ಬೆಂಗಳೂರು: ಮೈಸೂರಿನ (Mysuru) ವರುಣಾ (Varuna) ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ (Siddaramaiah) ಗೆಲುವಿಗೆ ರಣತಂತ್ರ ರೂಪಿಸಲಾಗಿದೆ ಎನ್ನಲಾಗಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಆಪ್ತ ಕಾಪು ಸಿದ್ದಲಿಂಗಸ್ವಾಮಿ (Kapu Siddalingaswamy) ಕಾಂಗ್ರೆಸ್ಗೆ (Congress) ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಎಲ್ಲದಕ್ಕೂ ಇದೀಗ ಕಾಪು ಸಿದ್ದಲಿಂಗಸ್ವಾಮಿ ತೆರೆ ಎಳೆಯಬೇಕಿದೆ. ನಾಳೆ ಅಥವಾ ನಾಡಿದ್ದು ಯಾವ ಪಕ್ಷದ ಪರ ಪ್ರಚಾರ ಮಾಡುತ್ತಾರೆ ಅನ್ನೋದರ ಮೇಲೆ ಕಾಪು ಸಸ್ಪೆನ್ಸ್ಗೆ ಉತ್ತರ ಸಿಗಲಿದೆ.
ಹೌದು, ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಸ್ಪಷ್ಟನೆ ನೀಡಿರುವ ಕಾಪು ಸಿದ್ದಲಿಂಗ ಸ್ವಾಮಿ, ಕಳೆದ ಮುವತ್ತು ವರ್ಷಗಳಿಂದ ನಾನು ಯಡಿಯೂರಪ್ಪ ಜೊತೆಗೆ ಇದ್ದೇನೆ. ನಾನು ಓರ್ವ ಬ್ಯಾಚುಲರ್ ಮನುಷ್ಯ, ತತ್ವ ಸಿದ್ದಾಂತಗಳ ಮೇಲೆ ನಂಬಿಕೆ ಇಟ್ಟಿರುವ ಮನುಷ್ಯ.
ಇದನ್ನೂ ಓದಿ: Geetha Shivarajkumar: 'ತೆನೆ' ಬಿಟ್ಟು 'ಕೈ' ಹಿಡಿತಾರೆ ಗೀತಾ ಶಿವರಾಜಕುಮಾರ್! ನಾಳೆ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
ಬಿಜೆಪಿಯ ಕೆಲಸಗಳನ್ನು ಅತ್ಯಂತ ಉತ್ಸಾಹದಿಂದ ಕೆಲಸ ಮಾಡುವವನು ನಾನು, ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಈ ಸಾರಿ ವರುಣಾದಲ್ಲಿ ಸೋಮಣ್ಣ ಗೆಲ್ಲಿಸಲು ಹಠ ತೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ, ನಾನು ಒಬ್ಬ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಸೋಮಣ್ಣ ಕೂಡ ವರುಣಾದಲ್ಲಿ ಒಳ್ಳೆಯ ಅಭ್ಯರ್ಥಿ ಆಗಿದ್ದಾರೆ. ನನ್ನ ಮೊದಲ ವೋಟ್ ಬಿಜೆಪಿಗೆ, ನನ್ನ ಕೊನೆಯ ವೋಟು ಬಿಜೆಪಿಗೆ. ನಾನು ಬದುಕಿರುವರೆಗೂ ಬಿಜೆಪಿ ಯಲ್ಲಿ ಇರುತ್ತೇನೆ.
ನಾನು ಸತ್ತರೂ ಬಿಜೆಪಿಯ ಶಾಲು ಹೊದಿಸಿಕೊಂಡು ಸಾಯುತ್ತೇನೆ. ನನ್ನ ಕತ್ತು ಸೀಳಿದರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಯಡಿಯೂರಪ್ಪ ಅವರೇ ನನಗೆ ಆರಾಧ್ಯ ದೇವ, ಅವರ ಫೋಟೋ ಹಿಡಿದು ನಾನು ಈ ಮಾತು ಹೇಳ್ತಿದ್ದೇನೆ. ಹೀಗಾಗಿ ಬಿಜೆಪಿ ಯಿಂದ ನನಗೆ ಯಾವುದೇ ಮೋಸ ಅನ್ಯಾಯ ಆಗಿಲ್ಲ. ನನ್ನ ಮನೆಯ ದೇವರು ಯಡಿಯೂರಪ್ಪ. ಹೀಗಾಗಿ ನಾನು ಬಿಜೆಪಿ ಬಿಡಲ್ಲ ಕಾಂಗ್ರೆಸ್ ಗೆ ಹೋಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಮಧ್ಯೆ, ಕಾಪು ಸಿದ್ದಲಿಂಗಸ್ವಾಮಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ರಾಯಚೂರಿನ ಮಾನ್ವಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಕಾಪು ಕಾಂಗ್ರೆಸ್ ಬಂದರೆ ಸ್ವಾಗತ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ