• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Kumaraswamy: 2-3 ತಿಂಗಳಿನಲ್ಲಿ ಹೊಸ ರಾಜಕೀಯ ಬದಲಾವಣೆ! ಕಾಂಗ್ರೆಸ್​ ಸರ್ಕಾರದ ಬಗ್ಗೆ ಎಚ್​​ಡಿಕೆ ಭವಿಷ್ಯ

HD Kumaraswamy: 2-3 ತಿಂಗಳಿನಲ್ಲಿ ಹೊಸ ರಾಜಕೀಯ ಬದಲಾವಣೆ! ಕಾಂಗ್ರೆಸ್​ ಸರ್ಕಾರದ ಬಗ್ಗೆ ಎಚ್​​ಡಿಕೆ ಭವಿಷ್ಯ

ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ

ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ

ಎರಡು ಮೂರು ತಿಂಗಳಲ್ಲಿ, ಅಕ್ಟೋಬರ್ ನವೆಂಬರ್ ಒಳಗೆ ಹೊಸ ರಾಜಕೀಯ ಬದಲಾವಣೆ ಆಗುತ್ತೆ ಎಂದು ಕಾಂಗ್ರೆಸ್ ಸರ್ಕಾರದ ಕುರಿತು ಎಚ್​ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

  • Share this:

ರಾಮನಗರ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಸ್ಪಷ್ಟ ಬಹುಮತ ಪಡೆದ ಐದು ದಿನಗಳ ಬಳಿಕ ಕಾಂಗ್ರೆಸ್ (Congress) ಹೈಕಮಾಂಡ್​, ಮುಖ್ಯಮಂತ್ರಿ (Chief Minister) ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಇದರ ನಡುವೆ ಹೊಸ ಬಾಂಬ್ ಸಿಡಿಸಿರುವ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ (HD Kumaraswamy) ಅವರು, ಕಾಂಗ್ರೆಸ್ ಸರ್ಕಾರ ಬಗ್ಗೆ ಹೊಸ ಭವಿಷ್ಯ ನುಡಿದಿದ್ದು, ಎರಡ್ಮೂರು ತಿಂಗಳಲ್ಲಿ ರಾಜಕೀಯ (Politics) ಬದಲಾವಣೆ ಆಗುತ್ತೆ. ಅಕ್ಟೋಬರ್ ನವೆಂಬರ್ ಒಳಗೆ ರಾಜಕೀಯ ಬದಲಾವಣೆಯಾಗುತ್ತೆ ಎಂದು ಹೇಳಿದ್ದಾರೆ.


ಈ ಪಕ್ಷಕ್ಕೆ ಸೋಲು ಹೊಸದೇನಲ್ಲ


ಚನ್ನಪಟ್ಟಣದಲ್ಲಿ ಮತದಾರರಿಗೆ ಕೃತಜ್ಞತೆ ತಿಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್​ಡಿಕೆ, ಚನ್ನಪಟ್ಟಣದ ನನ್ನ ಕಾರ್ಯಕರ್ತರು ಯಾರ ಆಮಿಷಕ್ಕೂ ಒಳಗಾಗದೆ ಜನ ನನ್ನ ಕೈಹಿಡಿದಿದ್ದಾರೆ. ಹಲವಾರು ಕಡೆ ನಮ್ಮ ಪಕ್ಷಕ್ಕೆ ಹಿನ್ನಡೆ ಆಗಿದೆ. ಇದರಿಂದ ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯ ಇಲ್ಲ. ಈ ಪಕ್ಷಕ್ಕೆ ಈ ರೀತಿಯ ಸೋಲು ಹೊಸದೇನಲ್ಲ. ಈ ಪಕ್ಷಕ್ಕೆ ಪ್ರಾಮಾಣಿಕ ಕಾರ್ಯಕರ್ತರ ಜೊತೆಗೆ ದೇವರ ಅನುಗ್ರಹ ಇದೆ.




ಫಲಿತಾಂಶದಿಂದ ಹಲವರಿಗೆ ಗೊಂದಲ ಆತಂಕ ಇದೆ. ಹಲವಾರು ಜನ ದೂರವಾಣಿ ಮೂಲ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ನೀವು ಧೈರ್ಯವಾಗಿ ಇರಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಪಕ್ಷ ಕಟ್ಟೋಣ ಎನ್ನುವ ಆತ್ಮ ವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಪಕ್ಷ ಉಳಿಸಿದ್ದು ನೀವು, ಇಲ್ಲಿ ನಾನು ನೆಪಮಾತ್ರ. 15 ದಿನಗಳಲ್ಲಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.


ಈಗಿನ ಸರ್ಕಾರ ನಾಟಕ ನೋಡುತ್ತಿದ್ದೀರಿ

top videos


    ಅಲ್ಲದೆ, ಹೊಸ ಸರ್ಕಾರ ಹೇಳಿರುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಅಷ್ಟು ಸುಲಭ ಅಲ್ಲ. ಈಗ ಘೋಷಣೆ ಮಾಡಿರುವ ಯೋಜನೆಗೆ
    62 ರಿಂದ 70 ಸಾವಿರ ಕೋಟಿ ಬೇಕು. ಇದನ್ನ ಎಲ್ಲಿಂದ ತರುತ್ತಾರೆ. ಇನ್ನುಳಿದ ಅಭಿವೃದ್ಧಿಗೆ ಹಣ ಎಲ್ಲಿಂದ ತರುತ್ತಾರೆ ನೋಡಬೇಕು. ಈಗಿನ ಸರ್ಕಾರ ನಾಟಕ ನೋಡುತ್ತಿದ್ದೀರಿ, ಈ ಸರ್ಕಾರದಿಂದ ಒಳ್ಳೆ ಆಡಳತದ ನಿರೀಕ್ಷೆ ಇಟ್ಟುಕೊಂಡಿಲ್ಲ. ನಾನು ಸ್ವಾಭಿಮಾನ ಕಳೆದುಕೊಂಡು ಮಂತ್ರಿಗಳ ಎದುರು ನಾನು ನಿಲ್ಲಲು ಆಗಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗೋ ರೀತಿ ನಡೆದುಕೊಳ್ಳಲು ನಾನು ತಯಾರಿಲ್ಲ. ಅಭಿವೃದ್ಧಿ ಹಣ ತರುತ್ತಿದೆ ಆದರೆ ಈ ಸರ್ಕಾರದಲ್ಲಿ ಹಣ ತಂದು ಅಭಿವೃದ್ಧಿ ಮಾಡುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದರು.


    ಲೋಕಸಭಾ ಚುನಾವಣೆ ಬಳಿಕ ಏನು ಅಭಿವೃದ್ಧಿ ಆಗುತ್ತೋ ನೋಡೋಣಾ, ಮುಂದೆ ತಾ.ಪಂ, ಜಿಪಂ ಚುನಾವಣೆ ಬರುತ್ತೆ. ನನ್ನನ್ನು ಗೆಲ್ಲಿಸಿದಂತೆ ಎಲ್ಲಾ ಸ್ಥಾನಗಳನ್ನು ಗೆಲ್ಲುವಂತೆ ಹೋರಾಟ ಮಾಡೋಣಾ. ನಾನು ನಿಮ್ಮ ಜೊತೆ ಇರ್ತೇನೆ. ಈಗಿನ ರಾಜಕೀಯ ಬೆಳವಣಿಗೆ ಬಗ್ಗೆ ಆತಂಕ ಬೇಡ. ಇನ್ನು ಎರಡು ಮೂರು ತಿಂಗಳಲ್ಲಿ, ಅಕ್ಟೋಬರ್ ನವೆಂಬರ್ ಒಳಗೆ ಹೊಸ ರಾಜಕೀಯ ಬದಲಾವಣೆ ಆಗುತ್ತೆ ಎಂದು ಭವಿಷ್ಯ ನುಡಿದರು. ಅಲ್ಲದೆ, ಬಿಜೆಪಿಯವರಂತೆ ಕಾಂಗ್ರೆಸ್ ನವರು ಲೂಟಿ ಮಾಡ್ತಾರೆ, ಎಲ್ಲಿ ಹಿಡಿಯಬೇಕು ನನಗೆ ಗೊತ್ತಿದೆ, ಆ ಹೋರಾಟ ಪ್ರಾರಂಭ ಮಾಡ್ತೇನೆ. ನೀವು ಹೆದರಬೇಡಿ ಅಷ್ಟೇ ಎಂದು ಭರವಸೆ ನೀಡಿದರು.

    First published: