭಾವಾತ್ಮಕ ಮೆದುಳಿಗೆ ತುರಕಿ, ಅವರ ಮುಖಾಂತರ ಚಟುವಟಿಕೆ ಮಾಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿಕೊಳ್ಳುವಂಥದ್ದೇನು ಅಲ್ಲ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್ಡಿಕೆ, ಚುನಾವಣೆಯ ಅಂತಿಮ ದಿನದತ್ತ ಹೋಗುತ್ತಿದ್ದೇವೆ. ಎರಡೂ ರಾಷ್ಟ್ರೀಯ ಪಕ್ಷಗಳು (National Parties) ಈಗ ಆತ್ಮೀಯತೆ ಕಾಣುತ್ತೆ. ಕರ್ನಾಟಕ (Karnataka) ಸಂಕಷ್ಟದಲ್ಲಿದ್ದಾಗ ಬಂದಿದ್ದರೆ ವಿಶ್ವಾಸ ಮೂಡುತ್ತಿತ್ತು, ಪಿಎಂ ಈಗ ಜನಕ್ಕೆ ಕೈ ಬಿಸಿ ಹೋಗುತ್ತಾರೆ. ರೋಡ್ ಶೋನಲ್ಲಿ ಜನ ಹಾಗೂ ಅವರ ಮುಖಂಡರ ಮಧ್ಯೆ ಎಷ್ಟು ಸಹಕಾರ ಗೊತ್ತಿಲ್ಲ. ಆದರೆ ಮೋದಿಯವರ ಚಾರ್ಮ್ ಈಗ ಕಡಿಮೆಯಾಗಿದೆ ಎಂದು ಹೇಳಿದರು.
9 ವರ್ಷವಾಯಿತು ಈಗ ಬದಲಾಗಿದೆ, ಬಿಜೆಪಿಯವರಿಗೆ ಬೊಮ್ಮಾಯಿ ಮುಖವಿಲ್ಲ. ಆದರೆ ಮೋದಿ ಮುಖ ತೋರಿಸುತ್ತಾರೆ. ಹಳೆಯ ಮೈಸೂರು ಭಾಗದಲ್ಲಿ ಈ ಬಾರಿ 10 ಜನ ಆಯ್ಕೆಯಾಗುವುದಿಲ್ಲ. ಅವರು ಅಧಿಕಾರ ಅಮೃತ ಆಚರಣೆ ಮಾಡಲು ಹೊರಟಿದ್ದಾರೆ. ಕಲ್ಯಾಣ ಕರ್ನಾಟಕವನ್ನು ವಿರೋಧ ಪಕ್ಷದ ಮರೆತಿದ್ದಾರೆ ಎಂದು ಬಿಜೆಪಿ ಹೇಳಿದೆ. ಕಲ್ಯಾಣ ಕರ್ನಾಟಕಕ್ಕೆ ಏನು ಯೋಜನೆ ಕೊಟ್ಟಿದ್ದಾರೆ. ಕೃಷ್ಣಾ ನ್ಯಾಯಾಧಿಕರಣ ತೀರ್ಪು ಬಂದು 10 ವರ್ಷವಾಯಿತು. ಈ ಅವಧಿಯಲ್ಲಿ ಎರಡೂ ಪಕ್ಷಗಳು ಏನು ಮಾಡಿದ್ಧಾರೆ ಎಂದರು ಎಚ್ಡಿಕೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Shashikala Jolle: 3ನೇ ಬಾರಿಯೂ ನಿಪ್ಪಾಣಿ ಜನ ಶಶಿಕಲಾ ಜೊಲ್ಲೆಯ ಕೈ ಹಿಡೀತಾರಾ?ಸಚಿವೆಯ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ
ಜೆಡಿಎಸ್ ನ ಬಾಲ ಹಿಡಿದುಕೊಂಡು ಹೋಗುತ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಆದರೆ ಅವರು ಯಾಕೆ ಸೋತ ಎತ್ತಿದವರ ಬಾಲ ಹಿಡುತ್ತಾರೆ. ರಾಯಚೂರು ಜಿಲ್ಲೆಯ ಶಾಸಕರು ಮನೆ ಕಟ್ಟದೆ ಹಣ ಎತ್ತಿದ್ದಾರೆ, ನಮ್ಮ ಸರಕಾರ ಬರಲಿ ನೋಡೋಣಾ ಉತ್ತರ ಕರ್ನಾಟಕದಲ್ಲಿ 30-35 ಜನರ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ