ತುಮಕೂರು: ಮಧುಗಿರಿಯ (Madhugiri) ಕೈಮರದಲ್ಲಿ ನಡೆದ ಜೆಡಿಎಸ್ (JDS) ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ (HD Devegowda) ಅವರು ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ಮಧುಗಿರಿ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ (Veerabhadraiah) ಅವರ ಪರವಾಗಿ ಮತಯಾಚನೆ ಮಾಡಿದರು. ವೀರಭದ್ರಯ್ಯ ಅವರು ಈ ಕ್ಷೇತ್ರದ ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಮಧುಗಿರಿ ಜಿಲ್ಲೆಯಾಗಬೇಕು ಎನ್ನುವುದು ವೀರಭದ್ರಯ್ಯ ಕನಸ್ಸು. ಏಕಶಿಲೆಯನ್ನು ಟೂರಿಸ್ಟ್ ಜಾಗ, ಇಂಡಸ್ಟ್ರಿಯಲ್ ಕ್ಲಸ್ಟರ್ (Industrial Clusters) ಮಾಡುವುದು ಅವರ ಕನಸು. ನಾನು ಯಾರ ಮನಸ್ಸನ್ನು ನೋಯಿಸೋದಿಲ್ಲ. ಆದರೆ ಕಾಂಗ್ರೆಸ್ (Congress) ನವರು ಜೆಡಿಎಸ್ ಗೆ 20 ಸೀಟ್ ಬುರುತ್ತೆ ಅಂತಾರೆ. ಬಹುಶಃ ಮಧುಗಿರಿ ಕ್ಷೇತ್ರ ಒಂದೇ ಅವರಿಗೆ ಉತ್ತರ ಕೊಡೋಕೆ ಸಾಕು ಎನಿಸುತ್ತದೆ ಎಂದು ಎಚ್ಡಿಡಿ ಹೇಳಿದ್ದಾರೆ.
ತುಮಕೂರಿನ ಕೆಲ ಮುಖಂಡರು ನನ್ನನ್ನು ಬಲಿಪಶು ಮಾಡಿದರು
ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಎಚ್ಡಿಡಿ, ನಾನು ಹಿಂದಿನ ಸಂಗತಿಗಳನ್ನು ಮೆಲುಕು ಹಾಕಿ ನೋಡೋಕು ಹೋಗೋದಿಲ್ಲ. ಲೋಕಸಭೆಯಿಂದ ಸ್ಪರ್ಧಿಸಬೇಕೆಂದು ಎಂದೂ ಅಂದು ಕೊಂಡವನಲ್ಲ. ಚುನಾವಣಾ ರಾಜಕೀಯ ಸಾಕಾಗಿದೆ ಅಂತಾ ಈ ಹಿಂದೆನೇ ಹೇಳಿದ್ದೆ. ಆದರೇ ತುಮಕೂರಿನ ಕೆಲ ಮುಖಂಡರು ನನ್ನನ್ನು ಬಲಿಪಶು ಮಾಡಿದರು ಅಂತನೂ ಹೇಳಲ್ಲ. ಅವರ ಹೆಸರೂ ಕೂಡ ಹೇಳೋಕೆ ಹೋಗಲ್ಲ ಎಂದು ಪರೋಕ್ಷವಾಗಿ ತುಮಕೂರು ಜಿಲ್ಲೆ ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ರಾಜಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Lingayat CM: ‘ಲಿಂಗಾಯತರನ್ನ ಸಿಎಂ ಮಾಡ್ತೀವಿ ಅಂದಿಲ್ಲ’! ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಫೋಟಕ ಹೇಳಿಕೆ
ಎದ್ದು ನಿಲ್ಲಲು ಮಂಡಿ ನೋವಿದೆ
ನಾನು ಮುಸ್ಲಿಂ, ಗೊಲ್ಲ, ದಲಿತರಿಗೆ ಮೀಸಲಾತಿ ಕೊಟ್ಟಿದ್ದೇನೆ. ನನಗೆ ಈಗ ಮಂಡಿ ನೋವಿದೆ, ಎದ್ದು ನಿಲ್ಲೋಕೆ ಕಷ್ಟ ಆಗುತ್ತೆ. ಆದರೂ ಗೊಲ್ಲ ಸಮುದಾಯದ ಯುವಕ ಕುರಿಯನ್ನು ತೆಗೆದುಕೊಂಡು ಬಂದು ಹೆಗಲ ಮೇಲೆ ಹಾಕಿ ಪರೀಕ್ಷೆ ಮಾಡಿದ. ನನಗೆ ಇನ್ನೂ ತೂಕ ಹೊರುವ ಶಕ್ತಿ ಇದೆ. ಆದರೆ ಎದ್ದು ನಿಲ್ಲಲು ಮಂಡಿ ನೋವಿದೆ ಅಷ್ಟೇ ಎಂದರು.
2018ರಲ್ಲಿ ರಾಜಕೀಯ ನೀವೃತ್ತಿ ಆಗೋದಾಗಿ ಹೇಳಿದ್ದೆ
ಕೈಮರದಲ್ಲಿ ವೀರಾವೇಶ ಭಾಷಣ ಮಾಡಿದ ಎಚ್ಡಿಡಿ, ಯಾವ ತುಮಕೂರಿನಲ್ಲಿ ನನ್ನ ಮುಖ್ಯಮಂತ್ರಿ ಮಾಡಲು 11 ಸ್ಥಾನಗಳಲ್ಲಿ ಗೆಲ್ಲಿಸಿ ಕೊಟ್ಟಿದ್ದೀರಿ. 2018ರಲ್ಲಿ ರಾಜಕೀಯ ನೀವೃತ್ತಿ ಆಗೋದಾಗಿ ಹೇಳಿದ್ದೆ, ಆದರೆ ತುಮಕೂರಿನ ಮುಖಂಡರು ನನ್ನನ್ನು ಬಲಿಪಶು ಮಾಡಿದರು. ಇವತ್ತು ಮಧುಗಿರಿ ಜನರು ವೀರಭದ್ರ ಅವರನ್ನು 15 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು.
ಕುಮಾರಣ್ಣ ನಿಮ್ಮ ಜಿಲ್ಲೆಯ ಬಗ್ಗೆ ಹೆಚ್ಚು ವಿಶ್ವಾಸ ಇಟ್ಟುಕೊಂಡಿದ್ದಾರೆ. ಈಗ ಕೈ ಮುಗಿದು ಪ್ರಾರ್ಥನೆ ಮಾಡ್ತೇನೆ. ಯಾವ ದೇವೇಗೌಡ ಪಾರ್ಲಿಮೆಂಟ್ಗೆ ನಿಂತು ಕಣ್ಣೀರು ಹಾಕುವ ಕೆಟ್ಟ ಸಂದರ್ಭ ತಂದರೋ, ಆ ನಾಯಕನ ಕಣ್ಣಲಿ ನೀರು ಬರಿಸಬೇಕು. ಅವತ್ತು ನನ್ನ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಎದ್ದೆತಟ್ಟಿಕೊಂಡು ಭಾವುಕರಾದರು. ಆ ಮೂಲಕ ಕೆ.ಎನ್.ರಾಜಣ್ಣ ಅವರನ್ನು ಸೋಲಿಸುವಂತೆ ಕರೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ