ಹಾಸನ: ಜೆಡಿಎಸ್ (JDS) ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನವಾಗಿದೆ. ಭವಾನಿ ರೇವಣ್ಣ (Bhavani Revanna) ಭಾಷಣ ವೇಳೆ ಸ್ವರೂಪ್ (Swaroop) ಅವರನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡಿದ್ದರು. ಈ ವೇಳೆ ಮಾತನಾಡಿದ ಭವಾನಿ ರೇವಣ್ಣ, ಸ್ವರೂಪ್ ಬೇರೆ ಅಲ್ಲ ನನ್ನ ಮಕ್ಕಳು (Children) ಬೇರೆ ಅಲ್ಲ. ಹಿಂದೆ ಇದ್ದ ಎಲ್ಲಾ ವಿಚಾರಗಳನ್ನ ಮರೆಯಬೇಕು ಎಂದರು. ಈ ವೇಳೆ ಭವಾನಿ ರೇವಣ್ಣ ಕಾಲಿಗೆ ಬಿದ್ದು ಸ್ವರೂಪ್ ಆಶೀರ್ವಾದ (Blessings) ಪಡೆದುಕೊಂಡಿದ್ದಾರೆ.
ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಭವಾನಿ ರೇವಣ್ಣ ಅವರು, ಸ್ವರೂಪ್ ಬೇರೆ ಅಲ್ಲ ನನ್ನ ಮಕ್ಕಳು ಬೇರೆ ಅಲ್ಲ. ಪ್ರಕಾಶ್ ಅಣ್ಣ ಮಗ ಅಂತ ನೋಡುವ ಮೊದಲು ನನ್ ಮಗ ಎಂದು ತಿಳಿದುಕೊಂಡಿದ್ದೇನೆ. ಹಿಂದೆ ಇದ್ದ ಎಲ್ಲಾ ವಿಚಾರಗಳನ್ನ ಮರೆಯಬೇಕು. ನಾವು ಕ್ಷೇತ್ರದಲ್ಲಿ ಬಿಜೆಪಿಯನ್ನ ಸೋಲಿಸಬೇಕು.
ಇನ್ನೂ ಇಪ್ಪತ್ತು ದಿನ ಮಾತ್ರ ಚುನಾವಣೆಗೆ ಬಾಕಿ ಇದೆ. ಸ್ವರೂಪ್ ಈ ಕ್ಷೇತ್ರದಲ್ಲಿ ಗೆದ್ದೆ ಗೆಲ್ಲುತ್ತಾನೆ. ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ. ಈ ಬಾರಿ ಸ್ವರೂಪ್‌ರನ್ನ ಗೆಲ್ಲಿಸಲು ನಾವು ರೆಡಿ ಎಂದು ಸ್ವರೂಪ್ ಕೈ ಹಿಡಿದು ಮೇಲಕ್ಕೆತ್ತಿದ್ದಾರೆ.
ಕಳೆದ ಐದು ವರ್ಷದಿಂದ ಕ್ಷೇತ್ರದಲ್ಲಿ ಎಷ್ಟು ಬಾರಿ ನಾವು ಪೊಲೀಸ್ ರಾಣೆ ಮೆಟ್ಟಿಲು ಹತ್ತಿದ್ದೇವೆ, ಎಷ್ಟು ಗಲಾಟೆಗಳನ್ನು ನೋಡಿದ್ದೇನೆ ಎಂಬುವುದು ನಮಗೆ ನೆನಪಿದೆ.ಎಷ್ಟು ಭ್ರಷ್ಟಾಚಾರ ನೋಡಿದ್ದೀವಿ. ಆದ್ದರಿಂದ ನಾವು ಎದುರಾಳಿಯನ್ನು ಸೋಲಿಸಲು ಎಲ್ಲರೂ ಒಂದಾಗಿ ದುಡಿಯೋಣಾ.
ಜೆಡಿಎಸ್ ಪಕ್ಷವನ್ನು ಗೆಲ್ಲಿಸಲೇಬೇಕಾದ ಅನಿವಾರ್ಯತೆ ಈ ಕ್ಷೇತ್ರದಲ್ಲಿ. ಆದ್ದರಿಂದ ಸ್ವರೂಪ್ ಅವರಿಗೆ ಎಲ್ಲರೂ ಬೆಂಬಲ ನೀಡಿ ಅವರನ್ನು ಗೆಲ್ಲಿಸುವ ಕೆಲಸ ಮಾಡೋಣಾ ಎಂದು ಕಾರ್ಯಯರ್ತರಿಗೆ ಕರೆ ನೀಡಿದರು. ಸಭೆಯಲ್ಲಿ ಭವಾನಿ ರೇವಣ್ಣ ದಂಪತಿ, ಸಂಸದ ಪ್ರಜ್ವಲ್ ರೇವಣ್ಣ ಕೂಡ ಹಾಜರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ