• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಯಶವಂತಪುರದಲ್ಲಿ ಕೈ-ಕಮಲ ಕಾರ್ಯಕರ್ತರ ನಡುವೆ ಗಲಾಟೆ; ಕುಸುಮಾ ಮುಂದೆಯೇ ಪೊಲೀಸರಿಂದ ಲಾಠಿಚಾರ್ಜ್

Bengaluru: ಯಶವಂತಪುರದಲ್ಲಿ ಕೈ-ಕಮಲ ಕಾರ್ಯಕರ್ತರ ನಡುವೆ ಗಲಾಟೆ; ಕುಸುಮಾ ಮುಂದೆಯೇ ಪೊಲೀಸರಿಂದ ಲಾಠಿಚಾರ್ಜ್

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

ಘಟನೆ ಸಂಬಂಧ ಆಕ್ರೋಶ ಹೊರ ಹಾಕಿರುವ ಕಾಂಗ್ರೆಸ್ ಕಾರ್ಯಕರ್ತರು ಯಶವಂತಪುರ ಠಾಣೆ ಬಳಿ ಜಮಾಯಿಸಿ ಪೊಲೀಸರು ಹಾಗೂ ಉತ್ತರ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ವಿರುದ್ಧ ಘೋಷಣೆ ಕೂಗಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಯಶವಂತಪುರ (Yeshwanthpur ) ಬಳಿಯ ಬಿ.ಕೆ.ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ (Kusuma) ಪ್ರಚಾರ ಮಾಡುವ ವೇಳೆ ಕಾಂಗ್ರೆಸ್​ ಕಾರ್ಯಕರ್ತರ ಮೇಲೆ ಮಾಜಿ ಕಾರ್ಪೊರೇಟರ್ (Corporator) ಜಿ.ಕೆ.ವೆಂಕಟೇಶ್ ಬೆಂಬಲಿಗರು ಹಲ್ಲೆ ನಡಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಹಲ್ಲೆ ಖಂಡಿಸಿ ಕಾಂಗ್ರೆಸ್‌ (Congress) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಗಲಾಟೆ ಜೋರಾಗುತ್ತಿದ್ದಂತೆ ಪೊಲೀಸರು (Police) ಲಘು ಲಾಠಿಚಾರ್ಜ್‌ ಸಹ ಮಾಡಿದ್ದಾರೆ. ಇದೇ ವಿಚಾರಕ್ಕೆ ಕುಸುಮಾ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ವೆಂಕಟೇಶ್ ಸೇರಿದಂತೆ ಮೂವರ ಮೇಲೆ ದೂರು ದಾಖಲಿಸಿದ್ದಾರೆ. ಇನ್ನು ವೆಂಕಟೇಶ್ ವಿರುದ್ಧ ಕುಸುಮಾ ಟ್ವಿಟರ್‌ನಲ್ಲೂ ಕಿಡಿ ಕಾರಿದ್ದಾರೆ.


ಕ್ಷೇತ್ರದಲ್ಲಿ ಪ್ರಚಾರ ಮಾಡಲು ಕೂಡ ಬಿಡುತ್ತಿಲ್ಲ


ಯಶವಂತಪುರದಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ವಿಚಾರವಾಗಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಬಳಿಕ ಈ ಬಗ್ಗೆ ಮಾತನಾಡಿರುವ ಅವರು, ನಮ್ಮ ಕಾರ್ಯಕರ್ತರು ಪ್ರಚಾರ ಮಾಡುವ ವೇಳೆ ಗಲಾಟೆ ಮಾಡಿ ಹಲ್ಲೆ ಮಾಡಲಾಗಿದೆ. ಕಾರ್ಯಕರ್ತರಿಗೆ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಕೂಡ ಬಿಡುತ್ತಿಲ್ಲ. ಗಲಾಟೆ ವಿಚಾರ ತಿಳಿದು ಜಾಲಹಳ್ಳಿಯಿಂದ ನಾನು ಬಂದಿದ್ದೆ.


ಇದನ್ನೂ ಓದಿ: DK Shivakumar: ಚುನಾವಣಾ ಅಖಾಡದಲ್ಲಿ ಡಿಕೆ ಶಿವಕುಮಾರ್ ಪುತ್ರ; ತಂದೆಯ ಪರ ಆಕಾಶ್​​ ಭರ್ಜರಿ ಪ್ರಚಾರ


ಪೊಲೀಸರಿಗೆ ವಿಚಾರ ತಿಳಿಸಿದರು ಕ್ರಮ ಕೈಗೊಳ್ಳಲಿಲ್ಲ‌. ನಾನೇ ಖುದ್ದು ಹೇಳಿದರೂ ಪೊಲೀಸರು ನಕ್ಕು, ಏನು ಆಗಿಲ್ಲ ಬಿಡಿ ಮೇಡಂ ಅಂತ ಹೇಳ್ತಿದ್ದಾರೆ. ಮಹಿಳೆಯರು ಅನ್ನೋದನ್ನು ನೋಡದೆ ತಳ್ಳಿದ್ದಾರೆ. ಮುಕ್ತ ವಾತಾವರಣದಲ್ಲಿ ಚುನಾವಣೆ ನಡೆಸುವುದು ಅಂದರೇ ಇದೇನಾ? ಕೂಡಲೇ ಮೂವರ ಮೇಲೆ ಎಫ್ಐಆರ್ ದಾಖಲಿಸಿ ಅರೆಸ್ಟ್ ಮಾಡಬೇಕು, ಇಲ್ಲ ಗಡಿಪಾರು ಮಾಡಬೇಕು ಅಂತಾ ಆಕ್ರೋಶ ಹೊರ ಹಾಕಿದ್ದಾರೆ.




ಪೋಲಿಸ್ ಸಮವಸ್ತ್ರ ತೆಗೆದು ಅಧಿಕೃತವಾಗಿ ಬಿಜೆಪಿ ಅಂಗಿ ಧರಿಸಿ


ಈ ಬಗ್ಗೆ ಫೇಸ್​​ಬುಕ್​ ಪೋಸ್ಟ್​ ಮಾಡಿರುವ ಕುಸುಮಾ ಅವರು, ಚುನಾವಣಾ ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಯಶವಂತಪುರ ಠಾಣೆಯ ಪೊಲೀಸರ ಎದುರೇ ಹಲ್ಲೆ ನಡೆಸಿದ ಮಾಜಿ ಕಾರ್ಪೊರೇಟರ್ ಜಿಕೆ ವೆಂಕಟೇಶ್ ಅಲಿಯಾಸ್ ಎನ್​​ಟಿಆರ್​ ಹಾಗೂ ಆತನ ರೌಡಿ ಪಟಾಲಂ. ಪೋಲಿಸ್ ಸಮವಸ್ತ್ರ ತೆಗೆದು ಅಧಿಕೃತವಾಗಿ ಬಿಜೆಪಿ ಅಂಗಿ ಧರಿಸಿ ನಿಮ್ಮ ಸಿಬ್ಬಂದಿಗಳಿಗೆ ಪ್ರಚಾರ ನಡೆಸಲು ಹೇಳಿ ಬಿಡಿ ಕಮಿಷನರ್ ಅವರೇ ಎಂದು ಆಕ್ರೋಶ ಹೊರ ಹಾಕಿದ್ದಾರೆ.




ಇನ್ನು ಘಟನೆ ಸಂಬಂಧ ಆಕ್ರೋಶ ಹೊರ ಹಾಕಿರುವ ಕಾಂಗ್ರೆಸ್ ಕಾರ್ಯಕರ್ತರು ಯಶವಂತಪುರ ಠಾಣೆ ಬಳಿ ಜಮಾಯಿಸಿ ಪೊಲೀಸರು ಹಾಗೂ ಉತ್ತರ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ವಿರುದ್ಧ ಘೋಷಣೆ ಕೂಗಿದ್ದಾರೆ. ಘಟನೆ ಸಂಬಂಧ ಸ್ಥಳದಲ್ಲಿ ಪೊಲೀಸರು ಹೆಚ್ಚುವರಿ ಕೆಎಸ್ಆರ್​​ಪಿ ತುಕಡಿ ನಿಯೋಜನೆ ಮಾಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಮಾಡಲಾಗಿದೆ.

First published: