• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Jagadish Shettar -BS Yediyurappa: 'ಕೆಜೆಪಿ ಕಟ್ಟಿ ನೀವ್ಯಾಕೆ ಹೋಗಿದ್ರಿ, ಬಿಜೆಪಿ ಎಲ್ಲಾ ಕೊಟ್ಟಿದ್ರೆ ಯಾಕೆ ಬಿಟ್ಟಿದ್ರಿ'? ಬಿಎಸ್‌ವೈ ಹೇಳಿಕೆಗೆ ಶೆಟ್ಟರ್ ತಿರುಗೇಟು

Jagadish Shettar -BS Yediyurappa: 'ಕೆಜೆಪಿ ಕಟ್ಟಿ ನೀವ್ಯಾಕೆ ಹೋಗಿದ್ರಿ, ಬಿಜೆಪಿ ಎಲ್ಲಾ ಕೊಟ್ಟಿದ್ರೆ ಯಾಕೆ ಬಿಟ್ಟಿದ್ರಿ'? ಬಿಎಸ್‌ವೈ ಹೇಳಿಕೆಗೆ ಶೆಟ್ಟರ್ ತಿರುಗೇಟು

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್

ಚರ್ಚೆ ಮಾಡಿ ಕಾಂಗ್ರೆಸ್ ಹೋಗುವ ನಿರ್ಧಾರ ಮಾಡ್ತೀನಿ, ಆದರೆ ಚುನಾವಣೆ ಸ್ಪರ್ಧೆ ಮಾಡುವುದು ಖಚಿತ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜಗದೀಶ್​ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

  • Share this:

ಬೆಂಗಳೂರು: ಮಾಜಿ ಸಿಎಂ ಜಗದೀಶ್​ ಶೆಟ್ಟರ್ (Jagadish Shettar)​ ಅವರಿಗೆ ಬಿಜೆಪಿ (BJP) ಪಕ್ಷದ ನಾಯಕರು ಎಲ್ಲವನ್ನು ಕೊಟ್ಟಿದ್ದೇವೆ, ಅವರಿಗೆ ಏನು ಕಡಿಮೆ ಮಾಡಿದ್ದೀವಿ. ಇದು ಅಕ್ಷಮ್ಯ ಅಪರಾಧ ಎಂದು ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಅವರಿಗೆ ಶೆಟ್ಟರ್​ ಖಡಕ್​ ತಿರುಗೇಟು ನೀಡಿದ್ದಾರೆ. ಶಿರಸಿಯಲ್ಲಿ (Sirsi) ರಾಜೀನಾಮೆ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ ಜಗದೀಶ್​ ಶೆಟ್ಟರ್​ ಅವರು, ಯಡಿಯೂರಪ್ಪ ಹೇಳುತ್ತಾರೆ ನಾನು ಬಿಜೆಪಿಯಲ್ಲಿ ಇದ್ದು ಅಧಿಕಾರ ಅನುಭವಿಸಿ ಹೋದೆ ಅಂತಾ. ಆದರೆ ಅವರು ಕೆಜೆಪಿ (KJP) ಕಟ್ಟುವಾಗ ಅವರಿಗೆ ಏನಾಗಿತ್ತು? ಬಿಜೆಪಿಯಲ್ಲಿ ಎಲ್ಲವೂ ಅನುಭವಿಸಿಯೇ ಅವರು ಹೋಗಿದ್ದು ಅಲ್ವಾ ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.


ಕೆಜೆಪಿ ಕಟ್ಟುವಾಗ ಅವರಿಗೆ ಏನಾಗಿತ್ತು?


ಮಾಧ್ಯಮಗಳೊಂದಿಗೆ ಮಾತನಾಡಿದ ಶೆಟ್ಟರ್​ ಅವರು, ನನಗೆ ವಯಸ್ಸಾಗಿಲ್ಲ, ನನ್ನ ಬಗ್ಗೆ ಭ್ರಷ್ಟಾಚಾರ ಆರೋಪ ಇಲ್ಲ, ನಾನೇನು ತಪ್ಪು ಮಾಡಿದ್ದೇನೆ ಅಂತ ಟಿಕೆಟ್​ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದರೆ ಯಾರು ಉತ್ತರ ಕೊಡಲು ಸಿದ್ಧರಿಲ್ಲ. ನನಗೆ ಟಿಕೆಟ್ ಕೊಟ್ಟಿಲ್ಲ ಎಂಬ ಬಗ್ಗೆ ತೀರಾ ಅಸಮಾಧಾನ ಇದೆ. ಆ ಹಿನ್ನಲೆಯಲ್ಲಿ ಇವತ್ತು ರಾಜೀನಾಮೆ ಸಲ್ಲಿಸಿದ್ದೇನೆ. ಯಡಿಯೂರಪ್ಪ ಹೇಳುತ್ತಾರೆ ನಾನು ಬಿಜೆಪಿಯಲ್ಲಿ ಇದ್ದು ಅಧಿಕಾರ ಅನುಭವಿಸಿ ಹೋದೆ ಅಂತಾ. ಆದರೆ ಅವರು ಕೆಜೆಪಿ ಕಟ್ಟುವಾಗ ಅವರಿಗೆ ಏನಾಗಿತ್ತು? ಬಿಜೆಪಿಯಲ್ಲಿ ಎಲ್ಲವೂ ಅನುಭವಿಸಿಯೇ ಅವರು ಹೋಗಿದ್ದು ಅಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ.


ಬೆಂಬಲಿಗರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಈಗ ಹುಬ್ಬಳ್ಳಿಗೆ ತೆರಳಿ ಆಪ್ತರು, ಬೆಂಬಲಿಗರ ಜತೆ ಚರ್ಚೆ ಮಾಡುತ್ತೇನೆ. ಕಾಂಗ್ರೆಸ್ ಹೋಗುವ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಚರ್ಚೆ ಮಾಡಿ ಕಾಂಗ್ರೆಸ್ ಹೋಗುವ ನಿರ್ಧಾರ ಮಾಡ್ತೀನಿ ಆದರೆ ಚುನಾವಣೆ ಸ್ಪರ್ಧೆ ಮಾಡುವುದು ಖಚಿತ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.




ಇದನ್ನೂ ಓದಿ: Basavaraj Bommai: ಕಾಮನ್​ಮ್ಯಾನ್ ಸಿಎಂ ಬಳಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?


ನನಗೆ ರಾಜ್ಯಸಭಾ ಮೇಂಬರ್ ಮಾಡುತ್ತೇನೆ ಎಂದು ಹೇಳಿದರು. ಮುನೇನಕೊಪ್ಪ ಅವರಿಗೆ ಇನ್ನು ನಂಬಿಕೆ ಇರಬಹುದು. ಕಾಂಗ್ರೆಸ್​ ನಾಯಕರು ಬಂದಿರುವುದು ಸಹಜ, ಅವರಿಗೆ ಶೆಟ್ಟರ್ ಬಂದರೂ ಬರಲಿ ಎಂಬ ಆಸೆ ಇದೆ. ಆದರೆ ಸ್ಪೀಕರ್ ತೆರಳಿದ ಸಂದರ್ಭದಲ್ಲಿ ಅಮಿತ್ ಶಾ ನನ್ನ ಜೊತೆ ಕರೆ ಮಾತಾಡಿಲ್ಲ, ಕಾಗೇರಿ ನಮ್ಮದು ಹಳೇ ಸ್ನೇಹ. ಹಾಗಾಗಿ ಮನವೊಲಿಸಲು ಪ್ರಯತ್ನ ಮಾಡಿದರು ಅಷ್ಟೇ ಎಂದು ಸ್ಪಷ್ಟಪಡಿಸಿದರು.

First published: