ಮಂಡ್ಯ(ಜ.31): ಕರ್ನಾಟಕ ಚುನಾವಣೆ (Karnataka Elections) ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಮತದಾರರನ್ನು ಸೆಳೆಯುವ ಅನೇಕ ಯತ್ನಗಳು ನಡೆಯುತ್ತಿವೆ. ಈಗಾಗಲೇ ರಾಷ್ಟ್ರೀಯ ನಾಯಕರು ರಾಜ್ಯ ಪ್ರವಾಸ ಆರಂಭಿಸಿದ್ದು, ಇತ್ತ ರಾಜ್ಯ ನಾಯಕರೂ ಜನರ ಓಲೈಸುವ ಯತ್ನದಲ್ಲಿದ್ದಾರೆ. ಹೀಗಿರುವಾಗ ಪಕ್ಷ ಒಡೆಯುವ ನೀತಿಯೂ ಭಾರೀ ಸದ್ದು ಮಾಡುತ್ತಿದೆ. ಹೌದು ಮಂಡ್ಯದಲ್ಲಿ ಇಂತಹ ಬೆಳವಣಿಗೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಇದರಿಂದ ಜೆಡಿಎಸ್ (JDS) ಅಕ್ಷರಶಃ ತತ್ತರಿಸಿದೆ.
ಇದನ್ನೂ ಓದಿ: Assembly Election-2022: ತಮ್ಮದೇ ಪಕ್ಷದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ! ಅರಸೀಕೆರೆ ಬಿಜೆಪಿ ಮುಖಂಡ ಅರೆಸ್ಟ್
ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯದಲ್ಲಿ ತೆನೆ ಹೊತ್ತ ಮಹಿಳೆಗೆ ಪದೇ ಪದೇ ಶಾಕ್ ಸಿಗುತ್ತಿವೆ. ಕೆಆರ್ ಪೇಟೆ ಬೆನ್ನಲ್ಲೇ, ನಾಗಮಂಗಲದಲ್ಲಿ ಆಘಾತ ಅನುಭವಿಸಿದ್ದ ಜೆಡಿಎಸ್ಗೆ ಈಗ ಶ್ರೀರಂಗಪಟ್ಟಣದಲ್ಲೂ ಭಾರೀ ಹೊಡೆತ ಸಿಕ್ಕಿದೆ. ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಠಕ್ಕರ್ ಕೊಡಲು ತಗ್ಗಳ್ಳಿ ವೆಂಕಟೇಶ್ ಮುಂದಾಗಿದ್ದಾರೆ. ಜಿ.ಪಂ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಪ್ರಭಾವಿ ಮುಖಂಡ ತಗ್ಗಳ್ಳಿ ವೆಂಕಟೇಶ್ ಜೆಡಿಎಸ್ ಗೆ ಸೆಡ್ಡು ಹೊಡೆದು ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಸದ್ಯ ವೆಂಕಟೇಶ್ ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಪಕ್ಷದ ನಾಯಕರಾದ ಹೆಚ್‌ಡಿ ಕುಮಾರಸ್ವಾಮಿ, ದೇವೇಗೌಡರ ಹೆಸರಲ್ಲೇ ಚುನಾವಣೆಗೆ ತಯಾರಿ ನಡೆಸಿದ್ದ ವೆಂಕಟೇಶ್ ಟಿಕೆಟ್ ಸಿಗದ ಹಿನ್ನೆಲೆ ಮನನೊಂದು ಬಂಡಾಯ ಸ್ಪರ್ಧೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: Karnataka Elections: ‘ಪ್ರಧಾನಿ ಮೋದಿ’ ಹೆಸರಿನಲ್ಲಿ ಟ್ರೋಫಿ: ಯುವಕರ ಮತ ಸೆಳೆಯಲು ಕಾಂಗ್ರೆಸ್-ಬಿಜೆಪಿಯಿಂದ ಕ್ರಿಕೆಟ್ ಪಂದ್ಯ!
ಈಗಾಗಲೇ ಕೆಆರ್ ಪೇಟೆ ಕ್ಷೇತ್ರದಲ್ಲೂ ಜೆಡಿಎಸ್ಗೆ ಬಂಡಾಯದ ಬಿಸಿ ತಗುಲಿದೆ. ಜೆಡಿಎಸ್ ಅಭ್ಯರ್ಥಿ ಹೆಚ್‌ಟಿ ಮಂಜು ವಿರುದ್ಧ ಸಿಡಿದೆದ್ದಿರುವ ಬಿಎಲ್ ದೇವರಾಜ್ ಹಾಗೂ ಅವರ ಬೆಂಬಲಿಗರು ಕೆಆರ್ ಪೇಟೆಯಲ್ಲಿ ಕುಮಾರಸ್ವಾಮಿ ಆಪ್ತ ಹೆಚ್‌ಟಿ ಮಂಜುಗೆ ಸವಾಲೊಡ್ಡಲು ಮುಂದಾಗಿದ್ದಾರೆ.
ಒಟ್ಟಾರೆಯಾಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ರೋಚಕ ಬೆಳವಣಿಗೆಗಳು ನಡೆಯುತ್ತಿದ್ದು, ಅಂತಿಮ ಘಟ್ಟದಲ್ಲಿ ಅಖಾಡದ ಚಿತ್ರಣ ಹೇಗಿರಲಿದೆ ಎಂಬುವುದೇ ಭಾರೀ ಕುತೂಹಲದ ವಿಚಾರವಾಗಿದೆ. ಸದ್ಯದ ಮಟ್ಟಿಗಂತೂ ಜೆಡಿಎಸ್ ತನ್ನ ಭದ್ರ ಕೋಟೆಯಲ್ಲೇಛಿದ್ರವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ