ವಿಜಯಪುರ: ಕಾಂಗ್ರೆಸ್ (Congress) ನಾಯಕ ಎಂಬಿ ಪಾಟೀಲ್ (MB Patil) ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ದೇವಾಪೂರ ಗ್ರಾಮದ (Village) ಪ್ರಚಾರದ ವೇಳೆ ಈ ಘಟನೆ ನಡೆದಿದೆ. ಏನ್ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ (Question) ಯುವಕನಿಗೆ ಕಪಾಳಕ್ಕೆ ಹೊಡೆದಿದ್ದಾರೆ. ನಮ್ಮ ಗ್ರಾಮಕ್ಕೆ ಏನು ಅಭಿವೃದ್ಧಿ (Development) ಮಾಡಿದ್ದೀರಿ ಎಂದು ಯುವಕ ಪ್ರಶ್ನಿಸಿದ. ಇದಕ್ಕೆ ಸಿಟ್ಟಾದ ಎಂ.ಬಿ ಪಾಟೀಲ್, ಹಣಮಂತ ತುಪ್ಪದ ಎಂಬ ಕಾರ್ಯಕರ್ತನಿಗೆ ಹೊಡೆದಿದ್ದಾರೆ.
ಈ ಕುರಿತ ವಿಡಿಯೋವನ್ನು ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಗೂಂಡಾಗಿರಿ ಕಾಂಗ್ರೆಸ್ ಪಕ್ಷದ ಡಿಎನ್ಎನಲ್ಲಿದೆ. ಕಾಂಗ್ರೆಸ್ ಶಾಸಕ ಎಂಪಿ ಪಾಟೀಕ್, ತನ್ನ ಕುಂದುಕೊರತೆಗಳನ್ನು ಹಂಚಿಕೊಳ್ಳಲು ಬಂದಿದ್ದ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದರೆ ಹಲ್ಲೆ ಮಾಡುವುದು ಕಾಂಗ್ರೆಸ್ ನೀಡುವ ಏಕೈಕ ಭರವಸೆಯಾಗಿದೆ ಎಂದು ಕಿಡಿಕಾರಿದೆ.
ಇದನ್ನೂ ಓದಿ: Harshika Poonacha: ‘ನಾನು ಕ್ಯಾಂಪೇನ್ ಮಾಡಿದವರೆಲ್ಲರೂ ಗೆದ್ದಿದ್ದಾರೆ’ -ಎಲೆಕ್ಷನ್ ಅಖಾಡದಲ್ಲಿ ನಟಿ ಹರ್ಷಿಕಾ ಪೂಣಚ್ಚ
ಇನ್ನು, ಬಬಲೇಶ್ವರ ಕ್ಷೇತ್ರದ ದೇವಾಪೂರ ಗ್ರಾಮದ ಹಣಮಂತ ತುಪ್ಪದ ಎಂಬ ಕಾರ್ಯಕರ್ತನಿಗೆ ಎಂಬಿ ಪಾಟೀಲ್ ಕಪಾಳಮೋಕ್ಷ ಮಾಡಿದ್ದು, ನಿನ್ನೆ ತಡರಾತ್ರಿ ಪ್ರಚಾರಕ್ಕೆ ಬಂದಾಗ ದೇವಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ. ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ ಬಿ ಪಾಟೀಲ್ ಅವರು ನಮ್ಮ ಗ್ರಾಮಕ್ಕೆ ಏನು ಅಭಿವೃದ್ಧಿ ಮಾಡಿದ್ದೀರಿ ಎಂಬ ಯುವಕ ಪ್ರಶ್ನೆ ಮಾಡುತ್ತಿದ್ದಂತೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ವಿಡಿಯೋದಲ್ಲಿ ಯುವಕ ಪ್ರಶ್ನೆ ಮಾಡುತ್ತಿದ್ದ ಸಂದರ್ಭದಲ್ಲಿ ಹಲವು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಯುವಕ ನಾನು ಸಾಹೇಬರನ್ನು ಕೇಳುತ್ತಿದ್ದೇನೆ, ಬೇಕು ಎಂದರೆ ಅವರ ಕಾಲಿಗೆ ನಮಸ್ಕಾರ ಮಾಡಿ ಕೇಳುತ್ತೇನೆ. ದಯವಿಟ್ಟು ನನಗೆ ಮಾತನಾಡಲು ಅವಕಾಶಕೊಡಿ ಎಂದು ಮನವಿ ಮಾಡಿದ್ದಾನೆ. ಈ ವೇಳೆ ಯುವಕನಿಗೆ ಸಮಾಧಾನ ಮಾಡಲು ಮುಂದಾದ ಶಾಸಕರು, ಗರಂ ಆಗಿ ಯುವಕಮ ಕೆನ್ನೆ ಬಾರಿಸಿರುವುದನ್ನು ಕಾಣಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ