• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Devegowda: ಮೋದಿ ರ್‍ಯಾಲಿಯಿಂದ ನಮ್ಗೆ ತೊಂದರೆ ಇಲ್ಲ; ಇಳಿವಯಸ್ಸಿನಲ್ಲೂ ಎಲೆಕ್ಷನ್​ ಅಖಾಡಕ್ಕಿಳಿದ ಎಚ್​​ಡಿಡಿ

HD Devegowda: ಮೋದಿ ರ್‍ಯಾಲಿಯಿಂದ ನಮ್ಗೆ ತೊಂದರೆ ಇಲ್ಲ; ಇಳಿವಯಸ್ಸಿನಲ್ಲೂ ಎಲೆಕ್ಷನ್​ ಅಖಾಡಕ್ಕಿಳಿದ ಎಚ್​​ಡಿಡಿ

ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡ

ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡ

ನಾಳೆಯಿಂದ ಎಚ್​​ಡಿಡಿ ರಾಜ್ಯ ಪ್ರವಾಸ ಆರಂಭ ಮಾಡಲಿದ್ದು, ಶಿರಾ, ಮಧುಗಿರಿ ಹಾಗೂ ಕೊರಟಗೆರೆ, ಪಿರಿಯಾಪಟ್ಟಣ, ಕೆ.ಆರ್.ನಗರ ಸೇರಿದಂತೆ ಹುಣಸೂರಿನಲ್ಲಿ‌ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.

  • Share this:

ಬೆಂಗಳೂರು: ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡರ (HD Devegowda) ಅವರು ಇಂದು ಪದ್ಮನಾಭನಗರದಲ್ಲಿ (Padmanabhanagara) ಜೆಡಿಎಸ್ ಅಭ್ಯರ್ಥಿ ಬಂಜಾರಪಾಳ್ಯ ಮಂಜುನಾಥ್ ಪರ ಪ್ರಚಾರ ನಡೆಸಿದ್ದಾರೆ. ಬಸವ ಜಯಂತಿ (Basava Jayanti) ಪ್ರಯುಕ್ತ ಕ್ಷೇತ್ರದಲ್ಲಿ ಪ್ರಚಾರ ವಾಹನಗಳಿಗೆ ಎಚ್​ಡಿಡಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಮಾಜಿ ಪ್ರಧಾನಿಗಳು, ಬಂಜಾರಪಾಳ್ಯ ಮಂಜುನಾಥ್ ಉತ್ತಮ‌ ಅಭ್ಯರ್ಥಿ. ನಲವತ್ತು ವರ್ಷಗಳಿಂದ ನಾನು ಪದ್ಮನಾಭನಗರದಲ್ಲೇ ಇದ್ದೀನಿ. ನಾನು ಹಾಸನದಲ್ಲಿ (Hassan) ಮತ ಹಾಕಿದರೂ ಪದ್ಮನಾಭನಗರ ಮಗಳ (Daughter) ಮನೆಯಲ್ಲಿ ಇದ್ದೀನಿ. ವಿವಿಧ ಸಮುದಾಯಗಳ ಅಭ್ಯರ್ಥಿಗಳು ಬಂದು ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬರುತ್ತೇವೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್​ ನೀಡಿದ್ದು, ಕ್ಷೇತ್ರದಲ್ಲಿ ಬಂಜಾರಪಾಳ್ಯ ಮಂಜುನಾಥ್‌ಗೆ ಟಿಕೆಟ್ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.


ಮೂರು ದಿನ, ಮೂರು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ


ನಾಳೆಯಿಂದ ನಾನು ಶಿರಾ, ಮಧುಗಿರಿ ಹಾಗೂ ಕೊರಟಗೆರೆಯಲ್ಲಿ ಪ್ರವಾಸ ಮಾಡುತ್ತೇನೆ. ನಾಡಿದ್ದು ಪಿರಿಯಾಪಟ್ಟಣ, ಕೆ.ಆರ್.ನಗರ, ಹುಣಸೂರಿನಲ್ಲಿ‌ ಪ್ರಚಾರ ಮಾಡಲಿದ್ದೇನೆ. ಹೀಗೆ ಪ್ರತಿ ದಿನ ಮೂರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಈಗಾಗಲೇ ಕುಮಾರಸ್ವಾಮಿ ಪಂಚರತ್ನ ಕಾರ್ಯಕ್ರಮ ಮೂಲಕ ಒಂದು ರೌಂಡ್ ಪ್ರಚಾರ ಮಾಡಿದ್ದಾರೆ ಎಂದು ಎಚ್​ಡಿಡಿ ತಿಳಿಸಿದರು.




ಇದನ್ನೂ ಓದಿ: HD Kumaraswamy: ಆಸ್ಪತ್ರೆಯಲ್ಲೇ ಎಚ್​ಡಿಕೆ ಚುನಾವಣಾ ರಣತಂತ್ರ! ಡಿಸ್ಚಾರ್ಜ್ ಬಳಿಕ ಭರ್ಜರಿ ಕ್ಯಾಂಪೇನ್​


ಯಾರ ಬಗ್ಗೆಯೂ ಲಘುವಾಗಿ ಮಾತನಾಡಲ್ಲ


ಇದೇ ವೇಳೆ ಮೈಸೂರು ಭಾಗದಲ್ಲಿ ಮೋದಿ, ಆದಿತ್ಯನಾಥ್ ಸರಣಿ ರ್ಯಾಲಿ ನಡೆಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಚ್​ಡಿಡಿ, ಅವರ ರ್ಯಾಲಿಯಿಂದ ನಮಗೇನು ತೊಂದರೆ ಇಲ್ಲ. ಅವರ ಶಕ್ತಿ ಅವರು ಹೇಳ್ತಾರೆ, ನಮ್ಮ ಶಕ್ತಿ ನಾವು ಹೇಳುತ್ತೇವೆ. ನಾವು ಏನು ಅಂತ ನಮ್ಮ ಜನರಿಗೆ ಗೊತ್ತು.


ನಾನು ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದೇನೆ ಅಂತ ಪುಸ್ತಕ ಬರೆದಿದ್ದಾರೆ. ನಾನು ರಾಜ್ಯದ ನೀರಾವರಿ ಯೋಜನೆಗಳಿಗೆ ಕೊಟ್ಟ ಕೊಡುಗೆ ಏನು ಅಂತ ಹೇಳಿದ್ದಾರೆ. ಇವತ್ತು ರಾಹುಲ್ ಗಾಂಧಿ ಬೀದರ್‌ಗೆ ಹೋಗಿದ್ದಾರೆ. ಬೇಡ ಅಂತ ಹೇಳೋಕೆ ನಾವು ಯಾರು? ನಾನು ಯಾರ ಬಗ್ಗೆಯೂ ಲಘುವಾಗಿ ಮಾತನಾಡಲ್ಲ ಎಂದರು.




ನಾನು ಮಾಡಿರುವ ಕೆಲಸಗಳ ಬಗ್ಗೆ ಜನರ ಮುಂದೆ ಹೋಗಿ ಹೇಳುತ್ತೇವೆ. ನಾನು ಏನ್ ಮಾಡಿದ್ದೇನೆ ಅಂತ ಜಾಮದಾರ್ ಪುಸ್ತಕ ಬರೆದಿದ್ದಾರೆ. ಆ ಪುಸ್ತಕ ಎಲ್ಲರೂ ಓದಲಿ. ನೇಗಿಲ ಗೆರೆ ಪುಸ್ತಕ ಓದಲಿ. ರಾಯಚೂರು, ಬಾಗಲಕೋಟೆ, ಗುಲಬರ್ಗಾ ಜನ ಮುಂಬೈಗೆ ಗುಳೆ ಹೋಗುತ್ತಿದ್ದರು. ಅದನ್ನ ತಡೆದಿದ್ದು ನಾನು.


ಈ ಭಾಗದ ಜನ ಆನಂದವಾಗಿ ಊಟ ಮಾಡುತ್ತಿದ್ದಾರೆ. ಅವರನ್ನ ಮರೆತಿದ್ದಾರೆ ಜನ ಅಂತ ಪುಸ್ತಕ ದಲ್ಲಿ ಬರೆದಿದ್ದಾರೆ. ಬಿಜೆಪಿ ಅವರು ಏನು ಮಾಡಿದ್ದಾರೆ. ಹೇಳೋ ವಿಷಯ ತುಂಬಾ ಇದೆ. ನನ್ನ ಹೆಸರು ಇದ್ದರೆ ಎಷ್ಟು ಹೋದರೆ ಎಷ್ಟು. ಪ್ರಾದೇಶಿಕ ಪಕ್ಷ ಉಳಿಸಿ ಎಂದು ಮನವಿ ಮಾಡಿದರು.

top videos
    First published: