• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Basavaraj Bommai: ನಿರೀಕ್ಷೆ ಮಟ್ಟದಲ್ಲಿ ಸೇರದ ಕಾರ್ಯಕರ್ತರು; ನೆಲಮಂಗಲದ ದಾಬಸ್​ಪೇಟೆಯಲ್ಲಿ ಸಿಎಂ ರ್ಯಾಲಿ ರದ್ದು

Basavaraj Bommai: ನಿರೀಕ್ಷೆ ಮಟ್ಟದಲ್ಲಿ ಸೇರದ ಕಾರ್ಯಕರ್ತರು; ನೆಲಮಂಗಲದ ದಾಬಸ್​ಪೇಟೆಯಲ್ಲಿ ಸಿಎಂ ರ್ಯಾಲಿ ರದ್ದು

ಸಿಎಂ ಬಸವರಾಜ ಬೊಮ್ಮಾಯಿ ರೋಡ್​ ಶೋ

ಸಿಎಂ ಬಸವರಾಜ ಬೊಮ್ಮಾಯಿ ರೋಡ್​ ಶೋ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಣದ ಹೊಳೆ ಹರಿಸುತ್ತಿದ್ದಾರೆ. ಆದರೆ ಹಣ, ತೋಳ್ಬಲ ನೆಲಮಂಗಲದಲ್ಲಿ ನಡೆಯುವುದಿಲ್ಲ. ಎಲ್ಲಾ ಸಮುದಾಯದವರು ಸಪ್ತಗಿರಿ ಶಂಕರ್‌ನಾಯಕ್‌ಗೆ ಬೆಂಬಲ ಕೊಡಲು ತೀರ್ಮಾನ ಮಾಡಿದ್ದಾರೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

  • Share this:

ನೆಲಮಂಗಲ: ಯಲಹಂಕ (Yelahanka) ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಜನವಾಹಿನಿ ವಾಹನದಲ್ಲಿ ರೋಡ್ ಶೋ ನಡೆಸಿದ್ದು, ಸಾವಿರಾರು ಕಾರ್ಯಕರ್ತರ ನಡುವೆ ಅಬ್ಬರದ ಪ್ರಚಾರ ನಡೆಸಿದರು. ಇದೇ ವೇಳೆ ಯಲಹಂಕ ಶಾಸಕ ವಿಶ್ವನಾಥ್ ಜೊತೆ ವಾಹನದ ಮೇಲೆ ನಿಂತು ಹಾಡಿಗೆ ಸಿಎಂ ಡ್ಯಾನ್ಸ್ (Dance) ಕೂಡ ಮಾಡಿದ್ರು, ಅಲ್ಲದೆ ಶಿಳ್ಳೆ ಹೊಡೆದು ಕಾರ್ಯಕರ್ತರಿಗೆ ಹುರಿದುಂಬಿದರು. ಈ ನಡುವೆ ನೆಲಮಂಗಲದ ದಾಬಸ್​ಪೇಟೆಯಲ್ಲಿ (Dabaspete) ನಡೆಯಬೇಕಿದ್ದ ಸಿಎಂ ರ್ಯಾಲಿ ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನೆಲಮಂಗಲ (Nelamangala) ನಗರದಲ್ಲಿ ಕಾರ್ಯಕರ್ತರ ನಿರುತ್ಸಾಹ ತೋರಿದ್ದು, ಈಗಾಗಿ ಡಾಬಸ್‌ಪೇಟೆಯಲ್ಲಿ ರೋಡ್‌ಶೋ (Road show) ರದ್ದು ಮಾಡಲಾಗಿದೆ. ಅಲ್ಲದೆ ಸ್ಥಳೀಯರ ಮುಖಂಡರ ವಿರುದ್ಧ ಸಿಎಂ ಗರಂ ಆಗಿದ್ದಾರೆ ಎನ್ನಲಾಗಿದೆ.


ರ್ಯಾಲಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಣದ ಹೊಳೆ ಹರಿಸುತ್ತಿದ್ದಾರೆ. ಆದರೆ ಹಣ, ತೋಳ್ಬಲ ನೆಲಮಂಗಲದಲ್ಲಿ ನಡೆಯುವುದಿಲ್ಲ. ಎಲ್ಲಾ ಸಮುದಾಯದವರು ಸಪ್ತಗಿರಿ ಶಂಕರ್‌ನಾಯಕ್‌ಗೆ ಬೆಂಬಲ ಕೊಡಲು ತೀರ್ಮಾನ ಮಾಡಿದ್ದಾರೆ. ನೆಲಮಂಗಲ ಅಭಿವೃದ್ದಿ ಮಾಡೋದು ನಮ್ಮ ಕರ್ತವ್ಯ, ಇದನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತೇವೆ. ಈ ಭಾರೀ ಕಾಂಗ್ರೆಸ್ ಅಥಾಶರಾಗಿ ಧರ್ಮ ಹಾಗೂ ಜಾತಿ ವಿಚಾರದಲ್ಲಿ ಬಹಳ ಕೀಳು ಮಟ್ಟದಲ್ಲಿ ಮಾಡುತ್ತಿದ್ದಾರೆ.




ಇದನ್ನೂ ಓದಿ: Karnataka Election 2023: ಮಂಡ್ಯದಲ್ಲಿ ಜೆಡಿಎಸ್​​​ಗೆ ಶಾಕ್ ಮೇಲೆ ಶಾಕ್!


ಕಾಂಗ್ರೆಸ್ ಬ್ರಿಟಿಷರ ವಂಶ, ಬ್ರಿಟಿಷರು ಬಿತ್ತಿದ ಬೀಜ ಕಾಂಗ್ರೆಸ್. ಜನರನ್ನು ಜಾತಿ ಮತಗಳಿಂದ ಹೊಡೆಯುತ್ತಿದೆ. 2013-18ರ ವರೆಗೂ ಸಿದ್ದರಾಮಯ್ಯ ಸರ್ಕಾರ ಲೂಟಿ ಮಾಡಿದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದೇನೆ. ಎಲ್ಲೆಡೆ ಬಿಜೆಪಿ ಅರಳುತ್ತದೆ. ನೆಲಮಂಗಲದಲ್ಲೂ ಬಿಜೆಪಿ ಅರಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಚುನಾವಣಾ ಇಂದಿನಿಂದ ಆರಂಭವಾಗಿದ್ದು, ಬರೋಬ್ಬರಿ 381 ಕಿಮೀ ದೂರ ಸಿಎಂ ಕ್ರಮಿಸಲಿದ್ದಾರೆ. ಬೆಂಗಳೂರು ಬಸವೇಶ್ವರ ವೃತ್ತದಿಂದ ಬೆಲಗ್ಗೆ 10 ವೇಳೆಗೆ ರೋಡ್ ಶೋ ಆರಂಭವಾಗಿದ್ದು, ರಾತ್ರಿ 10ಕ್ಕೆ ದಾವಣಗೆರೆಯಲ್ಲಿ ಅಂತ್ಯವಾಗಲಿದೆ.


top videos



    ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ, ದಾಬಸ್‌ಪೇಟೆ, ತುಮಕೂರಿನ ಗೂಳೂರು, ತುಮಕೂರುನಗರ, ಗುಬ್ಬಿ, ಕೆಬಿ ಕ್ರಾಸ್‌, ತಿಪಟೂರು, ಆರಸೀಕೆರೆ, ಬಾಣಾವರ, ಕಡೂರು, ದಾವಣಗೆರೆಯಲ್ಲಿ ರೋಡ್‌ ಶೋ ನಡೆಯಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಚಿಕ್ಕಮಗಳೂರು, ದಾವಣಗೆರೆ ಸೇರಿ ಇಂದು ಒಂದೇ ದಿನ ಒಟ್ಟು 6 ಜಿಲ್ಲೆಗಳಲ್ಲಿ ಸಿಎಂ ಮಿಂಚಿನ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

    First published: