• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Shivakumar: ಸಿಎಂ ಪಟ್ಟಕ್ಕಾಗಿ ಕೊಲ್ಲೂರಲ್ಲಿ ಡಿಕೆಶಿ ನವಚಂಡಿಕಾಯಾಗ; ‘ಮುಖ್ಯಮಂತ್ರಿ ಸ್ಥಾನ ಪ್ರಾಪ್ತಿ ಪೂರ್ವಕ’ ಅಂತ ಆಶೀರ್ವದಿಸಿದ ಅರ್ಚಕರು

DK Shivakumar: ಸಿಎಂ ಪಟ್ಟಕ್ಕಾಗಿ ಕೊಲ್ಲೂರಲ್ಲಿ ಡಿಕೆಶಿ ನವಚಂಡಿಕಾಯಾಗ; ‘ಮುಖ್ಯಮಂತ್ರಿ ಸ್ಥಾನ ಪ್ರಾಪ್ತಿ ಪೂರ್ವಕ’ ಅಂತ ಆಶೀರ್ವದಿಸಿದ ಅರ್ಚಕರು

ಡಿಕೆ ಶಿವಕುಮಾರ್ ಚಂಡಿಕಾಯಾಗ

ಡಿಕೆ ಶಿವಕುಮಾರ್ ಚಂಡಿಕಾಯಾಗ

ನೋಡಪ್ಪಾ ನಾವು ರಾಜಕಾರಣಿಗಳು ಖಾವಿ ಹಾಕುವುದಿಲ್ಲ, ಬಿಳಿ ಬಟ್ಟೆ ಹಾಕೊಂಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

  • Share this:

ಉಡುಪಿ: ಮುಖ್ಯಮಂತ್ರಿ ಪಟ್ಟಕ್ಕಾಗಿ ಕೊಲ್ಲೂರಿನಲ್ಲಿ (Koluru) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ನವಚಂಡಿಕಾಯಾಗ ನಡೆಸಿದ್ದಾರಂತೆ. ಹೌದು, ನವಚಂಡಿಕಾಯಾಗದ (Nava Chandika Homam) ಕೊನೆಯಲ್ಲಿ ಪೂರ್ಣಾಹುತಿ ವೇಳೆ ಮುಖ್ಯಮಂತ್ರಿ (Chief Minister) ಹುದ್ದೆ ಪ್ರಾಪ್ತಿಗಾಗಿ ಪ್ರಾರ್ಥನೆ ಮಾಡಲಾಗಿದೆ. ಸಿಎಂ ಹುದ್ದೆ ವಿಚಾರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವಾಗಲೂ ಡಿಕೆ ಶಿವಕುಮಾರ್​, ಸಿಎಂ ಆಗುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗಾಗಿ ನವಚಂಡಿಕಾಯಾಗದ ವೇಳೆ ಸಂಕಲ್ಪ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಕೊಲ್ಲೂರಿನಲ್ಲಿ ಡಿಕೆ ಶಿವಕುಮಾರ್ ನವಚಂಡಿಕಾಯಾಗ ನಡೆಸಿದರಾ ಎಂಬ ಚರ್ಚೆ ಜೋರಾಗಿದೆ. 


ಕೊಲ್ಲೂರು ಮೂಕಾಂಬಿಕೆಗೆ ಪ್ರಿಯವಾದ ನವಚಂಡಿಕಾಯಾಗ ಸೇವೆಯಾಗಿದ್ದು, ನವಚಂಡಿಕಾಯಾಗದ ಕೊನೆಯಲ್ಲಿ ಪೂರ್ಣಾಹುತಿ ವೇಳೆ ಮುಖ್ಯಮಂತ್ರಿ ಹುದ್ದೆ ಪ್ರಾಪ್ತಿಗಾಗಿ ಪ್ರಾರ್ಥನೆ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆ ಪ್ರಾಪ್ತಿ ಆಗಲಿ ಅಂತ ಅರ್ಚಕರು ಪ್ರಾರ್ಥನೆ ಮಾಡಿ ಆಶೀರ್ವದಿಸಿದರು. ನಿನ್ನೆ ಹಾಗೂ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ನವಚಂಡಿಕಾಯಾಗ ನಡೆಸಲಾಗಿದ್ದು, ನರಸಿಂಹ ಅಡಿಗ ನೇತೃತ್ವದಲ್ಲಿ ಚಂಡಿಕಾಯಾಗ ನೆರವೇರಿಸಲಾಗಿತ್ತು.




ಡಿಕೆ ಶಿವಕುಮಾರ್ ಅವರೊಂದಿಗೆ ಪತ್ನಿ ಉಷಾ ಅವರು ಜೊತೆಯಾಗಿ ನವಚಂಡಿಕಾಯಾಗದಲ್ಲಿ ಪಾಲ್ಗೊಂಡಿದ್ದರು. ದೇವರ ಪ್ರಾರ್ಥನೆ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನೋಡಪ್ಪಾ ನಾವು ರಾಜಕಾರಣಿಗಳು ಖಾವಿ ಹಾಕುವುದಿಲ್ಲ, ಬಿಳಿ ಬಟ್ಟೆ ಹಾಕೊಂಡಿದ್ದೇವೆ ಎಂದು ಹೇಳಿದರು.


top videos



    ಇನ್ನು, ಉಡುಪಿ ನಗರದಲ್ಲಿ ಅಭ್ಯರ್ಥಿಯ ಪರ ಡಿಕೆ ಶಿವಕುಮಾರ್ ಮತಯಾಚನೆ ಕೂಡ ಮಾಡಿದರು. ನಗರದಲ್ಲಿ ಕೈಮುಗಿದು ಮತಯಾಚನೆ ಮಾಡುತ್ತಾ ಸಾಗಿದ ಡಿಕೆ ಶಿವಕುಮಾರ್ ಅವರೊಂದಿಗೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಪಾದಯಾತ್ರೆ ಬಳಿಕ ಉಡುಪಿಯ ಅಜ್ಜರಕಾಡು ಗಾಂಧಿ ಸ್ಮಾರಕದ ಎದುರು ಕಾಂಗ್ರೆಸ್ ಸಮಾವೇಶ ನಡೆಸಲಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರಸಾದ್ ಕಾಂಚನ್ ಪರ ಮತ ಪ್ರಚಾರ ನಡೆಸಿದ್ದಾರೆ.

    First published: