• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Shivakumar: 1214 ಕೋಟಿ ರೂಪಾಯಿ ಆಸ್ತಿ ಒಡೆಯ ಡಿಕೆಶಿ, ಪತ್ನಿ ಹೆಸರಲ್ಲಿ ಇದೆ ಕೆಜಿಗಟ್ಟಲೆ ಬಂಗಾರ!

DK Shivakumar: 1214 ಕೋಟಿ ರೂಪಾಯಿ ಆಸ್ತಿ ಒಡೆಯ ಡಿಕೆಶಿ, ಪತ್ನಿ ಹೆಸರಲ್ಲಿ ಇದೆ ಕೆಜಿಗಟ್ಟಲೆ ಬಂಗಾರ!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್ ಹೆಸರಿನಲ್ಲಿ 226 ಕೋಟಿ ರೂಪಾಯಿ ಸಾಲ, ಪತ್ನಿ ಉಷಾ ಹೆಸರಿನಲ್ಲಿ 34 ಕೋಟಿ ರೂಪಾಯಿ ಸಾಲವಿದೆ.

  • News18 Kannada
  • 2-MIN READ
  • Last Updated :
  • Ramanagara, India
  • Share this:

ರಾಮನಗರ: ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)​ ಅವರು ಇಂದು ಕನಕಪುರ (Kanakapura) ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ (Congress) ಅಭ್ಯರ್ಥಿಯಾಗಿ ನಾಮಪತ್ರೆ ಸಲ್ಲಿಕೆ ಮಾಡಿದ್ದು, ಈ ವೇಳೆ ತಮ್ಮ ಆಸ್ತಿಯ ವಿವರಗಳನ್ನು ಘೋಷಣೆ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರ ಸ್ಥಿರಾಸ್ತಿ, ಚರಾಸ್ತಿ ಒಟ್ಟು ಮೌಲ್ಯ 1214 ಕೋಟಿ ರೂಪಾಯಿ ಇದ್ದು, ಪತ್ನಿ ಆಸ್ತಿ ಮೌಲ್ಯ 153.30 ಕೋಟಿ ರೂಪಾಯಿ ಹಾಗೂ ಅವಿಭಜಿತ ಕುಟುಂಬದ (Family) ಆಸ್ತಿ 61 ಕೋಟಿ ರೂಪಾಯಿ ಇದೆ. ಡಿಕೆ ಶಿವಕುಮಾರ್ ಅವರು ಎಂಎ ಪದವೀಧರರಾಗಿದ್ದು, ಒಟ್ಟು 226 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾರೆ. ಡಿಕೆ ಶಿವಕುಮಾರ್ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಎಷ್ಟೆಲ್ಲಾ ಆಸ್ತಿ, ಚಿನ್ನ ಇದೇ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.


ಡಿಕೆ ಶಿವಕುಮಾರ್​ ಹಾಗೂ ಕುಟುಂಬಸ್ಥರ ಆಸ್ತಿ ವಿವರ ಇಂತಿದೆ;


ಡಿಕೆ ಶಿವಕುಮಾರ್ ಹೆಸರಿನಲ್ಲಿ 244.93 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ , ಪತ್ನಿ ಉಷಾ ಹೆಸರಿನಲ್ಲಿ 20.30 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ, ಡಿಕೆ ಶಿವಕುಮಾರ್ ಪುತ್ರ ಆಕಾಶ್ ಹೆಸರಿನಲ್ಲಿ 12.99 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.


ಡಿಕೆ ಶಿವಕುಮಾರ್ ಹೆಸರಿನಲ್ಲಿ 970 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ, ಪತ್ನಿ ಉಷಾ ಹೆಸರಿನಲ್ಲಿ 113.38 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ, ಡಿಕೆ ಶಿವಕುಮಾರ್ ಪುತ್ರ ಆಕಾಶ್ ಹೆಸರಿನಲ್ಲಿ 54.33 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.


ಇದನ್ನೂ ಓದಿ: DK Shivakumar: ಸಿಎಂ ಆಗಲು ಪವರ್ ಫುಲ್ ದೇವಿಗೆ ಕೆಪಿಸಿಸಿ ಅಧ್ಯಕ್ಷರ ಹರಕೆ; ಹುಂಡಿಗೆ ಕಂತೆ ಕಂತೆ ಕಾಣಿಕೆ ಸುರಿದ ಡಿಕೆಶಿ


ಡಿಕೆ ಶಿವಕುಮಾರ್ ಹೆಸರಿನಲ್ಲಿ 226 ಕೋಟಿ ರೂಪಾಯಿ ಸಾಲ, ಪತ್ನಿ ಉಷಾ ಹೆಸರಿನಲ್ಲಿ 34 ಕೋಟಿ ರೂಪಾಯಿ ಸಾಲವಿದೆ. ಉಳಿದಂತೆ ಡಿಕೆ ಶಿವಕುಮಾರ್ ಹೆಸರಿನಲ್ಲಿ ಒಟ್ಟು 1,214 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಪತ್ನಿ ಉಷಾ ಹೆಸರಿನಲ್ಲಿ 133 ಕೋಟಿ ರೂಪಾಯಿ ಮೌಲ್ಯ ಆಸ್ತಿ ಇದೆ. ಮಗ ಆಕಾಶ್ ಹೆಸರಿನಲ್ಲಿರುವ 66 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದ್ದು, 1,414 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಡಿಕೆಶಿ ಕುಟುಂಬ ಹೊಂದಿದೆ.


ಇನ್ನು, ಡಿಕೆ ಶಿವಕುಮಾರ್ ಬಳಿ 23 ಲಕ್ಷ ರೂಪಾಯಿ ಮೌಲ್ಯದ ಯೂಬ್ಲೇಟ್ ವಾಚ್, 9 ಲಕ್ಷ ರೂಪಾಯಿ ಮೌಲ್ಯದ ರೋಲೆಕ್ಸ್ ವಾಚ್ ಇದೆ. ಡಿಕೆ ಶಿವಕುಮಾರ್ ಅವರ ಕುಟುಂಬ ಕೃಷಿ, ಬಾಡಿಗೆ ಮತ್ತು ವಿವಿಧ ಕಂಪನಿಗಳಲ್ಲಿ ಶೇರು, ಉದ್ದಿಮೆಯಿಂದ ಆದಾಯವನ್ನು ಹೊಂದಿದೆ.




ಡಿಕೆ ಶಿವಕುಮಾರ್ ಅವರು 2.184 ಕೆ.ಜಿ ಚಿನ್ನ, 12.600 ಕೆಜಿ ಬೆಳ್ಳಿ, 1.066 ಕೆಜಿ ಚಿನ್ನಾಭರಣ, 324 ಗ್ರಾಂ ಡೈಮಂಡ್, 24 ಗ್ರಾಂ ರೂಬಿಗಳು, 195 ಗ್ರಾಂ ವಜ್ರ, 87 ಗ್ರಾಂ ರೂಬಿ ಹೊಂದಿದ್ದಾರೆ. ಡಿಕೆಶಿ ಅವರ ಪತ್ನಿ ಹೆಸರಿನಲ್ಲಿ 2.600 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿ, ಕುಟುಂಬದ ಆಸ್ತಿ 1 ಕೆ.ಜಿ ಚಿನ್ನ, 10 ಕೆ.ಜಿ ಬೆಳ್ಳಿ, ಮಗನ ಹೆಸರಿನಲ್ಲಿ 675 ಗ್ರಾಂ ಚಿನ್ನ, ಮಗಳ ಹೆಸರಿನಲ್ಲಿ 675 ಗ್ರಾಂ ಚಿನ್ನ ಹಾಗೂ ಅವಿಭಜಿತ ಕುಟುಂಬದ ಹೆಸರಿನಲ್ಲಿ 1 ಕೆಜಿ ಚಿನ್ನ, 10 ಕೆಜಿ ಬೆಳ್ಳಿ ಇದೆ.

top videos


    ಡಿಕೆ ಶಿವಕುಮಾರ್ ಅವರ ವಿರುದ್ಧ ನಾಲ್ಕು ಐಟಿ, ಲೋಕಾಯುಕ್ತ ಒಂದು, ಇ.ಡಿ 2, ಕೋವಿಡ್ ನಿಯಮಾವಳಿ ಸಂಬಂಧ 6 ಪ್ರಕರಣ ಸೇರಿದಂತೆ ಒಟ್ಟು 19 ಪ್ರಕರಣಗಳು ಇವೆ. ಡಿ.ಕೆ.ಶಿವಕುಮಾರ್ ವಾರ್ಷಿಕ 14.24 ಕೋಟಿ ರೂಪಾಯಿ, ಉಷಾ ಅವರು 1.90 ಕೋಟಿ ರೂಪಾಯಿ ಆದಾಯ ಹೊಂದಿದ್ದಾರೆ.

    First published: