ಬೆಂಗಳೂರು: ಬಿಜೆಪಿಯ (BJP) ಮೊದಲ ಪಟ್ಟಿ ಇಂದು ರಿಲೀಸ್ ಆಗಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಸ್ಪಷ್ಟಪಡಿಸಿದ್ದಾರೆ. ನಾಳೆ ಅಥವಾ ನಾಡಿದ್ದು ಫಸ್ಟ್ ಲಿಸ್ಟ್ (List) ಬಿಡುಗಡೆ ಆಗಲಿದೆ. ಮತ್ತೊಂದು ಕಡೆ ಸುಮಾರು 25 ಕ್ಷೇತ್ರಗಳಲ್ಲಿ ಆಪ್ತರಿಗೆ ಟಿಕೆಟ್ ಯಡಿಯೂರಪ್ಪ ಪಟ್ಟುಹಿಡಿದಿದ್ದಾರಂತೆ. ಇದೇ ಕಾರಣಕ್ಕೆ ಟಿಕೆಟ್ ಘೋಷಣೆ (Ticket Declaration) ಮತ್ತೆ ಮುಂದೂಡಿಕೆ ಆಗಿದೆಯಂತೆ ಎಂಬ ಮಾಹಿತಿ ಲಭ್ಯವಾಗಿದೆ.
ಬಹುಶಃ ನಾಳೆ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ
ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಡಿಯೂರಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ ಇಂದು ಲಿಸ್ಟ್ ಬದಲಾವಣೆ ಆಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದರು. 224 ವಿಧಾನಸಭಾ ಕ್ಷೇತ್ರಗಳ ಬಗ್ಗೆ ಎರಡು ಮೂರು ಬಾರಿ ಸಭೆ ನಡೆದಿದೆ. ಬಹುಶಃ ನಾಳೆ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂಬ ವಿಶ್ವಾಸವಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಕರ್ನಾಟಕದಲ್ಲಿ ಸ್ಪಷ್ಟ ಬಹುಮತದಲ್ಲಿ ಸರಕಾರ ರಚನೆ ಮಾಡುತ್ತೇವೆ. ಹಾಲಿ ಶಾಸಕರಿಗೆ ಟಿಕೆಟ್ ಸಿಗದಿರುವ ಬಗ್ಗೆ ಚರ್ಚೆ ನಡೆದಿದೆ. ಎರಡು ಮೂರು ಕ್ಷೇತ್ರಗಳಲ್ಲಿ ಸಿಗುವುದಿಲ್ಲ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: HD Kumaraswamy: ಮನೆಹಾಳು ಶಕುನಿಗಳಿಂದಲೇ ಹಾಸನದಲ್ಲಿ ಗೊಂದಲ ಎಂದ ಎಚ್‌ಡಿಕೆ, ಕಾರ್ಯಕರ್ತನಿಗೆ ಟಿಕೆಟ್ ಅಂತ ಪುನರುಚ್ಚಾರ
ಈ ನಡುವೆ ಪಟ್ಟಿ ತಡವಾಗುತ್ತಿರುವ ಬಗ್ಗೆ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತಾಡಿದ್ದಾರೆ. ನಾಳೆ ಅಥವಾ ನಾಡಿದ್ದು ಮೊದಲ ಪಟ್ಟಿ ರಿಲೀಸ್ ಆಗುತ್ತೆ ಎಂದಿದ್ದಾರೆ.
ಪುತ್ರರಿಗೆ ಟಿಕೆಟ್ ಕೇಳಿದ ರಾಜಕೀಯ ನಾಯಕರು!
ಬಿಜೆಪಿಯಲ್ಲಿ ಹಲವು ಶಾಸಕರು ತಮ್ಮ ಪುತ್ರರಿಗೆ ಟಿಕೆಟ್ ಕೇಳಿದ್ದಾರೆ. ಶಿಕಾರಿಪುರದಲ್ಲಿ ವಿಜಯೇಂದ್ರಗೆ ಟಿಕೆಟ್ ಅಂತ ಖುದ್ದು ಯಡಿಯೂರಪ್ಪ ಘೋಷಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್ಗೆ ಟಿಕೆಟ್ ಒತ್ತಾಯಿಸಿದ್ದಾರೆ. ಹೊಸಕೋಟೆಯಲ್ಲಿ ನಿತೀಶ್ ಪುರುಷೊತ್ತಮ್‌ಗೆ ಟಿಕೆಟ್ ನೀಡಿ ಅಂತ ಸಚಿವ ಎಂಟಿಬಿ ನಾಗರಾಜ್ ಕೇಳಿದ್ರೆ, ಮುಧೋಳದಲ್ಲಿ ತಮಗೆ ಟಿಕೆಟ್ ಕೊಡದಿದ್ರೆ ಪುತ್ರ ಉಮೇಶ್ ಕಾರಜೋಳಗೆ ನೀಡಿ ಎಂದು ಕಾರಜೋಳ ಡಿಮ್ಯಾಂಡ್ ಮಾಡಿದ್ದಾರೆ.
ನಾಗಠಾಣದಲ್ಲಿ ಗೋವಿಂದ ಕಾರಜೋಳರ ಮತ್ತೊಬ್ಬ ಪುತ್ರ ಗೋಪಾಲ್ ಕಾರಜೋಳ ಆಕಾಂಕ್ಷಿಯಾಗಿದ್ದಾರೆ. ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿ ಮಗ ಸಿದ್ಧಾರ್ಥ್ ಟಿಕೆಟ್ ಕೇಳಿದ್ರೆ, ವಿ.ಸೋಮಣ್ಣ ಅಂತೂ ತಮಗೂ, ತಮ್ಮ ಪುತ್ರನಿಗೂ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ. ಹುಕ್ಕೇರಿಯಲ್ಲಿ ಕತ್ತಿ ಪುತ್ರ ನಿಖಿಲ್ ಕತ್ತಿ ಅಥವಾ ಕತ್ತಿ ಸೋದರ ರಮೇಶ್ ಕತ್ತಿ ಟಿಕೆಟ್ ಕೇಳಲಾಗುತ್ತಿದೆ. ಸವದತ್ತಿಯಲ್ಲಿ ಆನಂದ್ ಮಾಮನಿ ಕುಟುಂಬ ಲಾಬಿ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ