Jagadish Shettar: ‘ಇದು ನನ್ನ ಕೊನೆ ಚುನಾವಣೆ’ -ಮಾಜಿ ಸಿಎಂ ಶೆಟ್ಟರ್​ ಘೋಷಣೆ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

. ನನ್ನ ರಾಜಕೀಯ ಮುಗಿಸಲು ಉತ್ಸುಕರಾಗಿರೋ ಕೆಲವರು ಷಡ್ಯಂತ್ರ ಮಾಡಿದರು. ನನ್ನಂತ ಹಿರಿಯ ನಾಯಕರಿಗೆ ಅಪಮಾನ ಯಾಕೆ ಮಾಡಿದರು ಎಂದು ಉತ್ತರಸಿಬೇಕಿದೆ ಎಂದು ಜಗದೀಶ್ ಶೆಟ್ಟರ್​​​ ಹೇಳಿದ್ದಾರೆ.

  • Share this:

ಹುಬ್ಬಳ್ಳಿ: ಇದು ನನ್ನ ಕೊನೆ ಚುನಾವಣೆ (Elections) ಎಂದು ಮಾಜಿ ಸಿಎಂ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರದ (Hubli-Dharwad Constituency) ಅಭ್ಯರ್ಥಿ ಜಗದೀಶ್​​ ಶೆಟ್ಟರ್​ (Jagadish Shettar) ಘೋಷಣೆ ಮಾಡಿದ್ದಾರೆ. ಕರ ಪತ್ರ ಮುದ್ರಿಸಿ ಹಂಚಿಕೆ ಮಾಡಲು ಮೂಲಕ ಚುನಾವಣೆ ಪ್ರಚಾರ ನಡೆಸುತ್ತಿರುವ ಜಗದೀಶ್ ಶೆಟ್ಟರ್, ಇದು ನನ್ನ ಕೊನೆ ಚುನಾವಣೆ. ಏಳನೇ ಬಾರಿ ಚುನಾವಣೆ ಎದುರಿಸುತ್ತಿರುವ ನಾನು ಗೆಲ್ಲುವ ವಿಶ್ವಾಸ ಇದೆ ಎಂದು ಶೆಟ್ಟರ್​ ಹೇಳಿದ್ದಾರೆ. ಕುಲಗೆಟ್ಟು ಹೋಗಿರುವ ವ್ಯವಸ್ಥೆಯಲ್ಲಿ ಪರಿವರ್ತನೆ ತರಬೇಕು ಅನ್ನೋ ಉದ್ದೇಶ ಇದೆ ಎಂದು ತಿಳಿಸಿರುವ ಅವರು, ಬಿಜೆಪಿ (BJP) ತೊರೆದ ಬಗ್ಗೆಯೂ ಸುದೀರ್ಘವಾಗಿ ಕರಪತ್ರದ ಮೂಲಕ ಮತ ಹಾಕುವಂತೆ ಮನವಿ ಮಾಡಿದ್ದಾರೆ.


ಶೆಟ್ಟರ್​ ಕರಪತ್ರದಲ್ಲಿ ಏನಿದೆ?


ನಾಲ್ಕು ದಶಕಗಳ ಕಾಲ ಕಟ್ಟಿದ ಪಕ್ಷ ನಾನು ವಿನಾಕಾರಣ ತೊರೆದಿಲ್ಲ. ಬೆವರು ಸುರಿಸಿ ಕಟ್ಟಿದ ಮನೆ ತೊರೆಯುವುದು ಅಷ್ಟು ಸುಲಭವೂ ಇರಲಿಲ್ಲ. ನಾನು ಇದೀಗ ಹಸ್ತ ಚಿಹ್ನೆಯಡಿ ಕಾಂಗ್ರೆಸ್ ಹುರಿಯಾಳಾಗಿ ಸ್ಪರ್ಧೆ ಮಾಡಿದ್ದೇನೆ. ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ರಾಜ್ಯಾದ್ಯಂತ ಸಂಚಲನ ಉಂಟು ಮಾಡಿತ್ತು, ನಾನು ಕನಸಲ್ಲಿ ಊಹಿಸದ ಪರಿಸ್ಥಿತಿ ಸೃಷ್ಟಿ ಮಾಡಿದರು.


ನನ್ನ ರಾಜಕೀಯ ಮುಗಿಸಲು ಉತ್ಸುಕರಾಗಿರೋ ಕೆಲವರು ಷಡ್ಯಂತ್ರ ಮಾಡಿದರು. ನನ್ನಂತ ಹಿರಿಯ ನಾಯಕರಿಗೆ ಅಪಮಾನ ಯಾಕೆ ಮಾಡಿದರು ಎಂದು ಉತ್ತರಸಿಬೇಕಿದೆ, ಓರ್ವ ವ್ಯಕ್ತಿಯು ಸೋಲು ಸಹಿಸಬಹುದು. ಅಪಮಾನ ಸಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.




ಯಡಿಯೂರಪ್ಪ ಕೂಡಾ ನನಗೆ ಟಿಕೆಟ್ ಅಂದಿದ್ದರು


ಇದೇ ವೇಳೆ ಬಿಜೆಪಿ ಹೈಕಮಾಂಡ್ ವಿರುದ್ಧ ಗರಂ ಆಗಿರುವ ಶೆಟ್ಟರ್​​, ನನಗಿಂತ ಕಿರಿಯರಾದ ಬಸವರಾಜ ಬೊಮ್ಮಾಯಿ ಸಿಎಂ ಆದಾಗ ನಾನು ಮಂತ್ರಿ ಆಗಲಿಲ್ಲ. ನನಗೆ ಅಧಿಕಾರದ ಹಪಾಹಪಿ‌ ಇಲ್ಲ. ಯುವಕರು ರಾಜಕೀಯಕ್ಕೆ ಬರಬೇಕು, ಇದು ತಪ್ಪಲ್ಲ. ಆದರೆ ನನಗೆ ಮುಂಚಿತವಾಗಿ ಹೇಳಬಹುದಿತ್ತು. ಕೊನೆ ಕ್ಷಣದಲ್ಲಿ ಟಿಕೆಟ್ ಇಲ್ಲ ಅಂದರೆ ಆಘಾತ ಆಗೋದ ಸಹಜ ಅಲ್ಲವೇ?


ಯಡಿಯೂರಪ್ಪ ಕೂಡಾ ನನಗೆ ಟಿಕೆಟ್ ಅಂದಿದ್ದರು. ನನ್ನ ನಡೆಯಿಂದ ಕೆಲ ಲಿಂಗಾಯತ ನಾಯಕರು ನನ್ನ ಸಂಪರ್ಕ ಮಾಡಿದ್ದಾರೆ. ಬಿಜೆಪಿಯ ಕೆಲ‌ವರು ಮಾಡಿರುವ ಕುತಂತ್ರದ ಬಗ್ಗೆ ಅವರಿಗೆ ಮನವರಿಕೆ ಆಗಿದೆ. ಲೆಕ್ಕವಿಲ್ಲದಷ್ಟು ಜನ ನನ್ನ ಸಂಪರ್ಕ ಮಾಡಿದ್ದಾರೆ. ನನ್ನ ರಾಜಕೀಯ ನಡೆ ಸಮರ್ಥನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.


ಕುತಂತ್ರ ಮಾಡುವವರಿಗೆ ಇದು ತಿರುಗುಬಾಣವಾಗಲಿದೆ


ಕೆಲವರ ಹಿತಕ್ಕಾಗಿ ಪಕ್ಷ ನಲಗುತ್ತಿದೆ, ಕೆಲವರ ಕಪಿಮುಷ್ಟಿಯಲ್ಲಿ ಬಿಜೆಪಿ ಇದೆ. ಇಂದು ಕೇಂದ್ರ ನಾಯಕರಿಗೆ ಮಾಹಿತಿ ಇಲ್ಲ. ಸ್ವಾರ್ಥಕ್ಕಾಗಿ ಮಾಡುತ್ತಿರುವುದು ಪಕ್ಷಕ್ಕೆ ಒಳಿತಾಗಲು ಸಾಧ್ಯವೇ ಇಲ್ಲ.


ಹೀಗೆಲ್ಲಾ ಕುತಂತ್ರ ಮಾಡುವವರಿಗೆ ಇದು ತಿರುಗುಬಾಣವಾಗಲಿದೆ ಎಂದು ಕರಪತ್ರದಲ್ಲೂ ಪರೋಕ್ಷವಾಗಿ ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಶಿ ವಿರುದ್ದ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ. ಕುತಂತ್ರ ರಾಜಕಾರಣ ವಿರೋಧಿಸಿ ನಾನು ಸೆಂಟ್ರಲ್ ‌ಕ್ಷೇತ್ರದಿಂದ ಕಣಕ್ಕಿಳದಿದ್ದೇನೆ ಎಂದು ತಿಳಿಸಿದ್ದಾರೆ.

First published: