ಬೆಂಗಳೂರು: ಇವರೆಲ್ಲರೂ ಪ್ರಿಂಟಿಂಗ್ ಪ್ರೆಸ್ (Printing press) ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದರು. ಜಾತ್ರೆ ಬರಲಿ, ಶುಭ ಸಮಾರಂಭ ಇರಲಿ, ಮದುವೆ (Marriage) ಆಗ್ಲಿ, ಎಲೆಕ್ಷನ್ (Election) ಆಗಲೀ ಎಲ್ಲಾ ಕಾಲದಲ್ಲೂ ಡಿಮ್ಯಾಂಡ್. ಆದರೆ ಈಗ ಕಾಲ ಬದಲಾಗಿದೆ. ಸದಾ ಕಾಲ ಶಬ್ಧ ಮಾಡುತ್ತಿದ್ದ ಮಿಷನ್ಗಳು ಸೈಲೆಂಟ್ ಆಗಿವೆ. ಹಗಲು ರಾತ್ರಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ (Staff) ಸುಮ್ಮನೆ ಇರುವಂತಾಗಿದೆ. ಚುನಾವಣೆಯ ಆದಾಯದ ನಿರೀಕ್ಷೆಯಲ್ಲಿದ್ದ ಮಾಲೀಕರು (Owner) ಕಂಗಾಲಾಗಿದ್ದಾರೆ. ಇದು ಪ್ರಿಂಟಿಂಗ್ ಪ್ರೆಸ್ಗಳ ಸದ್ಯದ ಚಿತ್ರಣ. ಎಲೆಕ್ಷನ್ ಟೈಮ್‌ನಲ್ಲಿ ಪಾಂಪ್ಲೆಟ್ಗಳಿಗೆ ಡಿಮ್ಯಾಂಡೇ ಇಲ್ಲದಂತಾಗಿದೆ. ಹಿಂದೆಲ್ಲ ಲಕ್ಷ ಲಕ್ಷ ಲೆಕ್ಕದಲ್ಲಿ ಪ್ರಿಂಟಿಂಗ್ ಮಾಡುತ್ತಿದ್ದ ಮಾಲೀಕರು, ಇದೀಗ ಸಾವಿರಕ್ಕೂ ಆರ್ಡರ್ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆಲ್ಲ ಕಾರಣ ಡಿಜಿಟಲ್ ಮೀಡಿಯಾ (Digital Media) ಎಫೆಕ್ಟ್.
ಡಿಜಿಟಲ್ ಮೀಡಿಯಾ ಮೊರೆ ಹೋದ ಅಭ್ಯರ್ಥಿಗಳು
ಕರುನಾಡ ಕುರುಕ್ಷೇತ್ರಕ್ಕೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿಯಿವೆ. ಗೆಲುವಿನ ಹುಮ್ಮಸ್ಸಿನಲ್ಲಿ ರಣಕಣಕ್ಕೆ ಇಳಿದಿರುವ ಕದನ ಕಲಿಗಳು, ಜನರ ಮನ ತಲುಪಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಅಭ್ಯರ್ಥಿಗಳು ಮತಬೇಟೆ ಶುರು ಮಾಡಿದ್ದಾರೆ. ಆದರೆ ಕರಪತ್ರದ ಮೇಲೆ ಅಭ್ಯರ್ಥಿಗಳಿಗೆ ಆಸಕ್ತಿ ಕಡಿಮೆ ಆಗಿದೆ. ಡಿಜಿಟಲ್ ಮೀಡಿಯಾ ಮೊರೆ ಹೋಗಿದ್ದಾರೆ ಅಭ್ಯರ್ಥಿಗಳು. ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್, ಇನ್ಸ್ಟಾಗ್ರಾಂಗಳಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ನಷ್ಟದಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲೀಕರು
ಕಳೆದ ಚುನಾವಣೆಯ ವೇಳೆ ನೀತಿ ಸಂಹಿತೆ ಜಾರಿಗೂ ಮುನ್ನವೇ ಲಕ್ಷ ಲಕ್ಷ ವ್ಯವಹಾರ ಮಾಡಿದ್ದವರು ಈ ಬಾರಿ ನೀತಿ ಸಂಹಿತೆ ಜಾರಿ ಆಗಿ ತಿಂಗಳು ಆದರೂ 10 ಸಾವಿರ ಪಾಂಪ್ಲೆಟ್ಗಳಿಗೆ ಆರ್ಡರ್ ಬಂದಿದೆ. ಜೊತೆಗೆ ಚುನಾವಣಾ ಆಯೋಗದ ಕಟ್ಟು ನಿಟ್ಟಿನ ನಿಯಮ ಕೂಡ ಪ್ರಿಂಟಿಂಗ್ ಪ್ರೆಸ್ಗೆ ಸಂಕಷ್ಟ ತಂದಿದೆ.
ಸೋಷಿಯಲ್ ಮೀಡಿಯಾ ಪ್ರಮೋಷನ್ ಕಂಪನಿಗಳಿಗೆ ಸುಗ್ಗಿ
ಪ್ರಿಂಟಿಂಗ್ ಪ್ರೆಸ್ ಮಾಲೀಕರು ನಷ್ಟದಲ್ಲಿದ್ದರೆ, ಇತ್ತ ಸೋಷಿಯಲ್ ಮೀಡಿಯಾ ಪ್ರಮೋಷನ್ ಕಂಪನಿಗಳು ಚುನಾವಣೆ ಸುಗ್ಗಿ ಮಾಡುತ್ತಿವೆ. ಲಕ್ಷ ಲಕ್ಷದ ಪ್ಯಾಕೇಜ್ ಲೆಕ್ಕದಲ್ಲಿ ಅಭ್ಯರ್ಥಿಗಳ ಪರವಾಗಿ ಜಾಲತಾಣದಲ್ಲಿ ಹಂಗಾಮ ಮಾಡುತ್ತಿವೆ. ಕೂತಲ್ಲಿದ್ದಾನೆ ಮತದಾರರ ಮೊಬೈಲ್ ತಲುಪಿಸುತ್ತಿದ್ದಾರೆ. ಹೆಚ್ಚಿನ ಅರ್ಡರ್ ಬರ್ತಿರುವ ಕಾರಣ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಂಡು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
ಅಂದ ಹಾಗೆ ಚುನಾವಣೆ ಸುಗ್ಗಿಯಲ್ಲಿ ಡಿಜಿಟಲ್ ಮೀಡಿಯಾ ಕಂಪನಿಗಳು ಇದ್ದರೆ, ಆರ್ಡರ್ಗಳು ಬಾರದೇ ಪ್ರಿಂಟಿಂಗ್ ಪ್ರೆಸ್ ಮಾಲೀಕರು ನಷ್ಟ ಅನುಭವಿಸುವಂತೆ ಆಗಿದೆ. ಇದಕ್ಕೆಲ್ಲಾ ಕಾರಣ ಆಧುನಿಕತೆಗೆ ತೆರೆದುಕೊಂಡಿದ್ದೇ ಕಾರಣ ಎನ್ನುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ