ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar ), ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಬಿಜೆಪಿ ಬಿಟ್ಟ ಮೇಲೆ ಲಿಂಗಾಯತ ಮತಗಳು ಬಿಜೆಪಿಯಿಂದ ದೂರ ಆಗುತ್ತಿದೆಯಂತೆ. ಕಾಂಗ್ರೆಸ್ನವರು (Congress) ಹೀಗಂತ ಹೇಳಿ ಹೇಳಿ ಬಿಜೆಪಿಯವರ (BJP) ನೆಮ್ಮದಿಗೆಡಿಸಿದ್ದರು. ಈಗ ಕಾಂಗ್ರೆಸ್ ನೆಮ್ಮದಿಗೆ ಬಿಜೆಪಿ ಭಂಗ ತಂದಿದೆ. ಲಿಂಗಾಯತ (Lingayat) ಸಿಎಂ ಘೋಷಣೆಗೂ ಮುಂದಾಗಿದೆ. ಹೌದು, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು, ಶೆಟ್ಟರ್, ಸವದಿ ಸೇರಿ ಹಲವು ಬಿಜೆಪಿ ಹಿರಿಯರಿಗೆ ಟಿಕೆಟ್ ನೀಡದೇ ಇದ್ದದ್ದನ್ನೇ ಅಸ್ತ್ರವಾಗಿಸಿಕೊಂಡು ಬಿಜೆಪಿಯನ್ನ ಟೀಕಿಸ್ತಿದ್ದ ಕಾಂಗ್ರೆಸ್ ವಿರುದ್ಧ ಈಗ ಲಿಂಗಾಯತ ಸಿಎಂ ಅನ್ನೋ ಮಿಸೈಲ್ ಪ್ರಯೋಗ ಮಾಡಿದೆ ಕೇಸರಿ ಪಡೆ.
ಬಿಎಸ್‌ವೈ ನಿವಾಸದಲ್ಲಿ ಬಿಗ್ ಮೀಟಿಂಗ್!
ರಾಜ್ಯದ ಬಹುಸಂಖ್ಯಾತ ಲಿಂಗಾಯತ ಸಮುದಾಯವನ್ನ ಕಡೆಗಣಿಸಲಾಗುತ್ತಿದೆ ಅಂತಾ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ಆ ಮೂಲಕ ಲಿಂಗಾಯತ ಸಮುದಾಯವನ್ನು ಸೆಳೆಯುವ ಪ್ರಯತ್ನದಲ್ಲಿತ್ತು. ಇದನ್ನೆಲ್ಲಾ ಸೀರಿಯಸ್ ಆಗಿ ಪರಿಗಣಿಸಿದ ಬಿಜೆಪಿ ನಾಯಕರು ರಾತ್ರಿ ಬಿಎಸ್‌ವೈ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.
ಸಿಎಂ ಅಭ್ಯರ್ಥಿ ಘೋಷಿಸಲು ಬಿಜೆಪಿ ಸವಾಲು!
ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಸಿಎಂ ಬಸವರಾಜ ಬೊಮ್ಮಾಯಿ, ಲಿಂಗಾಯತರಿಗೆ ಬಿಜೆಪಿ ಯಾವುದೇ ತಾರತಮ್ಯ ಮಾಡಿಲ್ಲ, ಸಿಎಂ ಆಗಿದ್ದ ವೀರೇಂದ್ರ ಪಾಟೀಲ್‌ಗೆ ನೀವು ಮಾಡಿದ ಅನ್ಯಾಯ ಎಲ್ಲರಿಗೂ ಗೊತ್ತಿದೆ, ಧೈರ್ಯವಿದ್ದರೆ ನೀವು ಸಿಎಂ ಅಭ್ಯರ್ಥಿಯನ್ನ ಘೋಷಿಸಿ ಅಂತ ಸವಾಲು ಹಾಕಿದ್ದಾರೆ.
ಬಿಜೆಪಿ ನಾಯಕರ ಪ್ಲಾನ್ ಏನು?
ಪ್ರಣಾಳಿಕೆಯಲ್ಲಿ ಸಿಎಂ ಅಭ್ಯರ್ಥಿ ಘೋಷಣೆಗೆ ಪ್ಲಾನ್ ಮಾಡಿಕೊಂಡಿದ್ದು, ಬಿಜೆಪಿ ಲಿಂಗಾಯತ ನಾಯಕನನ್ನೇ ಸಿಎಂ ಅಭ್ಯರ್ಥಿ ಘೋಷಣೆಗೆ ಚಿಂತನೆ ನಡೆಸಿದ್ದಾರೆ. ಪಕ್ಷ ಬಹುಮತ ಪಡೆದ್ರೆ ಹಾಲಿ ಸಿಎಂ ಬೊಮ್ಮಾಯಿ ಅವ್ರನ್ನೇ ಸಿಎಂ ಆಗಿ ಮುಂದುವರಿಸು ಚಿಂತನೆ ನಡೆಸಿದ್ದಾರೆ. ಅಲ್ಲದೆ ಹೆಸರು ಘೋಷಣೆಗೂ ಮುನ್ನ ಯಡಿಯೂರಪ್ಪ ಜೊತೆ ಮತ್ತೊಮ್ಮೆ ಚರ್ಚೆ ನಡೆಸುವುದರ ಜೊತೆಗೆ ಕೇಂದ್ರದ ಪ್ರಮುಖ ನಾಯಕರಿಂದ ಬಹಿರಂಗ ಘೋಷಣೆ ಮಾಡಿಸೋದಾಗಿದೆ.
ಈ ಮೂಲಕ ಕಾಂಗ್ರೆಸ್ಗೆ ಠಕ್ಕರ್ ಕೊಡೋದಲ್ಲದೆ, ನೀವೂ ಕೂಡ ಲಿಂಗಾಯತ ಸಿಎಂ ಘೋಷಿಸಿ ಅಂತ ಸವಾಲು ಹಾಕೋದಾಗಿದೆ. ಜೊತೆಗೆ ಮತದಾರರ ಮುಂದೆಯೂ ಲಿಂಗಾಯತ ಸಿಎಂ ಅಸ್ತ್ರ ಬಳಕೆ ಮಾಡಿ ಲಿಂಗಾಯತ ಮತಗಳು ಚದುರದಂತೆ ಮುಂಜಾಗ್ರತೆ ವಹಿಸೋದಾಗಿದೆ.
ಬಿಜೆಪಿ ಮೀಟಿಂಗ್ ನಡೆಸುತ್ತಿದ್ದಂತೆ ಕಾಂಗ್ರೆಸಿಗರು ಅಲರ್ಟ್ ಆಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಂಬಿ ಪಾಟೀಲ್, ಬಿಎಸ್‌ವೈ ಅವರನ್ನು ಅಧಿಕಾರದಿಂದ ಕಿತ್ತೊಗೆದು ಡ್ಯಾಮೇಜ್ ಆದ ಬಳಿಕ ಓಲೈಸುತ್ತಿದ್ದಾರೆ, ರಾಘವೇಂದ್ರಗೆ ಮುಂದಿನ ವರ್ಷ ಎಂಪಿ ಟಿಕೆಟ್ ಸಿಗಲ್ಲ.
2028ಕ್ಕೆ ವಿಜಯೇಂದ್ರಗೆ ಎಂಎಲ್‌ಎ ಟಿಕೆಟ್ ಕೂಡ ಸಿಗಲ್ಲ ಅಂತ ಟ್ವೀಟ್ ಮೂಲಕ ತಿವಿದಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕರ ಸವಾಲಿಗೆ ವ್ಯಂಗ್ಯವಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿ ಮುಂಚಿತವಾಗಿ ಸಿಎಂ ಹೆಸರು ಘೋಷಣೆ ಮಾಡುವ ಪರಿಪಾಠವಿಲ್ಲ ಅಂತ ತಿರುಗೇಟು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ