ಮಂಡ್ಯ: ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಮಂಡ್ಯದಲ್ಲಿ (Mandya) ರಾಷ್ಟ್ರೀಯಾ ಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇಂದು ಕಾಲ ಭೈರವನ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಎಲ್ಲಾ ಪಕ್ಷಗಳಲ್ಲೂ ಮೋರ್ಚಾ ಇದೆ ಅದೇ ರೀತಿ ಬಿಜೆಪಿಯಲ್ಲಿ ಇ.ಡಿ (ED) ಮೋರ್ಚಾ, ಐಟಿ (IT) ಮೋರ್ಚಾ ಇದೆ. ಕಾಂಗ್ರೆಸ್ (Congress) ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿರುವುದು ತಪ್ಪಿಲ್ಲ ಬಿಡಿ, ಪ್ರಧಾನಿಯವರು ಚನ್ನಪಟ್ಟಣ್ಣಕ್ಕೆ ಬರಬಾರದು ಅಂತೇನಿಲ್ಲ ಅವರಿಗೆ ಸ್ವಾಗತ. ಇನ್ನು ಎರಡು ಸಲ ಬಂದು ಹೋಗಲಿ. ಯೋಗಿ ಆದಿತ್ಯನಾಥ್ (Yogi Adityanath) ಮಂಡ್ಯ ಜನರಿಗೆ ಏನ್ ಹೇಳಿದರೂ, ಏನು ಸಂದೇಶ ಕೊಟ್ಟರು. ಬುಲ್ಡೋಜರ್ ತಗೊಂಡ್ ಬರುತ್ತೇನರ ಅಂತಾ ಹೇಳಿದ್ರಾ? ಕರ್ನಾಟಕ (Karnataka) ಕರ್ನಾಟಕದೇ ಮಾಡಲ್, ಕರ್ನಾಟಕವೇ ದೇಶಕ್ಕೆ ಮಾಡಲ್ ನಮಗೆ. ಯುಪಿ ಮಾಡಲ್ ನಮಗೆ ಬೇಕಾಗಿಲ್ಲ. ಯುಪಿ ಮಾಡಲ್ ಬೇಕು ಅನ್ನೊರು ಹೋಗಲಿ ಉತ್ತರ ಪ್ರದೇಶಕ್ಕೆ ಹೋಗಲಿ ಎಂದರು.
ದೇಶದಲ್ಲಿ ಇಂತಹ ಮಹಾನ್ ನಾಯಕಿ ಉದ್ಭವ ಆಗಿರಲಿಲ್ಲ
ಇದೇ ವೇಳೆ ಮಂಡ್ಯ ಸಂಸದೆ ಸುಮಲತಾ ಅವರಿಗೂ ಟಾಂಗ್ ಕೊಟ್ಟ ಎಚ್ಡಿಕೆ, ಅವರು ಮಹಾನಾಯಕಿ. ಅವರ ಬಗ್ಗೆ ಮಾತನಾಡುವಷ್ಟು ನಾನು ಬೆಳೆದಿಲ್ಲ. ಅವರು ದೊಡ್ಡ ಪಕ್ಷದ ದೊಡ್ಡನಾಯಕಿ. ದೇಶದಲ್ಲಿ ಇಂತಹ ಮಹಾನ್ ನಾಯಕಿ ಉದ್ಭವ ಆಗಿರಲಿಲ್ಲ, ಈಗ ಆಗಿಬಿಟ್ಟಿದ್ದಾರೆ. ನಮ್ಮದು ಸಣ್ಣ ಪಕ್ಷ, ನಮಗೆ ಸಿಕ್ಕ ಅವಕಾಶದಲ್ಲಿ ರಾಜ್ಯದ ಜನರಿಗೆ ಕೈಲಾದ ಸೇವೆ ಮಾಡಿದ್ದೇವೆ. ಇಂದಿಗೂ ಒಂದು ಅವಕಾಶ ಸಿಗಲಿ ಎಂದು ಕಾಯುತ್ತಿದ್ದೇನೆ.
ಇದನ್ನೂ ಓದಿ: Bengaluru: ಕೈ ಮೇಲೆ ಭೀಮೇಶ್ ಎಂದು ಬರೆದುಕೊಂಡು 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಸಾವು
ಈಗಾಗಲೇ ಸಿಕ್ಕಿರುವ ಅವಕಾಶದಲ್ಲಿ ಸಾಲಮನ್ನಾ ಮಾಡಿದ್ದೇನೆ, ಮಕ್ಕಳಿಗೆ ಸೈಕಲ್ ಕೊಡುವ ವ್ಯವಸ್ಥೆ ಮಾಡಿದ್ದೇನೆ. ಭಾಗ್ಯ ಲಕ್ಷ್ಮಿ ಯೋಜನೆ ತಂದಿದ್ದೇನೆ. ಸರಾಯಿ, ಲಾಟರಿ ನಿಷೇಧ ಮಾಡಿದ್ದೇನೆ. ಆದರೆ ದುಡ್ಡು ಹೊಡೆಯುವ ಕೆಲಸ ಅಥವಾ ರಾಜ್ಯದ ತೆರಿಗೆ ಸಂಪತ್ತು ಲೂಟಿ ಮಾಡುವ ಕೆಲಸ ಮಾಡಿಲ್ಲ. ಅವರು ದೊಡ್ಡ ದೊಡ್ಡ ಪಕ್ಷದ ಮಹಾನ್ ನಾಯಕಿ, ಅವರ ಬಗ್ಗೆ ಮಾತನಾಡಿ ನನ್ನ ಗ್ರೇಡ್ ಜಾಸ್ತಿ ಮಾಡಿಕೊಳ್ಳುವುದು ಬೇಕಿಲ್ಲ. ಜನರು ಈಗ ಕೊಟ್ಟಿರುವ ಸ್ಥಾನವೇ ಸಾಕು. ನಾನು ಇಲ್ಲಿಯೇ ಇರುತ್ತೇನೆ ಎಂದು ವ್ಯಂಗ್ಯವಾಗಿ ಟಾಂಗ್ ಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ