• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Yogi Adityanath: ರಾಮಾಯಣದಲ್ಲಿ ಹನುಮಂತ ತ್ಯಾಗ ಮಾಡಿದಂತೆ, ಈಗ ದೇಶಕ್ಕಾಗಿ ಮೋದಿ ತ್ಯಾಗ ಮಾಡ್ತಿದ್ದಾರೆ! ಯೋಗಿ ಆದಿತ್ಯನಾಥ್​ ಗುಣಗಾನ

Yogi Adityanath: ರಾಮಾಯಣದಲ್ಲಿ ಹನುಮಂತ ತ್ಯಾಗ ಮಾಡಿದಂತೆ, ಈಗ ದೇಶಕ್ಕಾಗಿ ಮೋದಿ ತ್ಯಾಗ ಮಾಡ್ತಿದ್ದಾರೆ! ಯೋಗಿ ಆದಿತ್ಯನಾಥ್​ ಗುಣಗಾನ

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭರ್ಜರಿ ಪ್ರಚಾರ

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭರ್ಜರಿ ಪ್ರಚಾರ

ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ರೈತರು ತಲೆ ಬಾಗಿಸಿಕೊಂಡು ಓಡಾಟ ಮಾಡುತ್ತಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ರೈತರು ತಲೆ ಎತ್ತಿ ಓಡಾಡುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

  • News18 Kannada
  • 2-MIN READ
  • Last Updated :
  • Raichur, India
  • Share this:

ರಾಯಚೂರು: ವಿಧಾನಸಭಾ ಚುನಾವಣೆ (Assembly Elections) ಹಿನ್ನೆಲೆ ರಾಯಚೂರಿನ ಪಕ್ಷದ ಅಭ್ಯರ್ಥಿಗಳ ಪರ ಉತ್ತರ ಪ್ರದೇಶ (Uttar PRadesh) ಸಿಎಂ ಯೋಗಿ ಆದಿತ್ಯನಾಥ್​ (Yogi Adityanath) ಪ್ರಚಾರ ನಡೆಸಿದ್ದಾರೆ. ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಯೋಗಿ, ತುಂಗಾ, ಕೃಷ್ಣ ನದಿ ಹರಿಯುವ ಹರಿದಾಸರ ನಾಡಿನ ಜನರಿಗೆ ನಮಸ್ಕಾರ. ಹರಿದಾಸರ ಭೂಮಿ ಇದು, ಭಾರತದ ಸನಾತನ ಧರ್ಮದ ಸಂದೇಶ ನಾಡಿನ ತುಂಬಾ ಹರಡಿದ್ದಾರೆ. ನಿಜಾಮರ ವಿರುದ್ಧ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ನಾಗರಿಕರಿಗೆ ನಮನ ಸಲ್ಲಿಸುತ್ತೇನೆ. ನಾನು ಅಯೋಧ್ಯೆ ಪುಣ್ಯ ಭೂಮಿಯಿಂದ ಇಲ್ಲಿಗೆ ಬಂದಿದ್ದೇನೆ. ಉತ್ತರ ಪ್ರದೇಶ ಮತ್ತು ಕರ್ನಾಟಕವೂ (Karnataka) ರಾಮ- ಹನುಮಂತ ಸಂಬಂಧ ಇದ್ದಂತೆ , ನಾನು ಇವತ್ತು ಹನುಮಂತನ (Hanuma) ಭೂಮಿಗೆ ಬಂದಿದ್ದಕ್ಕೆ ಖುಷಿಯಾಗಿದೆ. ಭಾರತವೂ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಆಗುತ್ತಿದೆ. ಭಾರತದ ಅಭಿವೃದ್ಧಿ (Development) ಇಡೀ ವಿಶ್ವವೇ ಎದುರು ನೋಡುವಂತೆ ಆಗುತ್ತಿದೆ. ರಾಮಾಯಣ ಕಾಲದಲ್ಲಿ ಹನುಮಂತ ತ್ಯಾಗ ಮಾಡಿದಂತೆ, ಈಗ ದೇಶಕ್ಕಾಗಿ ಮೋದಿ ತ್ಯಾಗ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದರು.


ರಾಮರಾಜ್ಯ ಕಲ್ಪನೆ ಉತ್ತರ ಪ್ರದೇಶದಲ್ಲಿ ಡಬಲ್ ಎಂಜಿನ್ ಸರ್ಕಾರದಿಂದ ಆಗಿದೆ


ದೇಶದಲ್ಲಿ ರೈಲು, ವಿಮಾನ, ಏಮ್ಸ್ ಹೀಗೆ ಹತ್ತಾರು ಅಭಿವೃದ್ಧಿ ಮಾಡಿದ್ದೇವೆ. ಟೆಕ್ಸ್ ಟೈಲ್ ಪಾರ್ಕ್ ಆಗಲಿದೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ರೈತರು ತಲೆ ಬಾಗಿಸಿಕೊಂಡು ಓಡಾಟ ಮಾಡುತ್ತಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ರೈತರು ತಲೆ ಎತ್ತಿ ಓಡಾಡುತ್ತಿದ್ದಾರೆ. ಐಟಿ ಹಬ್ ಹಿಂದಿನ ಕಾಲದ ನಳಂದ ವಿವಿ ನೆನಪಿಸುತ್ತಿದೆ.




ಉತ್ತರ ಪ್ರದೇಶದಲ್ಲಿ ಜನರು ಇಷ್ಟು ಏಕೆ ಪ್ರೀತಿ ಮಾಡುತ್ತಾರೆ ಎಂದರೆ ಇದು ಡಬಲ್ ಎಂಜಿನ್ ಸರ್ಕಾರದ ಸಾಧನೆ ಆಗಿದೆ. ರಾಮರಾಜ್ಯ ಕಲ್ಪನೆ ಉತ್ತರ ಪ್ರದೇಶದಲ್ಲಿ ಮತ್ತೆ ಡಬಲ್ ಎಂಜಿನ್ ಸರ್ಕಾರದಿಂದ ಆಗಿದೆ. ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿಯೂ ನಮ್ಮ ಕೊಡುಗೆ ಆಗಿದೆ ಎಂದು ಯೋಗಿ ಹೇಳಿದರು.


ಅಲ್ಲದೆ, ಪಿಎಫ್​ಐ ಸೊಂಟವನ್ನು ನಾವು ಮುರಿದಿದ್ದೇವೆ, ಈ ಪಿಎಫ್​​ಐ ತಲೆನೇ ಎತ್ತುವುದೇ ಇಲ್ಲ. ಉತ್ತರ ಪ್ರದೇಶದಲ್ಲಿ ವಾಲ್ಮೀಕಿ ಜಯಂತಿ ದಿನ ಎಲ್ಲಾ ದೇವಸ್ಥಾನದಲ್ಲಿ ಪೂಜೆ ನಡೆಯುತ್ತೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ನಡೆದಿದೆ.


ಬಿಜೆಪಿ ಅಭ್ಯರ್ಥಿ ಡಾಕ್ಟರ್ ಇದ್ದಾರೆ, ಎಲ್ಲಾ ರೋಗಕ್ಕೆ ಔಷಧಿ ಗೊತ್ತು

top videos


    ಕೊರೊನಾ ಕಾಲದಲ್ಲಿ 200 ಕೋಟಿ ವ್ಯಾಕ್ಸಿನೇಷನ್‌ ಮಾಡಿದ್ದೇವೆ. 4 ಕೋಟಿ ಜನರಿಗೆ ಪಿಎಂ ಆವಾಸ್ ಅಡಿಯಲ್ಲಿ ಮನೆ ನೀಡಿದ್ದೇವೆ. ಕಾಂಗ್ರೆಸ್ ರಿವರ್ಸ್ ಗೆರ್ ಇದ್ದಂತೆ, ಅಭಿವೃದ್ಧಿ ವಿಚಾರದಲ್ಲಿ ಅದು ದೇಶವನ್ನ ಹಿಂದಕ್ಕೆ ಕರೆದುಕೊಂಡು ಹೋಗುತ್ತೆ. ಟೀಂ ಇಂಡಿಯಾದ ಕ್ಯಾಪ್ಟನ್ ತರ ಮೋದಿ ಕೆಲಸ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಬಂದರೆ ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗುತ್ತೆ.


    ಬಿಜೆಪಿ ಅಭ್ಯರ್ಥಿ ಡಾಕ್ಟರ್ ಇದ್ದಾರೆ, ಎಲ್ಲಾ ರೋಗಕ್ಕೆ ಔಷಧಿ ಗೊತ್ತು. ಕಾಂಗ್ರೆಸ್ ಓಡಿಸುವುದು ಗೊತ್ತು. ಜನರ ರೋಗಗಳನ್ನ ವಾಸಿ ಮಾಡುವುದು ಬಿಜೆಪಿ ಅಭ್ಯರ್ಥಿ ಡಾ. ಶಿವರಾಜ್ ಪಾಟೀಲ್ ಕೆಲಸ. ಅದೇ ರೀತಿ ಕಾಂಗ್ರೆಸ್ ಪಕ್ಷ ಎನ್ನುವುದು ಒಂದು ಭೀಮಾರಿ. ಆ ಭೀಮಾರಿಯನ್ನು ವಾಸಿ ಮಾಡೋದಕ್ಕಾಗಿ ನೀವು ಡಾ. ಶಿವರಾಜ್ ಪಾಟೀಲ್​​ರನ್ನ ಆರಿಸಿ ಕಳಹಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು