• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Revanna: ಭವಾನಿಗೆ ಟಿಕೆಟ್ ತಪ್ಪಿದ್ದಕ್ಕೆ ಸಿಡಿಮಿಡಿಗೊಂಡ್ರಾ ರೇವಣ್ಣ? ಸ್ವರೂಪ್ ಬಗ್ಗೆ ಹೇಳಿದ್ದೇನು?

HD Revanna: ಭವಾನಿಗೆ ಟಿಕೆಟ್ ತಪ್ಪಿದ್ದಕ್ಕೆ ಸಿಡಿಮಿಡಿಗೊಂಡ್ರಾ ರೇವಣ್ಣ? ಸ್ವರೂಪ್ ಬಗ್ಗೆ ಹೇಳಿದ್ದೇನು?

ಹಾಸನ ಜೆಡಿಎಸ್​ ಅಭ್ಯರ್ಥಿ ಸ್ವರೂಪ್​​/ ಮಾಜಿ ಸಚಿವ ರೇವಣ್ಣ

ಹಾಸನ ಜೆಡಿಎಸ್​ ಅಭ್ಯರ್ಥಿ ಸ್ವರೂಪ್​​/ ಮಾಜಿ ಸಚಿವ ರೇವಣ್ಣ

ಸ್ವರೂಪ್ ಸಹೋದರರನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮಾಡಿದ್ದೀನಿ. ಆದರೆ ಹಾಸನ ಟಿಕೆಟ್ ಪಡೆದುಕೊಂಡ ಅಭ್ಯರ್ಥಿ 2 ತಿಂಗಳಿನಿಂದ ಎಷ್ಟು ನೋವು ಕೊಟ್ಟಿದ್ದಾರೆ ಅಂತ ನನಗೆ ಗೊತ್ತು ಎಂದು ಎಚ್​ಡಿ ರೇವಣ್ಣ ಹೇಳಿದ್ದಾರೆ.

  • Share this:

ಬೆಂಗಳೂರು: ಜೆಡಿಎಸ್​​ನಲ್ಲಿ (JDS) ಸಹೋದರರಿಗೆ ಸವಾಲು ಎನಿಸಿದ್ದ ಹಾಸನ (Hassan) ಕ್ಷೇತ್ರದ ಟಿಕೆಟ್​​ ಘೋಷಣೆ ಆಗಿದೆ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್​ ಎಂದಿದ್ದ ಕುಮಾರಸ್ವಾಮಿ (HD Kumaraswamy) ಕೊನೆಗೂ ಸ್ವರೂಪ್ ಪ್ರಕಾಶ್​ಗೆ (Swaroop Prakash) ಟಿಕೆಟ್​ ಘೋಷಣೆ ಮಾಡಿದ್ದಾರೆ. ಪಕ್ಕದಲ್ಲಿ ರೇವಣ್ಣನನ್ನು ಕೂರಿಸಿಕೊಂಡೇ ಟಿಕೆಟ್​ ಬಿಡುಗಡೆ ಆಗಿದೆ. ರೇವಣ್ಣ ಅವರ ಮೂಲಕವೇ ಹಾಸನ ಟಿಕೆಟ್​ಅನ್ನು ಕುಮಾರಸ್ವಾಮಿ ಘೋಷಣೆ ಮಾಡಿತ್ತು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ರೇವಣ್ಣ ಅವರು, ನನ್ನನ್ನು ಕುಮಾರಣ್ಣ ಅವರನ್ನು ಬೇರೆ ಮಾಡಲು ಆಗೋದಿಲ್ಲ. ಹಾಸನದಲ್ಲಿ ನಮ್ಮನ್ನೂ ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.


ಸ್ವರೂಪ್​ಗೆ ಟಿಕೆಟ್ ಘೋಷಣೆ


ಟಿಕೆಟ್ ಘೋಷಣೆ ಬಳಿಕ ಮಾತನಾಡಿದ ರೇವಣ್ಣ ಅವರು, ಹಾಸನ ಜಿಲ್ಲೆಯ ಚಿತ್ರೀಕರಣ 60 ವರ್ಷಗಳ ಕಾಲ ದೇವೇಗೌಡರಿಗೆ ತಿಳಿದಿದೆ. ನಾನು 6 ತಿಂಗಳಿನಿಂದ ಹಾಸನ ಟಿಕೆಟ್​ ದೇವೇಗೌಡರು, ಕುಮಾರಣ್ಣ, ಸಿಎಂ ಇಬ್ರಾಹಿಂ ಅವರು ಫೈನಲ್​ ಮಾಡುತ್ತಾರೆ ಅಂತ ಹೇಳಿದ್ದೆ. ಆದ್ದರಂತೆ ಸ್ವರೂಪ್​ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ನನ್ನನ್ನು ಕುಮಾರಣ್ಣ ಅವರನ್ನು ಬೇರೆ ಮಾಡಲು ಆಗೋದಿಲ್ಲ ಎಂದು ಎಚ್​​ಡಿ ರೇವಣ್ಣ ಟಿಕೆಟ್​ ಘೋಷಣೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ಇದನ್ನೂ ಓದಿ: Bavani Revanna: ಭವಾನಿಗೆ ಟಿಕೆಟ್ ಘೋಷಿಸದ ಎಚ್‌ಡಿಕೆ! ಅತ್ತಿಗೆ-ಮೈದುನನ ಕದನದಲ್ಲಿ ಗೆದ್ದಿದ್ದು ಯಾರು?


ದೇವೇಗೌಡರ ಆರೋಗ್ಯ ಮುಖ್ಯ ಎಂದ ರೇವಣ್ಣ


ಟಿಕೆಟ್​ ಘೋಷಣೆ ಬಳಿಕ ಮಾತನಾಡಿದ ರೇವಣ್ಣ ಅವರು, ನಮಗೆ ದೇವೇಗೌಡರ ಆರೋಗ್ಯ ಮುಖ್ಯ. ನನಗೆ ಮಾವನ ಆರೋಗ್ಯ ಮುಖ್ಯ ಎಂದು ಭವಾನಿ ಅವರು ಕೂಡ ಎರಡು ತಿಂಗಳ ಹಿಂದೆಯೇ ಹೇಳಿದ್ದಾರೆ. 50 ಸಾವಿರ ವೋಟ್​ನಲ್ಲಿ ಒಂದು ಮತ ಕಡಿಮೆಯಾದರೂ ರಾಜೀನಾಮೆ ನೀಡುತ್ತೇನೆ ಎಂದು ಎದುರಾಳಿ ಹೇಳಿದ್ದ. ಈ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಸರ್ಕಾರದಲ್ಲಿ 10 ಫೈಲ್​ಗಳಿಗೆ ಸಹಿ ಹಾಕಿಕೊಡುತ್ತಿದ್ದರು. ಆದ್ದರಿಂದ ಹಾಸನ ಕಾರ್ಯಕರ್ತರು ನನ್ನನ್ನು ಚುನಾವಣೆಗೆ ಕರೆದಿದ್ದರು ಎಂದು ರೇವಣ್ಣ ಹೇಳಿದ್ದಾರೆ.


ನನಗೆ ಯಾವುದೇ ಬೇಸರ ಇಲ್ಲ


ಹಾಸನದಲ್ಲಿ ಸ್ವರೂಪ್​ ಪರ 5 ವರ್ಷ ಕೆಲಸ ಮಾಡಿದ್ದೀನಿ. ಅವರ ಅಪ್ಪನ ಪರ 30 ವರ್ಷ ರಾಜಕೀಯ ಮಾಡಿದ್ದೀನಿ. ಸ್ವರೂಪ್ ಸಹೋದರರನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮಾಡಿದ್ದೀನಿ. ಆದರೆ ಹಾಸನ ಟಿಕೆಟ್ ಪಡೆದುಕೊಂಡ ಅಭ್ಯರ್ಥಿ 2 ತಿಂಗಳಿನಿಂದ ಎಷ್ಟು ನೋವು ಕೊಟ್ಟಿದ್ದಾರೆ ಅಂತ ನನಗೆ ಗೊತ್ತು.


ಆದರೆ ನನಗೆ ಯಾವುದೇ ಬೇಸರ ಇಲ್ಲ. ಸ್ವರೂಪ್ ಪರ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಕುಮಾರಣ್ಣ ಅವರು ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಆದ್ದರಿಂದ ಅವರೇ ನೋಡಿಕೊಳ್ಳುತ್ತಾರೆ. ಕಳೆದ ನಾಲ್ಕು ವರ್ಷದಿಂದ ಲೂಟಿ ಮಾಡಿದ್ದಾರೆ. ಹಾಸನದಲ್ಲಿ 7ಕ್ಕೆ ಏಳು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.

First published: