ಹಾಸನ: ನಿಂಬೆಹಣ್ಣು (Lemon) ವರ್ಕೌಟ್ ಆಗಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಅವರ ಹೆಸರು ಪ್ರಸ್ತಾಪ ಮಾಡದೆ ಹಾಸನದಲ್ಲಿ (Hassan) ಟಾಂಗ್ ಕೊಟ್ಟಿದ್ದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ (DK Suresh) ಹೇಳಿಕೆಗೆ ಮಾಜಿ ಸಚಿವರು ಟಾಂಗ್ ನೀಡಿದ್ದಾರೆ. ನಮ್ಮ ಬಳಿ ಯಾವುದೇ ನಿಂಬೆಹಣ್ಣು ಇಲ್ಲ. ಆದರೆ ನಮ್ಮ ಬಳಿ ಇರುವುದು ದೇವರ ಆರ್ಶೀವಾದ. ನಮಗೆ ಹೊಳೆನರಸೀಪುರದ (Holenarasipura) ಲಕ್ಷ್ಮೀ ನರಸಿಂಹ, ಈಶ್ವರ ಆರ್ಶೀವಾದ ಇದು. ಇವೆರಡು ಕಣ್ಣು ಬಿಟ್ಟರೆ ಎಲ್ಲರನ್ನೂ ಭಸ್ಮ ಮಾಡುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ನಿನ್ನೆ ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ್ದ ರೇವಣ್ಣ, ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಮ್ಮ ಗುರಿ ಮುಂಬರುವ ಚುನಾವಣೆಯಲ್ಲಿ ಹಾಸನದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿಗಳನ್ನು ಗೆಲ್ಲಿಸುವುದು ಒಂದೇ ಎಂದು ಡಿ.ಕೆ.ಸುರೇಶ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಕಾಂಗ್ರೆಸ್ ಅವರದ್ದು ಓಲ್ಡ್ ಬಸ್!
ಈ ಕುರಿತಂತೆ ಇಂದು ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ ಅವರು, ಅವರು ದೊಡ್ಡವರಿದ್ದಾರೆ, ಅವರದ್ದು ಅರವತ್ತು ವರ್ಷದ ಓಲ್ಡ್ ಬಸ್. ಅವರಿಗೆ ಭಗವಂತ ಒಳ್ಳೆಯದು ಮಾಡಲಿ. ಆ ಓಲ್ಡ್ ಬಸ್ ಎಲ್ಲೆಲ್ಲೋ ನಿಂತುಕೊಳ್ಳುವುದು ಬೇಡ. ಒಂದು ಹೊಸ ಬಸ್ ತಗೊಂಡು ಯಾರು ಯಾರು ಬೇಕೆ ಅವರನ್ನು ಕಾಂಗ್ರೆಸ್‌ಗೆ ಹತ್ತಿಸಿಕೊಂಡು ಓಡಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ದೇವರು ಕಣ್ಣು ಬಿಟ್ಟರೆ ಎಲ್ಲರನ್ನೂ ಭಸ್ಮ ಮಾಡುತ್ತೆ
ಅಲ್ಲದೆ, ಎರಡು ವರ್ಷದಿಂದ ಈ ಜಿಲ್ಲೆಯಲ್ಲಿ ಟೂರ್ ಮಾಡುತ್ತಿದ್ದಾರೆ. ಭಗವಂತ ಅವರಿಗೆ ಒಳ್ಳೆಯದು ಮಾಡ್ಲಪ್ಪ, ಅವರು ದೊಡ್ಡವರಿದ್ದಾರೆ. ನಮ್ಮ ಬಳಿ ಯಾವ ನಿಂಬೆಹಣ್ಣು ಇಲ್ಲ. ನಮಗೆ ಹೊಳೆನರಸೀಪುರದ ಲಕ್ಷ್ಮೀ ನರಸಿಂಹ, ಈಶ್ವರ ದೇವರ ಅವರ ಆರ್ಶೀವಾದ ಸಾಕು. ಇವೆರಡು ದೇವರು ಕಣ್ಣು ಬಿಟ್ಟರೆ ಎಲ್ಲರನ್ನೂ ಭಸ್ಮ ಮಾಡುತ್ತೆ.
ಲಕ್ಷ್ಮೀನರಸಿಂಹ ಸ್ವಾಮಿ ಅಂದರೆ ಏನ್ ಹುಡುಗಾಟ ಅಂತ ತಿಳಿದುಕೊಂಡಿದ್ದೀರಾ? ನಮ್ಮ ಬಳಿ ಎರಡು ದೇವರು ಇರೋವರೆಗೂ ಯಾರು ಏನು ಮಾಡಲು ಆಗಲ್ಲ. ಇವತ್ತೇನಾದರೂ ನಮಗೆ ರಾಜಕೀಯ ಶಕ್ತಿ ಕೊಟ್ಟಿದ್ದೆ, ಅದು ನಮ್ಮ ದೇವರು ಮಾವಿನಕೆರೆ ರಂಗನಾಥ, ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಜನರಿಂದ ಉಳ್ಕಂಡಿದ್ದೀವಿ ಎಂದು ಸ್ಪಷ್ಟಪಡಿಸಿದರು.
ಡಿಕೆ ಸುರೇಶ್ ಏನ್ ಹೇಳಿದ್ದರು?
ಹೊಳೆನರಸೀಪುರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಏನೇ ಕಷ್ಟ ಇದ್ದರೂ ಇಪ್ಪತ್ತೈದು, ಮೂವತ್ತು ವರ್ಷಗಳಿಂದ ಎಷ್ಟು ನೋವಾಗಳಾಗಿವೆ, ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಧ್ವನಿ ಎತ್ತಿದವರನ್ನು ಸದೆ ಬಡೆದು ಜೈಲಿಗೆ ಹಾಕುವ ಕೆಲಸಗಳಾಗಿವೆ.
ಇಷ್ಟೆಲ್ಲಾ ಆದರೂ ನಾನು ಕಾಂಗ್ರೆಸ್ ಪಕ್ಷ ಅಂಥ ಹೋರಾಟ ಮಾಡಿಕೊಂಡು ಬಂದಿದ್ದೀರಿ, ನಿಮಗೆ ಅನಂತ ಅನಂತ ಧನ್ಯವಾದಗಳು. ಹೊಳೆನರಸೀಪುರದಲ್ಲೂ ಕೂಡ ನಾವು ಗೆದ್ದೆ ಗೆಲ್ಲುತ್ತೇವೆ. ಈ ಬಾರಿ ಯಾವುದೇ ಮಾಟ-ಮಂತ್ರ, ನಿಂಬೆಹಣ್ಣು ವರ್ಕೌಟ್ ಆಗಲ್ಲ. ಆ ತಾಯಿ ನಿಮಿಷಾಂಬೆಗೆ ನಿಂಬೆಹಣ್ಣು ಅರ್ಪಿಸಿ ಬಿಡಿ, ನಿಂಬೆಹಣ್ಣು ಎಲ್ಲಾ ರಿವರ್ಸ್ ಆಗಬೇಕು, ವರ್ಕ್ ಆಗಬಾರದು ಎಂದಿದ್ದರು.
ಇದನ್ನೂ ಓದಿ: HD Reavanna: ಹಾಸನದಲ್ಲಿ ಸ್ಪರ್ಧೆ ಮಾಡ್ತಾರಾ ಎಚ್‌ಡಿ ರೇವಣ್ಣ? ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ
ನಿಂಬೆಹಣ್ಣಿಗೆ ರಿವರ್ಸ್ ಆಗಬೇಕು!
ಅದು ಯಾವ ರೀತಿ ರಿವರ್ಸ್ ಆಗಬೇಕು ಅಂದರೆ ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಆ ರೀತಿ. ನಮ್ಮವರೆಲ್ಲ ನಿಮಿಷಾಂಭ ದೇವಿ ಬಳಿ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದಾರೆ. ನಿಮ್ಮ ಜೊತೆ ಇಡೀ ಕಾಂಗ್ರೆಸ್ ಇರುತ್ತೆ, ಯಾರು ಹೆದರುವ ಅವಶ್ಯಕತೆ ಇಲ್ಲಾ, ನಿಮಗೆ ರಕ್ಷಣೆ ಕೊಡ್ತೇವೆ. ಹೊಳೆನರಸೀಪುರವನ್ನು ಕಾಂಗ್ರೆಸ್ ಪಕ್ಷಕ್ಕೆ ತೆಗೆದುಕೊಳ್ಳುವುದೇ ನಮ್ಮ ಗುರಿ. ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಇನ್ನೂ ಬದುಕಿದೆ. ಏಪ್ರಿಲ್, ಮೇನಲ್ಲಿ ನಡೆಯುವ ಚುನಾವಣೆಯಲ್ಲಿ ಒಂದು ಬದಲಾವಣೆ ಆಗಲೇಬೇಕು ಎಂದು ಕರೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ