• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Laxman Savadi: ಕಮಲ ಬಿಟ್ಟು, 'ಕೈ' ಹಿಡಿದ ಲಕ್ಷ್ಮಣ ಸವದಿ; ಕ್ಷೇತ್ರಕ್ಕೆ ಅನುದಾನ ಕೊಡುವ ವಾಗ್ದಾನ ಮಾಡಿದ ಡಿಕೆಶಿ!

Laxman Savadi: ಕಮಲ ಬಿಟ್ಟು, 'ಕೈ' ಹಿಡಿದ ಲಕ್ಷ್ಮಣ ಸವದಿ; ಕ್ಷೇತ್ರಕ್ಕೆ ಅನುದಾನ ಕೊಡುವ ವಾಗ್ದಾನ ಮಾಡಿದ ಡಿಕೆಶಿ!

ಲಕ್ಷಣ ಸವದಿ ಕಾಂಗ್ರೆಸ್​ಗೆ ಸೇರ್ಪಡೆ

ಲಕ್ಷಣ ಸವದಿ ಕಾಂಗ್ರೆಸ್​ಗೆ ಸೇರ್ಪಡೆ

Laxman Savadi: ಕಮಲ ಬಿಟ್ಟು, 'ಕೈ' ಹಿಡಿದ ಲಕ್ಷ್ಮಣ ಸವದಿ; ಕ್ಷೇತ್ರಕ್ಕೆ ಅನುದಾನ ಕೊಡುವ ವಾಗ್ದಾನ ಮಾಡಿದ ಡಿಕೆಶಿ!

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಅಥಣಿ (Athani) ಕ್ಷೇತ್ರ ಬಿಜೆಪಿ (BJP) ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಬಾವುಟ ಹಾರಿಸಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಇಂದು ಅಧಿಕೃತವಾಗಿ ಕಾಂಗ್ರೆಸ್​​ಗೆ (Congress) ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ (KPCC) ಕಛೇರಿಯಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಂಬಿ ಪಾಟೀಲ್ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದಾರೆ. 


ಸವದಿಗೆ ಸ್ವಾಗತಕೋರಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು, ಇವತ್ತು ಒಂದು ಇತಿಹಾಸಿಕ ದಿನ. ಉತ್ತಮ ಕರ್ನಾಟಕ ಕಟ್ಟುವುದಕ್ಕೆ ಇಂದು ಒಳ್ಳೆಯ ದಿನ. ಹಿರಿಯ ನಾಯಕ ಲಕ್ಷ್ಮಣ್ ಸವದಿ ರಾಜಕೀಯದಲ್ಲಿ ಹಲವು ಉನ್ನತ ಹುದ್ದೆಗಳನ್ನ ಅಲಂಕರಿಸಿದವರು. ಲಕ್ಷ್ಮಣ್ ಸವದಿ ಪಕ್ಷಕ್ಕೆ ಸೇರ್ಪಡೆಯಾಗಿರೋದು ನನಗೆ ಬಹಳ ಸಂತೋಷವಾಗಿದೆ.


ಇದನ್ನೂ ಓದಿ: Laxman Savadi: ಬಿಜೆಪಿ ವಿರುದ್ಧ ಸಮರ ಸಾರಿರುವ ಲಕ್ಷ್ಮಣ ಸವದಿ ಯಾರು? ಪ್ರಭಾವಿ ನಾಯಕನ ರಾಜಕೀಯ ಏಳುಬೀಳು ಹೇಗಿತ್ತು?

top videos


  ಸವದಿಗೆ ಕೇವಲ ಅವರ ಕ್ಷೇತ್ರದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಕಾರ್ಯಕರ್ತರ ಬಳಗ ಇದೆ. ಬಲವಂತವಾಗಿ ಅವರನ್ನ ರಾಜಕೀಯದಿಂದ ನಿವೃತ್ತಿ ಮಾಡಲಾಗುತ್ತಿದೆ. ಪಕ್ಷ ಕಟ್ಟಿದವರನ್ನ ಬಿಜೆಪಿ ಬಲವಂತವಾಗಿ ನಿವೃತ್ತಿ ಮಾಡುತ್ತಿದೆ. ಈಶ್ವರಪ್ಪ ಅವರನ್ನು ಬಲವಂತವಾಗಿ ನಿವೃತ್ತಿ ಮಾಡುವಂತೆ ಬಿಜೆಪಿ ಮಾಡಿದೆ. ಹಲವು ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ, ಆಪರೇಷನ್ ಕಮಲದಿಂದ ಕರೆ ತಂದವರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.


  40 ಪರ್ಸೆಂಟ್ ಸರಕಾರ 40 ಸೀಟ್ ಗಿಂತ ಕಡಿಮೆ ಬರುತ್ತೆ. ಯಾವಾಗ ನಾನು ಲಕ್ಷ್ಮಣ್ ಸವದಿ ಅವರ ಹತ್ತಿರ ಮಾತಾಡಿದನೋ, ಅವರು ಹೇಳಿದರು ನಾನು ಎಲ್ಲ ನೋಡಿದ್ದೇನೆ. ಕರ್ನಾಟಕ ಬ್ರಾಂಡ್ ಕರ್ನಾಟಕ ಆಗಬೇಕು. ಬೆಳಗಾವಿಗೆ ಮಹಾರಾಷ್ಟ್ರ ಸರಕಾರ 855 ಹಳ್ಳಿಗೆ ಆರೋಗ್ಯ ಸ್ಕೀಂ ಅನ್ನು ಘೋಷಣೆ ಮಾಡುತ್ತೆ. ಇದರ ವಿರುದ್ಧ ಅವರ ಹೋರಾಟ ಮತ್ತು ನಮ್ಮ ಹೋರಾಟ ಎಂದು ಘೋಷಣೆ ಮಾಡಿದರು.

  First published: