• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Harshika Poonacha: ‘ನಾನು ಕ್ಯಾಂಪೇನ್ ಮಾಡಿದವರೆಲ್ಲರೂ ಗೆದ್ದಿದ್ದಾರೆ’ -ಎಲೆಕ್ಷನ್ ಅಖಾಡದಲ್ಲಿ ನಟಿ ಹರ್ಷಿಕಾ ಪೂಣಚ್ಚ

Harshika Poonacha: ‘ನಾನು ಕ್ಯಾಂಪೇನ್ ಮಾಡಿದವರೆಲ್ಲರೂ ಗೆದ್ದಿದ್ದಾರೆ’ -ಎಲೆಕ್ಷನ್ ಅಖಾಡದಲ್ಲಿ ನಟಿ ಹರ್ಷಿಕಾ ಪೂಣಚ್ಚ

ಗದಗ ಬಿಜೆಪಿ ಅಭ್ಯರ್ಥಿ ಪರ ಹರ್ಷಿಕಾ ಪೂಣಚ್ಚ ಪ್ರಚಾರ

ಗದಗ ಬಿಜೆಪಿ ಅಭ್ಯರ್ಥಿ ಪರ ಹರ್ಷಿಕಾ ಪೂಣಚ್ಚ ಪ್ರಚಾರ

ಮತದಾರರು ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಬದಲಾವಣೆ ಬೇಕು ಎಂತಾ ಜನರು ಹೇಳುತ್ತಿದ್ದಾರೆ. ಈ ಬಾರಿ ಅನಿಲ್​ ಮೆಣಸಿನಕಾಯಿ ಅವರು ಗೆಲುವು ಪಡೆಯುತ್ತಾರೆ ಎಂದು ನಟಿ ಹರ್ಷಿಕಾ ಪೂಣಚ್ಚ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • Share this:

ಗದಗ: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Elections 2023) ಅಖಾಡಕ್ಕೆ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಎಂಟ್ರಿ ಕೊಟ್ಟಿದ್ದಾರೆ. ಗದಗ (Gadaga) ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ಅನಿಲ್​​ ಮೆಣಸಿನಕಾಯಿ (Anil Menasinakai) ಪರವಾಗಿ ನಟಿ ಹರ್ಷಿಕಾ ಪೂಣಚ್ಛ ಹಾಗೂ ನಟ ಭುವನ್ (Bhuvann Ponnannaa)​​ ಪ್ರಚಾರ ನಡೆಸಿದ್ದಾರೆ. ಸುಡುವ ಬಿಸಲಿನಲ್ಲೂ ಮನೆ ಮನೆಗೆ ತೆರಳಿ, ಮಹಿಳೆಯರು ಹಾಗೂ ಯುವಕರಲ್ಲಿ ಮತ ಯಾಚನೆ ಮಾಡಿದ್ದಾರೆ. ಇದಾದ ಬಳಿಕ ಪ್ರತಿಕ್ರಿಯೆ ನೀಡಿದ ಹರ್ಷಿಕಾ ಪೂಣಚ್ಚಾ ನಾನು ಕ್ಯಾಂಪೇನ್ ಮಾಡಿದವರು ಎಲ್ಲರು ಗೆದ್ದಿದ್ದಾರೆ. ಅದೇ ರೀತಿ ಅನಿಲ ಮೆಣಸಿನಕಾಯಿ ಗೆಲುವು ಪಡೆಯುತ್ತಾರೆ ಎಂದಿದ್ದಾರೆ.


ಗದಗ-ಬೆಟಗೇರಿ ಅವಳಿ ನಗರದ ನಾಲ್ಕನೇಯ ವಾರ್ಡ್ ನಿಂದ ಪ್ರಚಾರ ಆರಂಭಿಸಿದ ಹರ್ಷಿಕಾ ಪೂಣಚ್ಛ ಹಾಗೂ ಭುವನ್ ಅವರು ಮುಂದಿನ ಮೂರು ದಿನಗಳ ಗದಗ ನಗರ ಹಾಗೂ ಗ್ರಾಮೀಣಾ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ. ಇಂದು ಪ್ರಚಾರದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಹರ್ಷಿಕಾ ಪೂಣಚ್ಛ ಅವರು, ಗದಗ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗಾಗಿ ಬದಲಾವಣೆ ಮಾಡಿ, ಅನಿಲ್ ಮೆಣಸಿನಕಾಯಿ ಅವರು ಅಭಿವೃದ್ಧಿ ಮಾಡಲು ಪ್ಲಾನ್ ಮಾಡಿದ್ದಾರೆ. ಚರಂಡಿ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ.


ಇದನ್ನೂ ಓದಿ: HD Kumaraswamy: ಆಸ್ಪತ್ರೆಯಲ್ಲೇ ಎಚ್​ಡಿಕೆ ಚುನಾವಣಾ ರಣತಂತ್ರ! ಡಿಸ್ಚಾರ್ಜ್ ಬಳಿಕ ಭರ್ಜರಿ ಕ್ಯಾಂಪೇನ್​


ನಾವು ಕೂಡಾ ಬಿಸಿಲು ಲೆಕ್ಕಿಸದೆ ಅನಿಲ್ ಮೆಣಸಿನಕಾಯಿ ಪರ ಮತಯಾಚನೆ ಮಾಡುತ್ತೇವೆ. ಅನಿಲ್​​ ಮೆಣಸಿನಕಾಯಿ ಅವರ ಪರವಾಗಿ ಮೊದಲನೇ ಬಾರಿ ಕ್ಯಾಂಪೇನ್ ಮಾಡುತ್ತಿದ್ದೇನೆ. ನಾನು ಕ್ಯಾಂಪೇನ್ ಮಾಡಿದವರು ಎಲ್ಲರು ಗೆದ್ದಿದ್ದಾರೆ. ಅದೇ ರೀತಿ ಅನಿಲ್​​ ಮೆಣಸಿನಕಾಯಿ ಅವರನ್ನು ಗೆಲ್ಲಿಸಲೇಬೇಕು ಅಂತಾ ಸ್ವ-ಇಚ್ಛೆಯಿಂದ ಬಂದಿದ್ದೇವೆ ಎಂದರು.
ಅಲ್ಲದೆ, ಮತದಾರರು ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಬದಲಾವಣೆ ಬೇಕು ಎಂತಾ ಜನರು ಹೇಳುತ್ತಿದ್ದಾರೆ. ನಾನು ಪ್ರಚಾರಕ್ಕೆ ಹೋದಾಗ ಮುಕ್ತವಾಗಿ ಜನರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇದರಿಂದ ನಮಗೂ ಬಹಳ ಖುಷಿಯಾಗಿದೆ. ಎಲ್ಲೋ ಒಂದು ಸಂದರ್ಭದಲ್ಲಿ ನಾವು ಬ್ಯುಸಿ ಇದ್ದೇವು, ಆದರೆ ಅನಿಲ್​ ಅವರಿಗಾಗಿಯೇ ಬಂದಿದ್ದೇವೆ. ಕಳೆದ ಚುನಾವಣೆಯಲ್ಲೇ ಅವರು ಗೆಲುವು ಪಡೆಯಬೇಕಿತ್ತು. ಕಡಿಮೆ ಅಂತರದಲ್ಲಿ ಸೋಲುಂಡಿದ್ದಾರೆ. ಓರ್ವ ಶಾಸಕರಿಗೆ ಇರಬೇಕಾದ ಎಲ್ಲಾ ಲಕ್ಷಣಗಳು ಅನಿಲ್​ ಅವರಿಗೆ ಇದೆ, ಅವರು ಖಂಡಿತ ಬಡವರಿಗೆ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡ್ತಾರೆ ಎಂದು ಹರ್ಷಿಕಾ ಪೂಣಚ್ಚ ವಿಶ್ವಾಸ ವ್ಯಕ್ತಪಡಿಸಿದರು.

top videos
    First published: