ಶಿವಮೊಗ್ಗ: ಇಂದು ಶಿವಮೊಗ್ಗ (Shivamogga) ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜನೆ ಮಾಡಿದ್ದ ಪ್ರೆಸ್ ಟ್ರಸ್ಟ್ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಈಶ್ವರಪ್ಪ (KS Eshwarappa) ಭಾಗಿಯಾಗಿದ್ದರು. ಈ ವೇಳೆ ತಮ್ಮ ರಾಜಕೀಯ ಹಾದಿಯನ್ನು ತೆರೆದಿಟ್ಟ ಈಶ್ವರಪ್ಪ ಅವರು, ಚುನಾವಣೆ (Election) ನಿಲ್ಲುವ ಆಸೆ ಇರಲಿಲ್ಲ, ಗೆಲ್ಲುವ ವಿಶ್ವಾಸವೂ ಇರಲಿಲ್ಲ. ಆದರೆ ಮುಖಂಡರ ಸೂಚನೆಯಂತೆ ನಿಲ್ಲಬೇಕಾಯಿತು. ಆದರೆ ಮೊದಲ ಚುನಾವಣೆಯಲ್ಲೇ ಗೆದ್ದೆ, ಅಲ್ಲಿಂದ ಇಲ್ಲಿಯವರೆಗೆ ಹಿರಿಯರ ಸೂಚನೆ ಪಾಲಿಸಿಕೊಂಡು ಬಂದಿದ್ದೇನೆ. ಮುಖಂಡರ ಆಜ್ಞೆಯಂತೆ ದೇವೇಗೌಡರ (HD Devegowda) ವಿರುದ್ಧವೂ ನಿಂತಿದ್ದೆ. ಆದರೆ ಜಗದೀಶ್ ಶೆಟ್ಟರ್ (Jagadish Shettar) ಮುನಿಸು ಕಸಿವಿಸಿ ಆಯ್ತು. ಹೀಗಾಗಿ ಅವರಿಗೆ ಬಹಿರಂಗ ಪತ್ರ ಬರೆದೆ. ಸಂಘ ಪರಿವಾರದ ಹಿರಿಯರೂ ಮನೆಗೆ ಬಂದು ಶ್ಲಾಘಿಸಿದರು, ನಿನ್ನೆ ಸ್ವತಃ ಪ್ರಧಾನಿ ಮೋದಿ (PM Modi) ಕರೆ ಮಾಡಿ ಅಭಿನಂದಿಸಿದರು. ಇದು ಬಿಜೆಪಿ ಸಂಸ್ಕೃತಿ ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಹಿಂದುಳಿದವರ ಸಂಘಟನೆಗಾಗಿ ರಾಯಣ್ಣ ಬ್ರಿಗೇಡ್ ಮಾಡಿದ್ದೆ. ಅದು ಕೂಡ ರಾಜಕೀಯೇತರ ಸಂಘಟನೆಯಾಗಿತ್ತು. ಯಡಿಯೂರಪ್ಪ ಎಂದೂ ಜಾತಿ ಪರ ಮಾಡಿಲ್ಲ, ಅವರು ಎಂದಿಗೂ ಜಾತಿವಾದಿಯಾಗಿಲ್ಲ. ನರೇಂದ್ರ ಮೋದಿ ನೀತಿಯೇ ಯಡಿಯೂರಪ್ಪ ಅವರದ್ದು, ಎಲ್ಲಾ ಧರ್ಮದವರು ಒಟ್ಟಾಗಿ ಹೋಗಬೇಕು ಅನ್ನೋದು ಮೋದಿ ಪಾಲಿಸಿ. ಅದನ್ನೇ ಯಡಿಯೂರಪ್ಪ ಪಾಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಹಿಂದೆ ಕಾಂಗ್ರೆಸ್ ಬಲಿಷ್ಠ ಪಕ್ಷವಾಗಿತ್ತು, ಕಾಂಗ್ರೆಸ್ ನಿಂದ ಯಾರು ನಿಂತರೂ ಗೆಲ್ಲುತ್ತಿದ್ದರು. ಬಿಜೆಪಿಯಲ್ಲಿ ಸ್ಪರ್ಧಿಸಲೂ ಅಭ್ಯರ್ಥಿ ಹುಡುಕಬೇಕಿತ್ತು. ಅಧಿಕಾರ ದಾಹದಿಂದಲೇ ಆಪರೇಷನ್ ಕಮಲ ಆಗಿದ್ದು, ನಮ್ಮ ಪಾರ್ಟಿಗೆ ಬರುತ್ತೇವೆ ಅನ್ನುವವರಿಗೆ ಬೇಡ ಅನ್ನಲಿಕ್ಕೆ ಆಗುತ್ತೇ. ನಾವಾಗಿ ಯಾರನ್ನೂ ಕರೆದಿರಲಿಲ್ಲ, ಅವರಾಗೇ ರಾಜೀನಾಮೆ ನೀಡಿ ನಮ್ಮ ಪಕ್ಷಕ್ಕೆ ಬಂದರು. ಆಮೇಲೆ ಅವರನ್ನು ಗೆಲ್ಲಿಸಿದ್ದೇವು. ಮೋದಿ ಬಂದರೆ ಗಲಭೆ ಆಗುತ್ತೆ ಅಂತ ಬೊಬ್ಬೆ ಹೊಡೆದರು. ಆದರೆ ಇಡೀ ಜಗತ್ತು ಮೋದಿ, ಭಾರತದ ಜೊತೆಗಿದೆ ಎಂದರು.
ಟೀಕೆಗೆ ನಾನು ಜಗ್ಗಲ್ಲ, ಬಗ್ಗಲ್ಲ
ಹಿರಿಯರು ನನ್ನ ಸೊಸೆಗೆ ಸ್ಪರ್ಧಿಸುವಂತೆ ಹೇಳಿದ್ದರು. ಆದರೆ ನಾನು ಬೇಡ ಅಂದೆ, ನಮ್ಮ ಪಕ್ಷ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಬಾರಿ ಹಲವು ಮಹಿಳೆಯರಿಗೆ ಅವಕಾಶ ನೀಡಿದೆ. ನನ್ನ ವೈಯಕ್ತಿಕ ತೀರ್ಮಾನ ಬೇರೆ ಇರಬಹುದು. ಆದರೆ ಹಿರಿಯರ ಸೂಚನೆ ಪಾಲಿಸಲೇ ಬೇಕು ಎಂದರು.
ಅಲ್ಲದೆ, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಟೀಕೆಗೆ ನಾನು ಜಗ್ಗಲ್ಲ, ಬಗ್ಗಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ನಾವು ಜೈಲಿಗೆ ಹಾಕುತ್ತೇವೆ. ಎಲ್ಲಾದಕ್ಕೂ ಸಮಯ ಬರಬೇಕು. ಎಲ್ಲಾವನ್ನು ಒಂದೇ ಸಲ ಮಾಡಲು ಆಗಲ್ಲ. ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ನಲ್ಲಿ ಹಗರಣ ಪಡೆದಿದ್ದಾರೆ ಎಂದು ನ್ಯಾಯಮೂರ್ತಿ ಕೆಂಪಣ್ಣ ನವರು ವರದಿ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಈಗ ಬೇಲ್ ನಲ್ಲಿ ಇದ್ದಾರೆ. ಅವರು ಯಾವಾಗ ಒಳಗೆ ಹೋಗ್ತಾರೆ ಗೂತ್ತಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ