ಬಾಗಲಕೋಟೆ: ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಐದು ಕೋಟಿ ರೂಪಾಯಿ ನಗದು ಹಣವನ್ನು ಜಿಲ್ಲೆಯ ಲೋಕಾಪುರ ಪೊಲೀಸರು (Police) ಜಪ್ತಿ ಮಾಡಿದ್ದಾರೆ. ಲೋಕಾಪುರ ಪಟ್ಟಣದ (Lokapur) ಬಳಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಮುಧೋಳ (Mudhol) ಚುನಾವಣಾಧಿಕಾರಿಗಳು, ಪ್ಲೈಯಿಂಗ್ ಸ್ಕ್ವಾಡ್ ಟೀಂ, ಲೋಕಾಪುರ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ. ಸಮರ್ಪಕ ದಾಖಲೆಯಿಲ್ಲದ ಹಿನ್ನೆಲೆಯಲ್ಲಿ ಲೋಕಾಪುರ ಬಳಿಯ ಲಕ್ಷಾನಟ್ಟಿ ಚೆಕ್ ಪೋಸ್ಟ್ ಹಣವನ್ನು (Money) ಸೀಜ್ ಮಾಡಲಾಗಿದೆ. ಹುಬ್ಬಳ್ಳಿಯಿಂದ (Hubballi) ಮುಧೋಳ ಮಾರ್ಗವಾಗಿ ಬರುತ್ತಿದ್ದ ವಾಹನ ತಪಾಸಣೆ ವೇಳೆ ಕೋಟಿ ಕೋಟಿ ಮೊತ್ತದ ಹಣ ಕಂಡು ಬಂದಿದೆ. ಇದೇ ವೇಳೆ ವಾಹನದಲ್ಲಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯಕ್ಕೆ ಸೀಜ್ ಮಾಡಿರುವ ಹಣ ಬ್ಯಾಂಕ್ವೊಂದಕ್ಕೆ ಸೇರಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಹಣ ಸಾಗಿಸುವ ಭದ್ರತಾ ಬೊಲೆರೊ ವಾಹನದಲ್ಲಿ ಹುಬ್ಬಳ್ಳಿ ಯೂನಿಯನ್ ಬ್ಯಾಂಕ್ನಿಂದ ಮುಧೋಳ ಯೂನಿಯನ್ ಬ್ಯಾಂಕ್ ಶಾಖೆಗೆ ಹಣ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಣವನ್ನು ಸೀಜ್ ಮಾಡಿದ್ದು, ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.
ಯೋಗೇಶ್ವರ್ ಭಾವಚಿತ್ರ ಇರುವ ಸೀರೆಗಳು ವಶಕ್ಕೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಭಾವಚಿತ್ರ ಇರುವ ಸೀರೆಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಯೋಗೇಶ್ವರ್ ಬೆಂಬಲಿಗ ಶ್ರೀಕಂಠೇಗೌಡ ಎಂಬುವರ ಮನೆಯಲ್ಲಿ ಸುಮಾರು 113 ಸೀರೆಗಳು, 90 ಸಾವಿರ ನಗದು ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Karnataka Election: ನಮೋ ಹೊಸ ಮಂತ್ರ; ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ! ಕನ್ನಡದಲ್ಲೇ ಒತ್ತಿ ಒತ್ತಿ ಹೇಳಿದ ಮೋದಿ
ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಸೀರೆ ತಂದಿದ್ದರು ಎನ್ನಲಾಗಿದ್ದು, ಇಂದು ಬೆಳಗ್ಗೆ ದಾಳಿ ನಡೆಸಿ ದ ವೇಳೆ ಸೀರೆಗಳು ಹಾಗೂ ಹಣ ಪತ್ತೆಯಾಗಿದೆ. ಘಟನೆ ಸಂಬಂಧ ಎಂಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ