ರಾಮನಗರ: ಚನ್ನಪಟ್ಟಣದಲ್ಲಿ ಎಚ್ಡಿ ಕುಮಾರಸ್ವಾಮಿ (HD Kumaraswamy) ಪರ ಎಚ್ಡಿ ದೇವೇಗೌಡ (HD Devegowda) ಅವರು ಇಂದು ಭರ್ಜರಿ ಪ್ರಚಾರ ನಡೆಸಿದರು. ಚನ್ನಪಟ್ಟಣದ (Channapatna) ಹೊಂಗನೂರು - ಕೋಡಂಬಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿದ ದೇವೇಗೌಡರು ಜನರನ್ನು ಉದ್ದೇಶಿಸಿ ಅಬ್ಬರದ ಭಾಷಣ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜೆಡಿಎಸ್ (JDS) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರ ಅವರು, ಕುಮಾರಸ್ವಾಮಿ ಅವರಿಗೆ ಈ ಬಾರಿ ಮತ ನೀಡಿ, ಮೇ 13ರಂದು ವಿಧಾನಸೌಧದಲ್ಲಿ (Vidhana Soudha) ಸಿಎಂ ಆಗಿ ಕೂರುತ್ತಾರೆ. ಯಾವನು ಎಷ್ಟೇ ಹಣ ನೀಡಲಿ, ನನ್ನ ತಾಯಂದಿರು ಮರುಳಾಗಬೇಡಿ. ನನ್ನ ಕರ್ಮಭೂಮಿ ಚನ್ನಪಟ್ಟಣ, ತಾಯಂದಿರು ಆರ್ಶೀವಾದ ಮಾಡಿ ಪ್ರಾದೇಶಿಕ ಪಕ್ಷವನ್ನ ಉಳಿಸಿ, ಕಾಂಗ್ರೆಸ್ (Congress) ಹಾಗೂ ಬಿಜೆಪಿ ತ್ಯಜಿಸಿ. ಬಡವರ ಇರುವ ಏಕೈಕ ರಾಜಕೀಯ ನಾಯಕ ಕುಮಾರಣ್ಣ, ಕುಮಾರಣ್ಣ, ಕುಮಾರಣ್ಣ ಎಂದು ಮನವಿ ಮಾಡಿದರು.
ನಾನು ಪ್ರಾದೇಶಿಕ ಪಕ್ಷ ಉಳಿಸಲು ಬಂದಿದ್ದೇನೆ
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್ಡಿಡಿ, ನಾನು ನಿಖಿಲ್ ಹಾಗೂ ಕುಮಾರಸ್ವಾಮಿ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಈ ವಯಸ್ಸಿನಲ್ಲಿ ನಾನು ಬೆಳಗ್ಗೆ 6 ರಿಂದ 7 ಕಾರ್ಯಕ್ರಮ ಮುಗಿಸಿ ಬಂದಿದ್ದೇನೆ. ನಾನೇನು, ನನ್ನ ವಯಸ್ಸೇನು. ಬಿಜೆಪಿ ಮತ್ತು ಕಾಂಗ್ರೆಸ್ ಗೊತ್ತಿದೆ, ನಾನು ಪ್ರಾದೇಶಿಕ ಪಕ್ಷ ಉಳಿಸಲು ಬಂದಿದ್ದೇನೆ. ಯಾರು ತಪ್ಪು ಮಾಡಿದರು ಅದು ನನಗೆ ಕೇಳಬಾರದು, ನನಗೆ ಸಂಬಂಧವಿಲ್ಲ ಎಂದು ಸುಮಲತಾ ಕುರಿತಂತೆ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಎಂಎಲ್ಸಿಗೆ ಎಚ್ಡಿಡಿ ಖಡಕ್ ವಾರ್ನಿಂಗ್
ಇನ್ನು, ಎಂಎಲ್ ಸಿ ಭೋಜೇಗೌಡ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ವೇದಿಕೆಯ ಮೇಲೆ ಖಡಕ್ ಸಂದೇಶ ರವಾನಿಸಿದ ದೊಡ್ಡಗೌಡರು, ಭೋಜೇಗೌಡರೆ ನಿಮ್ಮ ಜವಾಬ್ದಾರಿ ಹೆಚ್ಚಿದೆ. ಯಾವ ಸಂದರ್ಭದಲ್ಲಿ ಏನೂ ಹೇಳಿದ್ದೀರಾ ಯಾವ ಕಾರಣಕ್ಕೆ ಮಾತಾನಾಡಿದ್ದೀರಾ.
ನನ್ನ ಹೃದಯದಲ್ಲಿ ಅರ್ಥ ಮಾಡ್ಕೊಂದ್ದೀನಿ ಅದನ್ನ ಸಾಭೀತು ಮಾಡಬೇಕು. ಅರ್ಥ ಮಾಡ್ಕೋಳಿ ಕಡೂರಿನಲ್ಲಿ ದತ್ತನನ್ನು ಗೆಲ್ಲಿಸಬೇಕು. ಆ ಕೆಲಸವನ್ನು ಮಾಡಿ ತೋರಿಸಬೇಕು, ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿದೆ ಎಂದರು. ಈ ವೇಳೆ ಎಚ್ಡಿಡಿ ಖಡಕ್ ವಾರ್ನಿಂಗ್ ನೀಡುತ್ತಿದ್ದಂತೆ ನಾಲ್ಕು ಬಾರಿ ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.
ನನ್ನ ರಕ್ತದ ಕಣ ಕಣ ಕುದ್ದು ಹೋಗುತ್ತೆ
ಮಂಡ್ಯದ ಕೆ.ಆರ್ಪೇಟೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ್ರು ಜೆಡಿಎಸ್ ಅಭ್ಯರ್ಥಿ ಹೆಚ್.ಟಿ ಮಂಜು ಪರ ಪ್ರಚಾರ ಮಾಡಿದರು. ಈ ವೇಳೆ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು, ಒಬ್ಬ ಮಹಾನ್ ವ್ಯಕ್ತಿ ಒಂದು ಮಾತು ಹೇಳುತ್ತಾರೆ. ಜೆಡಿಎಸ್ನ ನಾನು ಮುಗಿಸಿ ಬಿಟ್ಟೆ ಎಂದು ಮಾತನಾಡ್ತಾರೆ. ಅವರ ಮಾತನ್ನ ಕೇಳಿದರೆ ನನ್ನ ರಕ್ತದ ಕಣ ಕಣ ಕುದ್ದು ಹೋಗುತ್ತೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಇದೇ ವೇಳೆ ಕೆ.ಆರ್ ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿರುದ್ಧ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ