• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Parameshwar: ನನ್ನ ತಲೆಗೆ ಬಿದ್ದಿದ್ದು ಕಲ್ಲು ಅಂತ ದೃಢಪಡಿಸಿದ ಪರಮೇಶ್ವರ್, ನಿಮ್ಮಂತೆ ನಂಗೆ ಡ್ರಾಮಾ ಬರೋದಿಲ್ಲ ಅಂತ ಎಚ್‌ಡಿಕೆಗೆ ಟಾಂಗ್!

Parameshwar: ನನ್ನ ತಲೆಗೆ ಬಿದ್ದಿದ್ದು ಕಲ್ಲು ಅಂತ ದೃಢಪಡಿಸಿದ ಪರಮೇಶ್ವರ್, ನಿಮ್ಮಂತೆ ನಂಗೆ ಡ್ರಾಮಾ ಬರೋದಿಲ್ಲ ಅಂತ ಎಚ್‌ಡಿಕೆಗೆ ಟಾಂಗ್!

ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್

ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್

ಎಚ್​​ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್ ಅವರು, ಬಹುಶಃ ಅವರಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು. ನನಗೆ ಅತ್ತು‌ ಕರೆದು ಡ್ರಾಮಾ ಮಾಡಿ ಅಭ್ಯಾಸ ಇಲ್ಲ ಎಂದು ಹೇಳಿದ್ದಾರೆ.

  • Share this:

ತುಮಕೂರು: ನಿನ್ನೆ ಪ್ರಚಾರದ ಮೇಲೆ ಮಾಜಿ ಡಿಸಿಎಂ ಪರಮೇಶ್ವರ್‌ (G Parameshwar) ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಡಿದ್ದರು (Stone Pelting). ಪರಮೇಶ್ವರ್ ತೆಲೆಗೆ ಪೆಟ್ಟಾಗಿತ್ತು. ಈ ಕುರಿತು ಮಾತನಾಡಿರುವ ಪರಮೇಶ್ವರ್‌, ಯಾರೋ ದುಷ್ಕರ್ಮಿಗಳು ಬೇಕಂತಲೇ ಎಸೆದಿದ್ದಾರೆ. ಪೊಲೀಸರು (Police) ತನಿಖೆ ಮಾಡಿ ಆರೋಪಿಗಳನ್ನು ಕಂಡು ಹಿಡಿಯಬೇಕು ಅಂತ ಹೇಳಿದ್ದು, ಈ ವೇಳೆ ನನಗೆ ಅತ್ತು‌ ಕರೆದು ಡ್ರಾಮಾ (Drama) ಮಾಡಿ ಅಭ್ಯಾಸ ಇಲ್ಲ ಅಂತ ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ (HD Kumaraswamy) ಟಾಂಗ್‌ ನೀಡಿದ್ದಾರೆ.


ಏಕಾಏಕಿ ಬಡ್ ಅಂತಾ ನನ್ನ ತಲೆಗೆ ಕಲ್ಲು ಬಿತ್ತು


ತುಮಕೂರಿನ ಸಿದ್ದಾರ್ಥ ನಗರದ ತಮ್ಮ‌ ನಿವಾಸದಲ್ಲಿಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ್ ಅವರು, ನಿನ್ನೆ ಚುನಾವಣಾ ಪ್ರಚಾರದಲ್ಲಿ ಅರಸಾಪುರ ಪಂಚಾಯ್ತಿಯಲ್ಲಿದ್ದೆ. ಸಂಜೆ 4:30 ರ ಸುಮಾರಿಗೆ ಭೈರೇನಹಳ್ಳಿಗೆ ಪ್ರಚಾರಕ್ಕೆ ಬಂದೆ‌, ಅಲ್ಲಿ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನನ್ನ ಎತ್ತುಕೋಬೇಡಿ ಅಂತಾ ಹೇಳುತ್ತಿದ್ದೆ, ಅಷ್ಟರಲ್ಲಿ ಜೆಸಿಬಿಯಲ್ಲಿ ಹೂ ಹಾಕಲು ತಯಾರಿ ಮಾಡಿದ್ದರು. ಆ ವೇಳೆ ನನ್ನ ಏಕಾಏಕಿ ಬಡ್ ಅಂತಾ ನನ್ನ ತಲೆಗೆ ಬಿತ್ತು. ಕೂಡಲೇ ರಕ್ತ ಸೋರಿಕೆಯಾದ ಕಾರಣ ನನ್ನನ್ನು ಕೆಳಗೆ ಇಳಿಸಿದರು ಎಂದು ವಿವರಿಸಿದರು.
ಕಲ್ಲು, ಹೂವಿನಲ್ಲಿ ಬಂತು ಅಂತಾ ಹೇಳೋಕೆ ಆಗಲ್ಲ


ಇದಕ್ಕೂ ಮುನ್ನ ನನ್ನನ್ನು ಭೇಟಿ ಮಾಡಲು ವೈದ್ಯರು ಬಂದಿದ್ದರು. ಕೂಡಲೇ ಅವರೇ ನನ್ನನ್ನು ಅಕ್ಕಿರಾಂಪುರದ ಆಸ್ಪತ್ರೆಯಲ್ಲಿ ಚಿಕಿಯ್ಸೆ ನೀಡಿದರು. ಕಲ್ಲು, ಹೂವಿನಲ್ಲಿ ಬಂತು ಅಂತಾ ಹೇಳೋಕೆ ಆಗಲ್ಲ. ಏಕೆಂದರೆ ಕಲ್ಲು ತುಂಬಾ ದಪ್ಪ ಇತ್ತು. ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿದರೂ ಅನ್ನಿಸುತ್ತದೆ. ಬೇಕು ಅಂತಲೇ ಎಸೆದಿದ್ದರೆ ಯಾರು? ಏಕೆ? ಎಸೆದರು ಅಂತ ಗೊತ್ತಿಲ್ಲ ಎಂದು ತಿಳಿಸಿದರು.


ಇದನ್ನೂ ಓದಿ: Bengaluru: ಮೋದಿ ರೋಡ್​​​​ ಶೋನಿಂದ ಛತ್ರಕ್ಕೆ ಬಾರದ ಮದುಮಗ, ಕಣ್ಣೀರಿಟ್ಟ ಮದುಮಗಳು!


ಈ ಹಿಂದೆ ಚಾಕು ಇರಿಯೋದಕ್ಕೆ ಪ್ರಯತ್ನ ಮಾಡಿದ್ರು


ನಾನು 35 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ನನಗೆ ಶತ್ರುಗಳು ಕಡಿಮೆ‌ ಅಂದುಕೊಂಡಿದ್ದೇನೆ. ಒಂದು ವೇಳೆ ದ್ವೇಷ ಇದ್ದರೆ ಈ ರೀತಿ ತೀರಿಸಿಕೊಳ್ಳಬಾರದು. ನಾನು ಪೊಲೀಸರಿಗೆ ತಿಳಿಸಿದ್ದೇನೆ, ಎಸ್​​ಪಿ ಅವರಿಗೂ ಕೂಡಲೇ ತನಿಖೆ ಮಾಡಲು ತಿಳಿಸಿದ್ದೇನೆ. ಈ ಹಿಂದೆಯೂ 1999ರಲ್ಲಿ ನನ್ನ ಮೇಲೆ ಇದೇ ರೀತಿ ನಡೆದಿತ್ತು. ಫಲಿತಾಂಶ ಬಳಿಕ ವಿಜಯೋತ್ಸವ ಆಚರಿಸುವ ವೇಳೆಯೂ ಚಾಕು ಇರಿಯೋದಕ್ಕೆ ಪ್ರಯತ್ನ ನಡೆದಿತ್ತು. ಹೀಗಾಗಿ ಪದೇ ಪದೇ ಯಾಕೆ ಹೀಗಾಗ್ತಿದೆ ತಿಳಿಯುತ್ತಿಲ್ಲ. ಈಗ ಒಂದೂವರೆ ಇಂಚು ಗಾಯವಾಗಿದೆ, ಸರ್ಜಿಕಲ್ ಗಮ್ ಹಾಕಿದ್ದಾರೆ. ಸ್ವಲ್ಪ ನೋವಿದೆ, ವೈದ್ಯರು ತಿಳಿಸಿದ್ರೆ ನಾಳೆಯೇ ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.


ಅತ್ತು ಕರೆದು ಹೇಳುವ ಅವಶ್ಯಕತೆ ನನಗೆ ಇಲ್ಲ


ಇದೇ ವೇಳೆ ಪರಮೇಶ್ವರ್ ಕಲ್ಲೆಸೆತ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಎಚ್​​ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್ ಅವರು, ಬಹುಶಃ ಅವರಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು. ನನಗೆ ಅತ್ತು‌ ಕರೆದು ಡ್ರಾಮಾ ಮಾಡಿ ಅಭ್ಯಾಸ ಇಲ್ಲ.


ಏಕೆಂದರೆ ಏಟು ತಿಂದವನು ನಾನು ಅಲ್ವಾ, ಅವರಲ್ಲ. ಅತ್ತು ಕರೆದು ಹೇಳುವ ಅವಶ್ಯಕತೆ ನನಗೆ ಇಲ್ಲ. ನಾನು ಜನರ ಮುಂದೆ ಹೋಗುತ್ತೇನೆ, ನಾನು ನಾಲ್ಕು ಸಲ ಗೆಲುವು ಎರಡು ಬಾರಿ ಸೋತಿದ್ದೇನೆ. ಸೋಲು ಗೆಲುವು ಎರಡೂ ನನಗೆ ಒಂದೇ. ಕಾರ್ಯಕರ್ತರು ಶಾಂತಿಯಿಂದ ಇರಬೇಕು. ನನ್ನ ಆರೋಗ್ಯ ವಿಚಾರಿಸಲು ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿ ಅನೇಕರು ಕರೆ ಮಾಡಿದ್ದರು ಎಂದು ತಿಳಿಸಿದರು.

First published: