ಕನಕಪುರ: ದಿನೇ ದಿನೇ ಚುನಾವಣಾ (Election) ಅಖಾಡ ರಂಗೇರುತ್ತಿದ್ದು, ಪ್ರಚಾರದ ಭರಾಟೆಯೂ ಜೋರಾಗಿದೆ. ಕನಕಪುರದ (Kanakapura) ಕೋಡಿಹಳ್ಳಿ ಭಾಗದಲ್ಲಿ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪುತ್ರನ ಆಕಾಶ್ ಕೆಂಪೇಗೌಡ ಅಪ್ಪನ (Father) ಪರ ಇದೇ ಮೊದಲ ಬಾರಿಗೆ ಭರ್ಜರಿ ಕ್ಯಾಂಪೇನ್ ಮಾಡಿದರು. ಡಿಕೆಶಿ ಪತ್ನಿ ಉಷಾ ಶಿವಕುಮಾರ್ (Usha Shivakumar), ಪುತ್ರ ಆಕಾಶ್ಗೆ ಬೆಂಬಲಿಗರಿಂದ ಗ್ರ್ಯಾಂಡ್ ವೆಲ್ಕಮ್ (Welcome) ಮಾಡಿದ್ದರು.
ಕನಕಪುರದಲ್ಲಿ ಜನರು ತುಂಬಾ ಖುಷಿ ಪಟ್ಟಿದ್ದಾರೆ
ಕನಕಪುರದಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಸ್ಪರ್ಧೆಯಿಂದ ಪ್ರಬಲ ಪೈಪೋಟಿ ಏರ್ಪಟ್ಟಿರುವಂತೆ ಕಂಡು ಬಂದಿದೆ. ಇದರ ನಡುವೆ ಆರ್ ಅಶೋಕ್ ಪರ ಪತ್ನಿ ಪ್ರಮೀಳಾ ಅವರು ಪ್ರಚಾರ ಮಾಡುತ್ತಿದ್ರೆ, ಡಿಕೆಶಿ ಪರ ಉಷಾ ಶಿವಕುಮಾರ್ ಅವರು ಪ್ರಚಾರಕ್ಕೆ ಇಳಿದಿದ್ದಾರೆ.
ಈ ನಡುವೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಉಷಾ ಅವರು, ಕನಕಪುರದಲ್ಲಿ 12 ದಿನ ಡಿಕೆ ಶಿವಕುಮಾರ್ ಪರ ಪ್ರಚಾರ ಮಾಡ್ತಿದ್ದೀನಿ. ಇಂದಿಗೆ ನಗರದ ಪ್ರಚಾರ ಮುಕ್ತಾಯವಾಗಿದೆ. ಕನಕಪುರದಲ್ಲಿ ಜನರು ತುಂಬಾ ಖುಷಿ ಪಟ್ಟಿದ್ದಾರೆ, ಬೆಂಬಲ ನೀಡಿದ್ದಾರೆ. ಇನ್ನು ಕೆಲ ಅಭಿವೃದ್ಧಿ ಕೆಲಸವಾಗಬೇಕಿದೆ, ಕಾಂಗ್ರೆಸ್ ಸರ್ಕಾರ ಬಂದ ನಂತರ ಮಾಡ್ತೀವಿ ಎಂದರು. ಇದೇ ವೇಳೆ ಡಿಕೆಶಿ ಸಿಎಂ ಆಗುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ಗೊತ್ತಿಲ್ಲ, ಹೈಕಮಾಂಡ್ ನಿರ್ಧಾರ, ದೇವರ ಇಚ್ಛೆ ಎಂದರು.
ಡಿಕೆ ಶಿವಕುಮಾರ್ ಪತ್ನಿ ಒಂದು ಕಡೆ ಪ್ರಚಾರ ಮಾಡುತ್ತಿದ್ದರೆ ಮತ್ತೊಂದು ಕಡೆ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಪತ್ನಿ ಪ್ರಮೀಳಾ ಕೂಡಾ ಕನಕಪುರ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದರು. ಕನಕಪುರ ಜನ ಬದಲಾವಣೆ ಬಯಸಿದ್ದಾರೆ. ಅಶೋಕ್ ಗೆದ್ದೇ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ