• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election: ಅಧಿಕೃತ ಹೊಂದಾಣಿಕೆಯೋ, ರಾಜಕೀಯ ವ್ಯಭಿಚಾರವೋ? ಜೆಡಿಎಸ್​ ನಾಯಕನಿಗೆ ಸಿ.ಟಿ ರವಿ ಪ್ರಶ್ನೆ

Karnataka Election: ಅಧಿಕೃತ ಹೊಂದಾಣಿಕೆಯೋ, ರಾಜಕೀಯ ವ್ಯಭಿಚಾರವೋ? ಜೆಡಿಎಸ್​ ನಾಯಕನಿಗೆ ಸಿ.ಟಿ ರವಿ ಪ್ರಶ್ನೆ

ಸಿ.ಟಿ ರವಿ

ಸಿ.ಟಿ ರವಿ

ಹಾಲುಮತ ಸಮಾಜ ಹಾಲಿನಂತಹಾ ಮನಸ್ಸು ಇರುವವರು. ಹುಳಿ ಹಿಂಡುವ ರಾಜಕಾರಣಿಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ ಎಂದು ಸಿ.ಟಿ ರವಿ ಹೇಳಿದ್ದಾರೆ.

 • News18 Kannada
 • 4-MIN READ
 • Last Updated :
 • Chikmagalur, India
 • Share this:

ಚಿಕ್ಕಮಗಳೂರು: ಕಾಂಗ್ರೆಸ್​​ಗೆ (Congress) ಮತ ಹಾಕಿ ಎಂದ ಎಸ್.ಎಲ್‌.ಭೋಜೇಗೌಡರಿಗೆ (SL Bhojegowda) ಜೆಡಿಎಸ್​​ನದ್ದು ಅಧಿಕೃತ ಹೊಂದಾಣಿಕೆಯೋ, ರಾಜಕೀಯ ವ್ಯಭಿಚಾರವೋ ಅಂತಾ ಸಿ.ಟಿ ರವಿ (CT Ravi) ತಿರುಗೇಟು ಕೊಟ್ಟಿದ್ದಾರೆ. ನಿಮ್ಮದು ಚುನಾವಣಾ ಪೂರ್ವ ಮೈತ್ರಿಯಾದರೆ (Alliance) ಘೋಷಣೆ ಮಾಡಿ, ಸಾಮರ್ಥ್ಯವಿದ್ದರೆ ಜಿಲ್ಲೆಯಲ್ಲಿ ಜೆಡಿಎಸ್​ಗೆ (JDS) ಮತ ಹಾಕಬೇಡಿ ಎಂದು ಹೇಳಿ. ತಿಮ್ಮಶೆಟ್ಟಿ ಮನೆಯನ್ನು ಏಕೆ ಹಾಳು ಮಾಡುತ್ತೀರಾ? ಆತ ಫ್ಲೆಕ್ಸ್ ಹಾಕೋಕೆ ಅಷ್ಟೆ ಸೀಮಿತಾನ. ಮನೆಹಾಳು ಮಾಡುವ ರಾಜಕಾರಣ ಎಷ್ಟು ದಿನ ನಡೆಯುತ್ತೆ ಅಂತಾ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.


ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ ರವಿ ಅವರು ಎಸ್.ಎಲ್‌ ಭೋಜೇಗೌಡರಿಗೆ ತಿರುಗೇಟು ನೀಡಿದರು. ಕಾಂಗ್ರೆಸ್ಸಿಗೆ ಮತ ಹಾಕಿ ಎಂದಿದ್ದಾರೆ. ನಿಮ್ಮದು ಚುನಾವಣಾ ಪೂರ್ವ ಮೈತ್ರಿಯಾದರೆ ಘೋಷಣೆ ಮಾಡಿ, ಸಾಮರ್ಥ್ಯವಿದ್ದರೆ ಜಿಲ್ಲೆಯಲ್ಲಿ ಜೆಡಿಎಸ್ ಗೆ ಮತ ಹಾಕಬೇಡಿ ಎಂದು ಹೇಳಿ. ಕಳೆದ ಬಾರಿ ಹರೀಶನ ಮನೆ, ಈ ಬಾರಿ ತಿಮ್ಮಶೆಟ್ಟಿ ಮನೆ ಹಾಳು ಅಂತಿದ್ದಾರೆ ಜನ. ಮನೆಹಾಳು ಮಾಡುವ ರಾಜಕಾರಣ ಎಷ್ಟು ದಿನ ನಡೆಯುತ್ತೆ. ಬೇರೆಯವರ ಮನೆ ಹಾಳು ಮಾಡಿದರೆ ಒಂದು ದಿನ ನಮ್ಮ ಮನೆಯನ್ನು ಹಾಳು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Karnataka Election: 4 ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿದ ರಾಹುಲ್​ ಗಾಂಧಿಗೆ ಮಳೆ ಕಾಟ!


ಅಲ್ಲದೆ, ಎಸ್.ಡಿ.ಪಿ.ಐ, ಪಿ.ಎಫ್.ಐ, ಸಿ.ಪಿ.ಐ, ಕಾಂಗ್ರೆಸ್, ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಹಾಲುಮತ ಸಮಾಜ ಹಾಲಿನಂತಹಾ ಮನಸ್ಸು ಇರುವವರು. ಹುಳಿ ಹಿಂಡುವ ರಾಜಕಾರಣಿಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ. ಕುರುಬ ಸಮಾಜ ಹೆಚ್ಚಿರುವ ಊರುಗಳಲ್ಲಿ ಬಿಜೆಪಿ ಹೆಚ್ಚಿನ ಲೀಡ್ ಬರುತ್ತೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ನಮ್ಮ ಸಿಎಂ ಆಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.ಇತ್ತ ಸಿ.ಟಿ ರವಿ ಹೇಳಿಕೆಗೆ ಟಾಂಗ್ ಕೊಟ್ಟಿರುವ ಎಂ.ಎಲ್.ಸಿ. ಭೋಜೇಗೌಡ, ಬಿಜೆಪಿಗೂ ಎಸ್.ಡಿ.ಪಿ.ಐಗೂ ಏನು ಸಂಬಂಧ? ನಿಮ್ಮ ಕೈನಲ್ಲಿ ಎಸ್.ಡಿ.ಪಿ.ಐ. ಬ್ಯಾನ್ ಮಾಡಲು ಆಗಲ್ವಾ? ಬ್ಯಾನ್ ಮಾಡಲು ರಾಷ್ಟ್ರಮಟ್ಟದಲ್ಲಿ ಏಕೆ ತೀರ್ಮಾನ ಮಾಡಿಲ್ಲ. ನಿಮಗೆ ತಾಕತ್ತಿದ್ದರೆ ಎಸ್.ಡಿ.ಪಿ.ಐ. ಬ್ಯಾನ್ ಮಾಡಿ. ಮತ ವಿಭಜನೆಗೆ ಎಸ್.ಡಿ.ಪಿ.ಐ.ಗೆ ಪ್ರೋತ್ಸಾಹ ನೀಡಿ, ಕೋಟ್ಯಾಂತರ ಹಣ ನೀಡಿದ್ದು ಯಾರು ಎಂದು ಟೀಕಿಸಿದ್ದಾರೆ.

First published: