ಹಾಸನ: ಅಚ್ಚರಿ ಬೆಳವಣಿಗೆಯಲ್ಲಿ ಹಾಸನ (Hassan) ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿಯಾಗಿ ಶಾಸಕ ಪ್ರೀತಂ ಗೌಡ (Preetham Gowda) ಪತ್ನಿ ಕಾವ್ಯಾ (Kavya) ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದಕ್ಕೂ ಮುನ್ನ ಪ್ರೀತಂ ಗೌಡ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ (Nomination) ಸಲ್ಲಿಕೆ ಮಾಡಿದ್ದರು. ಅವರಿಗೆ ಪತ್ನಿ ಕಾವ್ಯಾ ಅವರಿಗೆ ಸಾಥ್ ನೀಡಿದ್ದರು. ಆದರೆ ಪತ್ನಿ ಕಾವ್ಯಾ ಉಮೇದುವಾರಿಕೆ ಸಲ್ಲಿಕೆ ವೇಳೆ ಪತಿ ಪ್ರೀತಂ ಗೈರಾಗಿದ್ದರು (Absent). ಕಾವ್ಯಾ ಅವರಿಗೆ ನಾಮಪತ್ರ ಸಲ್ಲಿಕೆ ವೇಳೆ ಪ್ರೀತಂ ಗೌಡ ಅವರು ಬೆಂಬಲಿಗರು ಸಾಥ್ ನೀಡಿದ್ದರು.
ಕುತೂಹಲ ಮೂಡಿಸಿದ ಶಾಸಕರ ನಡೆ
ಪ್ರೀತಂ ಗೌಡ ಪತ್ನಿ ಕಾವ್ಯಾ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಆದರೆ ತಾಂತ್ರಿಕ ದೋಷ ಅರಿತು ಮುಂಜಾಗ್ರತೆ ವಹಿಸಿ ಪತ್ನಿ ಕೈಯಿಂದ ಪ್ರೀತಂ ಗೌಡ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ ಎನ್ನಲಾಗಿದೆ.
ಅಂದಹಾಗೇ, ಪ್ರೀತಂ ಗೌಡ ಅವರಿಗೆ ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಪಡೆದುಕೊಂಡಿದ್ದರು. ಸದ್ಯ ಪತ್ನಿ ಕಾವ್ಯಾ ಅವರಿಂದಲೂ ಬಿಜೆಪಿ ಅಭ್ಯರ್ಥಿಯಾಗಿ ನಾಮಿನೇಷನ್ ಮಾಡಿಸುವುದು ಕುತೂಹಲ ಮೂಡಿಸಿದೆ.
ಪ್ರೀತಂ ಗೌಡಗೆ ಟಕ್ಕರ್ ಕೊಡ್ತಾರಾ ದಳಪತಿಗಳು
ಇನ್ನೂ, ಹಾಸನ ಜೆಡಿಎಸ್ ಅಭ್ಯರ್ಥಿ ಎಚ್ಪಿ ಸ್ವರೂಪ್ ಪ್ರಕಾಶ್ ಅವರು ನಾಳೆ ಹಾಸನದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭಾಗಿಯಾಗುವ ಸಾಧ್ಯತೆ ಇದೆ.
ಬೃಹತ್ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡಗೆ ಟಕ್ಕರ್ ಕೊಡಲು ದಳಪತಿಗಳು ಮುಂದಾಗಿದ್ದು, ಇದಕ್ಕೂ ಮುನ್ನ ಇಂದು ಹಾಸನದಲ್ಲಿ ಎಚ್.ಡಿ ರೇವಣ್ಣ ಸಭೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ