• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Devadurga: 4 ಬಾರಿ ಆಯ್ಕೆಯಾಗಿದ್ದ BJP ಅಭ್ಯರ್ಥಿಗೆ ಸೋಲಿನ ರುಚಿ ತೋರಿಸಿರುವ ಕರೆಮ್ಮ ಬಗ್ಗೆ ನಿಮಗೆಷ್ಟು ಗೊತ್ತು?

Devadurga: 4 ಬಾರಿ ಆಯ್ಕೆಯಾಗಿದ್ದ BJP ಅಭ್ಯರ್ಥಿಗೆ ಸೋಲಿನ ರುಚಿ ತೋರಿಸಿರುವ ಕರೆಮ್ಮ ಬಗ್ಗೆ ನಿಮಗೆಷ್ಟು ಗೊತ್ತು?

ಕರೆಮ್ಮ ಜಿ.ನಾಯಕ, ದೇವದುರ್ಗ ಶಾಸಕಿ

ಕರೆಮ್ಮ ಜಿ.ನಾಯಕ, ದೇವದುರ್ಗ ಶಾಸಕಿ

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿ ಕೆ.‌ಶಿವನಗೌಡ ನಾಯಕ ಅವರನ್ನು 34,256 ಮತಗಳ ಭಾರೀ ಅಂತರದಿಂದ ಪರಾಭವಗೊಳಿಸಿದ್ದಾರೆ‌. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಮಹಿಳಾ ಶಾಸಕಿಯಾಗಿ ಕರೆಮ್ಮ ನಾಯಕ ಹೊರ ಹೊಮ್ಮಿದ್ದಾರೆ.

  • News18 Kannada
  • 3-MIN READ
  • Last Updated :
  • Devadurga, India
  • Share this:

ರಾಯಚೂರು: ಕರ್ನಾಟಕದಲ್ಲಿ (Karnataka) ಕಾಂಗ್ರೆಸ್​ ಪಕ್ಷ (Congress) ಭರ್ಜರಿ ಬಹುಮತ ಪಡೆದು ಗೆಲುವು ಪಡೆದಿರುವ ಬೆನ್ನಲ್ಲೇ ರಾಹುಲ್​ ಗಾಂಧಿ (Rahul Gandhi) ವರ್ಚಸ್ಸು ಹೆಚ್ಚಾಗಿದ್ದು, ಪ್ರಧಾನಿ ಮೋದಿ (PM Modi) ಅವರ ಪ್ರಭಾವ ಕುಸಿದಿದೆ ಎಂಬ ಮಾತು ಕೇಳಿ ಬಂದಿದೆ. ರಾಜ್ಯದಲ್ಲಿ ರಾಹುಲ್​ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ (Bharat Jodo Yatra) ಹೆಚ್ಚು ದಿನಗಳು ಸಾಗಿದ್ದು, ರಾಜ್ಯ ನಾಯಕರ ತಂತ್ರಗಳು ಇಲ್ಲಿ ಫಲ ನೀಡಿದೆ ಎಂದು ಹೇಳಬಹುದು. ಈ ಎಲ್ಲಾದರ ನಡುವೆ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಅಚ್ಚರಿಯ ಅಭ್ಯರ್ಥಿಗಳು ಗೆಲುವು ಪಡೆಯುವುದರೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಈ ಬಾರಿ ದೇವದುರ್ಗ (Devadurga) ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಮುದಾಯದ ಅಭ್ಯರ್ಥಿಗಳ ಕದನಕ್ಕೆ ಕಾರಣವಾಗಿತ್ತು. ಈ ಕದನದಲ್ಲಿ ಕರೆಮ್ಮ ಜಿ ನಾಯಕ (Karemma G Nayak) ಅವರು ಗೆಲುವು ಪಡೆದುಕೊಂಡಿದ್ದಾರೆ. ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದ ಶ್ರೀ ದೇವಿ ಆರ್ ನಾಯಕ, ಬಿಜೆಪಿ ಅಭ್ಯರ್ಥಿ ಕೆ ಶಿವಣ್ಣ ಗೌಡ ನಾಯಕ ಅವರನ್ನು ಸೋಲಿಸಿ ಜಯ ಪಡೆದುಕೊಂಡಿದ್ದಾರೆ.


ಕರೆಮ್ಮ ಜಿ ನಾಯಕ ಅವರ ಹಿನ್ನೆಲೆ ಏನು?


ಕರೆಮ್ಮ ಜಿ.ನಾಯಕ ಅವರ 1972 ಆಗಸ್ಟ್​ 29 ರಂದು ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಚಿಂತಲಕುಂಟಿ ಗ್ರಾಮದಲ್ಲಿ ಪೂರ್ಣಗೊಳಿಸಿ, ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಮಸರಕಲ್ ಗ್ರಾಮದಲ್ಲಿ ಪಡೆದುಕೊಂಡಿದ್ದರು. ಇನ್ನು, ಕರೆಮ್ಮ ಅವರ ರಾಜಕೀಯ ಅನುಭವ ಬಗ್ಗೆ ನೋಡುವುದಾದರೆ, 2005ರಲ್ಲಿ ಮುಷ್ಠೂರು ಎಂಬ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ 2.5 ವರ್ಷ ಕಾರ್ಯ ನಿರ್ವಹಿಸಿದ್ದರು.




ಆ ಬಳಿಕ 10 ವರ್ಷಗಳ ಕಾಲ ದೇವದುರ್ಗ ತಾಲೂಕು ಕಾಂಗ್ರೆಸ್ ನ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ಜೆಡಿಎಸ್ ಪಕ್ಷದಿಂದ ದೇವದುರ್ಗ ವಿಧಾನಸಭಾ ST ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 11 ಸಾವಿರ ಮತಗಳನ್ನು ಪಡೆದು‌ ಪರಾಭವಗೊಂಡಿದ್ದರು.


ಇದನ್ನೂ ಓದಿ: Pradeep Eshwar: ಸಚಿವ ಸುಧಾಕರ್ ಎದುರು ತೊಡೆತಟ್ಟಿದ ಪ್ರದೀಪ್ ಈಶ್ವರ್ ಯಾರು? ಬಲಿಷ್ಠ ನಾಯಕನ ವಿರುದ್ಧ ಗೆದ್ದಿದ್ದು ಹೇಗೆ?


ಆ ಬಳಿಕ ನಡೆದ 2018ರಲ್ಲಿ ಜೆಡಿಎಸ್ ಟಿಕೆಟ್​ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 25,600 ಮತಗಳನ್ನು ಪಡೆದುಕೊಂಡಿದ್ದರು. ಇದನ್ನು ಮನಗಂಡು ಜೆಡಿಎಸ್ ವರಿಷ್ಠರು ಈ ಬಾರಿ ಕರೆಮ್ಮ ಅವರಿಗೆ ಟಿಕೆಟ್ ನೀಡಿದ್ದರು. ಈ ಬಾರಿ ಚುನಾವಣೆಯಲ್ಲಿ ಗೆಲುವು ಪಡೆದ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.


top videos



    ಇದರೊಂದಿಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿ ಕೆ.‌ಶಿವನಗೌಡ ನಾಯಕ ಅವರನ್ನು 34,256 ಮತಗಳ ಭಾರೀ ಅಂತರದಿಂದ ಪರಾಭವಗೊಳಿಸಿದ್ದಾರೆ‌. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಮಹಿಳಾ ಶಾಸಕಿಯಾಗಿ ಕರೆಮ್ಮ ನಾಯಕ ಹೊರ ಹೊಮ್ಮಿದ್ದಾರೆ. ಈ ಹಿಂದೆ ಅಂದರೆ 1994ರಲ್ಲಿ ಜನತಾದಳ ಪಕ್ಷದಿಂದ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಟಿ ಲಲಿತಾನಾಯಕ್ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದರು.

    First published: