ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Elections 2023) ಹಾಸನದಲ್ಲಿ ಸ್ವರೂಪ್ ಗೆಲುವಿಗಾಗಿ ಮಾಜಿ ಸಚಿವ ರೇವಣ್ಣ ಫ್ಯಾಮಿಲಿ ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಸ್ವರೂಪ್ (Swaroop Prakash) ಪರ ಭವಾನಿ ರೇವಣ್ಣ ಪ್ರಚಾರ ಮಾಡುತ್ತಿದ್ದು, ಸ್ವರೂಪ್‌ನ್ನು ಗೆಲ್ಲಿಸೋ ಪಣ ತೊಟ್ಟಿದ್ದಾರೆ. ಇದೇ ವೇಳೆ ಬಿಜೆಪಿ ಶಾಸಕ ಪ್ರೀತಂಗೌಡ (Preetham Gowda) ವಿರುದ್ಧ ಭವಾನಿ ರೇವಣ್ಣ (Bhavani Revanna) ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಗೆ (JDS) ವೋಟ್ ಹಾಕಬೇಕು ಅಂದಾಗ ಒಂದು ಉತ್ತರ ಸಿಗುತ್ತದೆ. ಇಲ್ಲಿ ಅಭಿವೃದ್ಧಿ ಅಂತಾ ಹಾಗಿದರೆ ಅದು ಜೆಡಿಎಸ್ ನವರ ಕಾಲದಲ್ಲಿ ಅಂತಾ ಉತ್ತರ ಸಿಗುತ್ತೆ. ದುರಹಂಕಾರಿ ಶಾಸಕನನ್ನ ಆಚೆ ಹಾಕೋದಕ್ಕೆ ಸ್ವರೂಪ್ ಗೆ ವೋಟ್ ಹಾಕಬೇಕು. ಇವತ್ತು ನನ್ನ ಮಗ. ನನ್ನ ಮಗ ಸ್ವರೂಪು, ದೇವೇಗೌಡರು (Devegowda) ಆಶೀರ್ವಾದ ಮಾಡಿ ಕಳಿಹಿಸಿರೋನು ಸ್ವರೂಪ್. ಇಂತಹ ಸ್ವರೂಪ್ ಗೆ ನೀವು ವೋಟ್ ಕೊಡಿ ಎಂದು ಸ್ವರೂಪ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಜೆಡಿಎಸ್ ಏಕೆ ವೋಟ್ ಹಾಕಬೇಕು ಅಂದಾಗ ಒಂದು ಉತ್ತರ ಸಿಗುತ್ತದೆ. ಇಲ್ಲಿ ಅಭಿವೃದ್ಧಿ ಅಂತಾ ಹಾಗಿದ್ರೆ ಅದು ಜೆಡಿಎಸ್ ನವರ ಕಾಲದಲ್ಲಿ ಅಂತಾ ಉತ್ತರ ಸಿಗುತ್ತೆ. ಸ್ವರೂಪ್ ಅಂತಾ ಬಂದಾಗ ದುರಹಂಕಾರಿ ಶಾಸಕನನ್ನ ಆಚೆ ಹಾಕೋದಕ್ಕೆ ಸ್ವರೂಪ್ ಗೆ ವೋಟ್ ಹಾಕಬೇಕು ಅಂತಾ ಉತ್ತರ ಬರುತ್ತೆ.
ನಾವು ಹೇಳಿದ್ದೀವಾ? ಊರು ಬಿಟ್ಟು ಓಡಿಸ್ತಿನಿ ಅಂತಾ ನಾವೇನಾದ್ರೂ ಹೇಳಿದ್ದೀವಾ? ಅವರಾಗೆ ಅವರು ಹೇಳಿಕೊಂಡಿದ್ದಾರೆ. ಯಾರ್ ಯಾರಿಗೂ ಹೇಳಿಲ್ಲ, ನಾವು ಆ ಮಾತ್ನ ಹೇಳೋದೂ ಇಲ್ಲ. ಆದರೆ ಅವರೇ ಒಪ್ಕೊಂಡಿದ್ದಾರೆ, ನನ್ನ ಹಾಸನ ಬಿಟ್ಟು ಓಡಿಸ್ತಾರೆ ಅಂತ. ಯಾಕೆ ಹೇಳಿಕೊಂಡಿದ್ದಾರೆ ಏನೋ, ಸೋತ ಮೇಲೆ ಹೋಗ್ತಾರೋ ಏನೋ ನನಗೆ ಗೊತ್ತಿಲ್ಲ ಎಂದರು.
ಅಲ್ಲದೆ, ಹಿಂದೆ ಹೋದರೆ ಆಲೂರು, ಮುಂದೆ ಹೋದರೆ ಬೆಂಗಳೂರು ಎರಡೂ ಕಡೆ ಅವರಿಗೆ ಅವಕಾಶ ಇದೆ. ಹಿಂದಕ್ಕಾದ್ರೂ ಹೋಗಿ, ಮುಂದಕ್ಕಾದರೂ ಹೋಗಿ. ಅದರ ಬಗ್ಗೆ ನಾವು ಚಿಂತನೆ ಮಾಡೋದು ಬೇಡ. ನಾನು ಎಲ್ಲರಲ್ಲೂ ಮನವಿ ಮಾಡುತ್ತೇನೆ.
ನಾವು ಇನ್ನೊಬ್ಬ ವ್ಯಕ್ತಿನ ದೂಡಿ, ಇನ್ನೊಬ್ಬ ವ್ಯಕ್ತಿನ ಅವಹೇಳನ ಮಾಡಿ, ಇನ್ನೊಬ್ಬರಿಗೆ ಏನೋ ಮಾಡುವ ಮತ ಕೊಡಿ ಅಂತಾ ಕೇಳೋದಿಲ್ಲ. ಇನ್ನೊಬ್ಬ ವ್ಯಕ್ತಿನ ಎತ್ತರ ಮಟ್ಟಕ್ಕೆ ಬಿಂಬಿಸಿ ಮತ ಕೊಡಿ ಅಂತಾ ಕೇಳೋದಿಲ್ಲ. ಇವತ್ತು ನನ್ನ ಮಗ, ನನ್ನ ಮಗ ಸ್ವರೂಪ್‌ಗೆ ದೇವೇಗೌಡರೇ ಆಶೀವಾರ್ದ ಮಾಡಿ ಕಳುಹಿಸಿದ್ದಾರೆ. ಇಂತಹ ಸ್ವರೂಪ್ ಗೆ ನೀವು ವೋಟ್ ಕೊಡಿ ಎಂದು ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ