ಬೆಂಗಳೂರು: ಹಿರಿತನ, ಅನುಭವ ಇಲ್ಲ ಅಂತಾ ನನಗೆ ಕಾಂಗ್ರೆಸ್ (Congress) ಪಕ್ಷದಲ್ಲಿ (Party) ಟಿಕೆಟ್ ಕೊಡಲಿಲ್ಲ. ಜನರ ಸೇವೆಗಾಗಿ ನಾನು, ಕೆಲಸ ಮಾಡುತ್ತೇನೆ. ಜನರಿನಲ್ಲಿ ನನಗೆ ಕೆಟ್ಟ ಹೆಸರು ತರಲು ಅವಮಾನ ಮಾಡಿದರು. ಮೂರರಿಂದ ಮೂರು ಸಾವಿರ ಮನೆಗಳಿಗೆ ಸಹಾಯ (Home) ಮಾಡಿದ್ದೇನೆ, ಆರ್ ವಿ ದೇವರಾಜ್ (RV Devaraj), ಗರುಡಾಚಾರ್ (Garudachar) ಅವಮಾನ ಮಾಡಿದ್ದರು. ಆದರೂ ಜನರ ಕಷ್ಟ ನೋಡಿ 3 ಸಾವಿರ ದಿಂದ 10 ಸಾವಿರ ಮನೆ ನಿರ್ಮಾಣ ಮಾಡಿದ್ದೇನೆ. 250 ಮನೆ ಮನೆಗಳು ಪೂರ್ಣಗೊಂಡಿವೆ, ಒಂದು ವರ್ಷದಿಂದ ನಾನು ಸೇವೆ ಮಾಡಿದ್ದೇನೆ. ಅಧಿಕೃತವಾಗಿ 1600 ಕೋಟಿ ರೂಪಾಯಿ ಆಸ್ತಿ ಡಿಕ್ಲೇರ್ ಮಾಡಿದ್ದೇನೆ. ಕ್ಷೇತ್ರದಿಂದ ನಾನು ಓಡಿ ಹೋಗುವುದಿಲ್ಲ, ಎಂಎಲ್ಎ ಗಳು ಮಾಡಬೇಕಾದ ಕೆಲಸ ನಾನು ಮಾಡುತ್ತಿದ್ದೇನೆ ಎಂದು ಚಿಕ್ಕಪೇಟೆ (Chickpet) ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು (KGF Babu) ಹೇಳಿದ್ದಾರೆ.
ಇದೇ ವೇಳೆ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಕೆಜಿಎಫ್ ಬಾಬು, ಎಂಎಲ್ಎಗಳು, ಬಿಲ್ಡರ್, ಡ್ಯಾನ್ಸ್ ಬಾರ್ ಗಳ ಸಂಪಾದನೆ ಎಷ್ಟಿದೆ ಗೊತ್ತಾ? 10 ಕೋಟಿ ರೂಪಾಯಿ ಸಂಪಾದನೆಯನ್ನು ಸಿಟಿಯಲ್ಲಿರುವ ಎಂಎಲ್ ಎ ಗಳು ಮಾಡುತ್ತಿದ್ದಾರೆ. ಬೇಡ ಎಂದರೂ 10-15 ಕೋಟಿ ಆಸ್ತಿ ಮಾಡುತ್ತಾರೆ. ನೀವು ಹೋಗಿ ಆಮಿಷಕ್ಕೆ ಬಲಿಯಾಗಿ ವೋಟು ಕೊಡುತ್ತೀರಿ ಎಂದರು. ಅಲ್ಲದೆ ಇದೇ ವೇಳೆ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಜನರಿಗೆ ತಾವು ಶಾಸಕರಾದರೆ ಏನೆಲ್ಲಾ ಕೆಲಸ ಮಾಡುತ್ತೇನೆ ಅಂತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ