Karnataka Polls 2023: ಡಿಕೆಶಿ ಹೆಲಿಕಾಪ್ಟರ್ ಪಕ್ಕದಲ್ಲೇ ಹೊತ್ತಿದ ಬೆಂಕಿ

ಡಿಕೆ ಶಿವಕುಮಾರ್ ಬಂದ ಹೆಲಿಕಾಪ್ಟರ್​​ ಲ್ಯಾಂಡ್​​ ಆದ ಸ್ಥಳದ ಪಕ್ಕದಲ್ಲೇ ಬೆಂಕಿ

ಡಿಕೆ ಶಿವಕುಮಾರ್ ಬಂದ ಹೆಲಿಕಾಪ್ಟರ್​​ ಲ್ಯಾಂಡ್​​ ಆದ ಸ್ಥಳದ ಪಕ್ಕದಲ್ಲೇ ಬೆಂಕಿ

ಹೆಲಿಕಾಪ್ಟರ್ ಗೆ ಸಿಗ್ನಲ್ ಕೊಡುವ ಸ್ಮೊಕ್ ಕ್ಯಾಂಡಲ್ನಿಂದ ಹೆಲಿಪ್ಯಾಡ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ತಿಳಿದ ಬಂದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಕಾರವಾರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಅವರ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ (Helicopter) ಪಕ್ಕದಲ್ಲಿಯೇ ಇದ್ದ ಹುಲ್ಲಿಗೆ ಬೆಂಕಿ ಹತ್ತಿಕೊಂಡ ಕಾರಣ ಒಂದು ಕ್ಷಣ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹೊನ್ನಾವರದ (Honnavara, Uttara Kannada) ರಾಮತೀರ್ಥ ಬಳಿಯಲ್ಲಿ ಈ ಘಟನೆ ನಡೆದಿದೆ. ಹೆಲಿಕಾಪ್ಟರ್ ಗೆ ಸಿಗ್ನಲ್ ಕೊಡುವ ಸ್ಮೊಕ್ ಕ್ಯಾಂಡಲ್ನಿಂದ ಹೆಲಿಪ್ಯಾಡ್ನಲ್ಲಿ ಬೆಂಕಿ (Fire) ಕಾಣಿಸಿಕೊಂಡಿತ್ತು ಎಂದು ತಿಳಿದ ಬಂದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಹೊನ್ನಾವರದ ಸೇಂಟ್ ಥಾಮಸ್ ಸಭಾಂಗಣದ ಆವರಣದಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗಿಯಾಗಲು ಡಿಕೆ ಶಿವಕುಮಾರ್ ಆಗಮಿಸಿದ್ದಾರೆ.


ಇತ್ತ ಕನಕಪುರದಲ್ಲಿ ಮಾತನಾಡಿದ ಡಿಕೆಶಿ ಸಹೋದರ ಸಂಸದ ಡಿ.ಕೆ ಸುರೇಶ್​​, ಕನಕಪುರದಲ್ಲಿ ಯಾರು ಬೇಕಾದರೂ ಬಂದು ಪ್ರಚಾರ ಮಾಡಲಿ. ಡಿ.ಕೆ.ಶಿವಕುಮಾರ್ ಕೂಡಾ ಮೇ 8ಕ್ಕೆ ಬಂದು ಮತಯಾಚನೆ ಮಾಡುತ್ತಾರೆ. ಅಮಿತ್ ಶಾ ಬಂದರೂ ಸಂತೋಷ, ಮೋದಿ ಬಂದರೂ ಸಂತೋಷ. ನಾನು‌ ಕೇಳೋದಿಷ್ಟೇ, ಮೇಕೆದಾಟು ನಮ್ಮ ತಾಲೂಕಿನಲ್ಲಿದೆ. ಆಯೋಜನೆಗೆ ನೀವು ಯಾವಾಗ ಅನುಮತಿ ಕೊಡ್ತೀರಾ? ಅದರ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಿ ಎಂದರು.




ಇದನ್ನೂ ಓದಿ: Karnataka Election 2023: ಕೈ ಪ್ರಣಾಳಿಕೆಗೆ ಬೆಂಕಿ ಇಟ್ಟ ಈಶ್ವರಪ್ಪ; ಕಾಂಗ್ರೆಸ್​ನಿಂದ ಭಯೋತ್ಪಾದನೆ ಕುಮ್ಮಕ್ಕು!


ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದಾರೆ


ಕಾಂಗ್ರೆಸ್ ಆಂಜನೇಯನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ ಇದು ಕಾಂಗ್ರೆಸನ್ನ ಸುಡುತ್ತೆ ಎಂಬ ಅಶೋಕ್ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿ, ಆರ್.ಅಶೋಕ್ 40% ಸರ್ಕಾರದ ಭ್ರಷ್ಟ ಮಂತ್ರಿ. ಅವರಿಗೆ ಹೇಳಲು ಏನೂ ಇಲ್ಲ. ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದಾರೆ. ಯಾಕೆ ಬ್ಯಾನ್ ಮಾಡಿದ್ದಾರೆ ಅಂತ ಯೋಗಿ ಹೇಳಬೇಕು? ಬಿಜೆಪಿ ಆಡಳಿತದ ಮೂರು ರಾಜ್ಯಗಳಲ್ಲಿ ಶ್ರೀರಾಮ ಸೇನೆ ಬ್ಯಾನ್ ಆಗಿದೆ. ಅದನ್ನ ಯಾವುದಕ್ಕೋಸ್ಕರ ಬ್ಯಾನ್ ಮಾಡಿದ್ದೀರಿ.


ಚುನಾವಣೆ ಹೊಸ್ತಿಲಲ್ಲಿ ಗೆಲ್ಲಲು ಆಗಲ್ಲ ಅಂತ ಧರ್ಮದ ಹೆಸರಿನಲ್ಲಿ ಅಡ್ಡ ಬರೋದು ಒಳ್ಳೆಯದಲ್ಲ. ನಾವು ಹಿಂದೂಗಳು, ಹಿಂದುತ್ವದ ಬಗ್ಗೆ ಬಿಜೆಪಿಯಿಂದ ಸಲಹೆ ಪಡೆಯಬೇಕಿಲ್ಲ. ನಾವೂ ಕೂಡಾ ದೇವಸ್ಥಾನಕ್ಕೆ ಹೋಗಿ ದೇವರು ಮಾಡುತ್ತೇವೆ. ಆದರೆ ಪ್ರಚಾರ ಮಾಡಿಕೊಂಡು ರಾಮ, ಹನುಮನ ಪೂಜೆ ಮಾಡೋದಿಲ್ಲ. ಓಟ್ ಗಾಗಿ ಪೂಜೆ ಮಾಡೋರಿಗೆ ಜನ ಉತ್ತರ ಕೊಡುತ್ತಾರೆ ಎಂದರು.


ನಾವೇ ಎಲ್ಲಾ ರೀತಿಯ ರಕ್ಷಣೆ ಕೊಡುತ್ತೇವೆ


ಕನಕಪುರದಲ್ಲಿ ಭಯದ ವಾತಾವರಣ ಇದೆ ಎಂಬ ಬಿ.ಎಲ್.ಸಂತೋಷ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿ.ಎಲ್.ಸಂತೋಷ್ ಗೆ ನಾವೇ ಎಲ್ಲಾ ರೀತಿಯ ರಕ್ಷಣೆ ಕೊಡುತ್ತೇವೆ. ಅವರೇ ಬಂದು ಮನೆಮನೆಗೆ ಬಂದು ಮತ ಕೇಳಲಿ. ಅದಕ್ಕೆ ಬಿಎಸ್ಎಫ್ ನ ಅವಶ್ಯಕತೆ ಇಲ್ಲ. ನಾನು ಒಂದು ಮಾತು ಹೇಳಿದರೆ ಸಾಕು ಅವರಿಗೆ ರಕ್ಷಣೆ ಸಿಗುತ್ತೆ ಎಂದರು.

top videos
    First published: