ಬೆಂಗಳೂರು: ಜೆಡಿಎಸ್ (JDS) ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ (Family) ವರ್ಷಕ್ಕೆ ಐದು ಗ್ಯಾಸ್ ಸಿಲಿಂಡರ್ (Gas cylinder) ಉಚಿತವಾಗಿ ಕೊಡುತ್ತೇವೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಘೋಷಣೆ ಮಾಡಿದ್ದಾರೆ. ಪಂಚರತ್ನ ಯೋಜನೆ (Pancharatna Yojana) ಪ್ರತಿ ಕುಟುಂಬಗಳ ಬದುಕು ಅಂದರೆ ಯಾರಿಗೆ ಮನೆ ಇಲ್ಲ ಅವರಿಗೆ ಮನೆ ಕಟ್ಟಿಕೊಡುವುದು. ಮಕ್ಕಳಿಗೆ ಉಚಿತ ಶಿಕ್ಷಣ (Education), ಉಚಿತ ಆರೋಗ್ಯ (Health), ಉದ್ಯೋಗ (Job) ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ವರುಣಾ ಕ್ಷೇತ್ರದ ಸಮಾವೇಶದಲ್ಲಿ ಮಾತನಾಡಿದ ಅವರು, ಈಗಿನ ರಾಜಕಾರಣ ಹಿಂದಿನಂತೆ ಇಲ್ಲ. ಆದರೆ ಪಕ್ಷದಲ್ಲಿ ಕುಮಾರಣ್ಣ ನಮ್ಮನ್ನು ಗುರುತಿಸಲಿಲ್ಲ ಅಂತ ಅಸಮಾಧಾನ ಮಾಡಿಕೊಳ್ಳಬೇಡಿ. ನಿಮಗೆ ಸಿಗಬೇಕಾದ ಗೌರವವನ್ನು ಪಕ್ಷ ನೀಡುತ್ತೆ. ಸಣ್ಣ ಸಣ್ಣ ಕಾರಣಗಳಿಗೆ ಅಸಮಾಧಾನ ಮಾಡಿಕೊಳ್ಳದೇ ಪಕ್ಷದ ಪರ ಕೆಲಸ ಮಾಡಬೇಕಿದೆ ಎಂದು ಇದೇ ವೇಳೆ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಯಾರನ್ನೋ ಸೋಲಿಸಬೇಕೆಂದು ಅಭ್ಯರ್ಥಿ ಹಾಕಿಲ್ಲ
ವರುಣಾ ಕ್ಷೇತ್ರದ ಹಲವು ಕಡೆ ಬಂದಿದ್ದೇನೆ, ಬಡವರು ಇದ್ದಾರೆ. ಐದು ವರ್ಷ ಸಿಎಂ ಆಗಿದ್ದವರು, ಏನ್ ಮಾಡಿದ್ದಾರೆ. ನಾನು ಜಾತಿ- ಮಾಡದೆ ದಡದಕಲ್ಲಳ್ಳಿ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿದೆ. ಅವರು ಕೊಟ್ಟ ಊಟವನ್ನ ಸವಿದೆ, ಜಾತಿ ನೋಡಲಿಲ್ಲ. ಯಾರನ್ನೋ ಸೋಲಿಸಬೇಕೆಂದು ನಾನು ಭಾರತಿ ಶಂಕರ್ ಅಭ್ಯರ್ಥಿ ಮಾಡಿಲ್ಲ. ವರುಣಾ ಕ್ಷೇತ್ರದಲ್ಲೂ ಜೆಡಿಎಸ್ ಗೆಲ್ಲಬೇಕೆಂದು ಕಣಕ್ಕಿಳಿಸಿದ್ದೇವೆ. ಕಾಟಾಚಾರಕ್ಕೆ ಭಾರತಿ ಶಂಕರ್ ನಿಲ್ಲಿಸಿಲ್ಲ, ಇವತ್ತಿ ರಾಜಕಾರಣಕ್ಕೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು ಕಮಿಟಿ ಮಾಡಿ ಗೆಲುವು ಪಡೆಯುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ತುಮಕೂರಿನಲ್ಲಿ ಜೆಡಿಎಸ್ಗೆ ಶಫೀ ಅಹಮದ್ ಸೇರ್ಪಡೆ
ಇನ್ನು, ತುಮಕೂರು ನಗರದಲ್ಲಿ ಕಾಂಗ್ರೆಸ್ ಮುಖಂಡರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಮಾಜಿ ಸಿಎಂ ಯಶಸ್ವಿಯಾಗಿದ್ದು, ತುಮಕೂರು ನಗರದಲ್ಲಿ ಟಿಕೆಟ್ ಸಿಗದಿದ್ದಕ್ಕೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಫೀ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಶಫೀ ಅಹಮದ್ ಮುಸ್ಲಿಂ ಸಮುದಾಯದ ಪ್ರಭಾವಿ ಮುಖಂಡರಾಗಿದ್ದು, ಇಂದು ಎಚ್ಡಿಕೆ ಸಮ್ಮುಖದಲ್ಲಿ ತುಮಕೂರು ನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಭಾವುಟ ಹಿಡಿದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮುಳಬಾಗಿಲು ಜೆಡಿಎಸ್ ಅಭ್ಯರ್ಥಿಗೆ ಬಿಗ್ಶಾಕ್!
ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ಅವರಿಗೆ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಆಘಾತ ಎದುರಾಗಿದ್ದು, ಮಾಜಿ ಸಿಎಂ ಆಪ್ತರಾಗಿರುವ ಜೆಡಿಎಸ್ ಮುಖಂಡ ಆಲಂಗೂರು ಶಿವಣ್ಣ ಅವರು, ಕಾಂಗ್ರೆಸ್ ಅಭ್ಯರ್ಥಿ ಆದಿನಾರಾಯಣ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಇಂದು ಬೆಂಬಲಿಗರ ಸಭೆ ನಡೆಸಿದ ಅವರು, ಪಕ್ಷದಲ್ಲಿ ಆಲಂಗೂರು ಶ್ರೀನಿವಾಸ್ ಅವರ ಕುಟುಂಬವನ್ನ ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ