ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections) ಕೆಲವೇ ದಿನಗಳು ಬಾಕಿ ಇದೇ, ಈ ನಡುವೆಯೇ ಶಾಸಕ ಪ್ರೀತಂಗೌಡ (Preetham Gowda ) ಹಾಸನ ಚುನಾವಣಾ ಪ್ರಚಾರದಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹಾಸನ (Hassan) ನಗರದಲ್ಲಿ ನಿನ್ನೆ ರಾತ್ರಿ ಭರ್ಜರಿ ಪ್ರಚಾರದ ನಡೆಸಿದ್ದ ಪ್ರೀತಂಗೌಡ, ಜೆಡಿಎಸ್ (JDS) ಪಕ್ಷಕ್ಕೆ ಮತ ಹಾಕಿದರೆ ನಮಗೇ ಮತ ಹಾಕಿದಂತೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದರೊಂದಿಗೆ ಮುಸ್ಲಿಂ ಸಮುದಾಯ (Muslim Community) ಮತ ಪಡೆಯಲು ಪ್ರೀತಂ ಸಿದ್ಧಾಂತವನ್ನೇ ಮರೆತರ ಎಂಬ ಮಾತು ಭಾರೀ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿಗೆ ಹೋಗಬೇಕೆಂದರೆ ಮೈಸೂರಿಗೆ ಹೋಗಿ ಹೋಗಬೇಡಿ
ಪ್ರಚಾರದಲ್ಲಿ ಮಾತನಾಡಿದ ಪ್ರೀತಂಗೌಡ ಅವರು, ನಿಮಗೆ ಅರ್ಥ ಆಗಲಿ ಅಂತ ಬಿಡಿಸಿ ಬಿಡಿಸಿ ಹೇಳುತ್ತಿದ್ದೇನೆ. ಜನತಾದಳಕ್ಕೆ ಓಟು ಹಾಕಿದರೂ ಬಿಜೆಪಿಗೆ ಓಟು ಹಾಕಿದ ಲೆಕ್ಕನೇನೆ! ದೇವೇಗೌಡರು, ಮೋದಿ ಸಾಹೇಬರು ಮಾತನಾಡಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಬರುವುದು ಇಪ್ಪತ್ತು, ಇಪ್ಪತ್ತೈದು ಸೀಟು. ಬೆಂಗಳೂರಿಗೆ ಹೋಗಬೇಕೆಂದರೆ ಮೈಸೂರಿಗೆ ಹೋಗಿ ಹೋಗಬೇಡಿ. ಹಾಸನದಿಂದ ಬೆಳ್ಳೂರು ಕ್ರಾಸ್ ಮೇಲೆ ಹೋಗಿ ಅಂತ ಮಾತ್ರ ಹೇಳುತ್ತೇನೆ. ಅದರ ಮೇಲೆ ನಿಮ್ಮ ಇಷ್ಟ ಎಂದು ಹೇಳಿದ್ದಾರೆ.
ಇದನ್ನೂ ಓದಿ: Geetha Shivarajkumar: 'ತೆನೆ' ಬಿಟ್ಟು 'ಕೈ' ಹಿಡಿತಾರೆ ಗೀತಾ ಶಿವರಾಜಕುಮಾರ್! ನಾಳೆ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
ನೇರ ನನ್ನ ಬಳಿಯೇ ಬನ್ನಿ, ಯೋಚನೆ ಮಾಡಿ ಮತ ಹಾಕಿ!
ಅಲ್ಲದೆ, ಮೈಸೂರಿಗೆ ಹೋಗಿ ಬರುತ್ತೇನೆ ಎಂದರೆ ನಮಗೆ ಖುಷಿ ಇದೆ ಅಂತ ಹೇಳಿದರೆ, ಸುತ್ತಿ ಬಳಸಿ ನನ್ನ ಹತ್ತಿರ ಬರುವುದು ಬೇಡಾ ನೇರಾ ನನ್ನ ಹತ್ತಿರ ಬನ್ನಿ ಎಂದ ಶಾಸಕ ಪ್ರೀತಂಗೌಡ ಹೇಳಿದ್ದಾರೆ. ಮತ್ತೆ ಎಲ್ಲಾ ನದಿ ನೀರು ಹರಿಯುವುದು ಸಮುದ್ರಕ್ಕೆ, ಬರೋದು ನಮ್ಮ ಹತ್ತಿರಕ್ಕೆನೇ!
ನೀವು ಅವರಿಗೆ ವೋಟ್ ಹಾಕಿದರೂ ನನ್ನ ಹತ್ತಿರಕ್ಕೆ ಬರಬೇಕು. ಯೋಚನೆ ಮಾಡಿಬಿಟ್ಟು ಬನ್ನಿ ಅಂತ ಹೇಳುತ್ತೇನೆ ಎಂದು ಪರೋಕ್ಷವಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸುಳಿವು ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಸದ್ಯ ಪ್ರೀತಂಗೌಡ ಅವರ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ