• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election 2023: ಬೆಂಗಳೂರಿಗೆ ಕಳಪೆ ಮತದಾನದ ಅಪಖ್ಯಾತಿ ತಪ್ಪಿಸಲು BBMPಯಿಂದ ಸರ್ವ ಪ್ರಯತ್ನ; ಮನೆ ಮನೆಗೆ ಜಾಗೃತಿ!

Karnataka Election 2023: ಬೆಂಗಳೂರಿಗೆ ಕಳಪೆ ಮತದಾನದ ಅಪಖ್ಯಾತಿ ತಪ್ಪಿಸಲು BBMPಯಿಂದ ಸರ್ವ ಪ್ರಯತ್ನ; ಮನೆ ಮನೆಗೆ ಜಾಗೃತಿ!

ಮತದಾನ ಜಾಗೃತಿ

ಮತದಾನ ಜಾಗೃತಿ

ಬೆಂಗಳೂರಿನಲ್ಲಿ 2018ರಲ್ಲಿ ಆಗಿರುವ ಮತದಾನ ಪ್ರಮಾಣ ಕೇವಲ ಶೇಕಡಾ 52 ಮಾತ್ರ. ಹಲವು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಶೇಕಡಾ 48ಕ್ಕೆ ಇಳಿದಿದೆ‌.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಕಳಪೆ ಮತದಾನದ (Voting) ನಗರ ಅನ್ನೋ ಅಪಖ್ಯಾತಿಯನ್ನು ಬೆಂಗಳೂರು (Bengaluru) ಪಡೆದಿದೆ. ಹಳ್ಳಿ (Village) ಮತದಾರರೇ ಬೆಸ್ಟ್ ಸಿಟಿ (City) ಜನರು ಕಳಪೆ ಸಾಧನೆ ಮಾಡಿದ್ದಾರೆ. ಈ ಅಪಖ್ಯಾತಿಯನ್ನ ಹೋಗಲಾಡಿಸಲು ಬಿಬಿಎಂಪಿ (BBMP) ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಇದೀಗ ಪೌರಕಾರ್ಮಿಕರೇ ಮತದಾನ ಜಾಗೃತಿಗೆ (Voter Awareness) ಮುಂದಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳು ಕೂಡ ಸರ್ವಸನ್ನದ್ಧವಾಗಿ ನಿಂತಿದೆ. ಈ ಬಾರಿ ಬೆಂಗಳೂರಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಪಾಲಿಕೆ ಕೂಡ ಕಸರತ್ತು ನಡೆಸುತ್ತಿದೆ.


2023ರ ಮತದಾನ ಹೆಚ್ಚಿಸಲು ಬಿಬಿಎಂಪಿ ಜಾಗೃತಿ


ಬಹುತೇಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಐಟಿ ಬಿಟಿ ರಾಜಧಾನಿಯೆಂದೇ ಹೆಸರಾಗಿರುವ ಬೆಂಗಳೂರಿನಲ್ಲಿ 2018ರಲ್ಲಿ ಆಗಿರುವ ಮತದಾನ ಪ್ರಮಾಣ ಕೇವಲ ಶೇಕಡಾ 52 ಮಾತ್ರ. ಹಲವು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಶೇಕಡಾ 48ಕ್ಕೆ ಇಳಿದಿದೆ‌. ಹೀಗಾಗಿ ಈ ಸಾರಿ ಹೆಚ್ಚಿನ ಮತದಾನ ಮಾಡಿಸಲು ಇನ್ನಿಲ್ಲದ ಕಸರತ್ತು ಬಿಬಿಎಂಪಿ ನಡೆಸಿದೆ.


ಮತದಾನ ಜಾಗೃತಿ


ಇದನ್ನೂ ಓದಿ: Karnataka Election 2023: ಸಿಎಂ, ಸಚಿವರು, ಶಾಸಕರನ್ನು ಬದಲಾಯಿಸೋ ಧೈರ್ಯ ಮೋದಿಗೆ ಮಾತ್ರ ಇದೆ -ಬಸವರಾಜ ಬೊಮ್ಮಾಯಿ


ಮನೆಮನೆಗಳಿಗೆ ಹೋಗಿ ಬಿಬಿಎಂಪಿ ಪೌರಕಾರ್ಮಿಕರು ಕಸವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಪೌರಕಾರ್ಮಿಕರಿಗೆ ಆಯಾ ಏರಿಯಾದ ಎಲ್ಲಾ ಮನೆಗಳ ಪರಿಚಯ, ಮಾಹಿತಿ ಇರುತ್ತದೆ. ಪೌರಕಾರ್ಮಿಕರಿಂದಲೇ ಮತದಾನ ಜಾಗೃತಿ ಮೂಡಿಸಲು ಬಿಬಿಎಂಪಿ ನಿರ್ಧಾರ ಮಾಡಿದೆ. ಇಂದು ಶಿವಾಜಿನಗರದ ಹಲವು ವಾರ್ಡ್ ಗಳಲ್ಲಿ ಬಿಬಿಎಂಪಿ ಪೌರಕಾರ್ಮಿಕರೇ ಮತದಾನದ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.


top videos  ಮತದಾನದ ಪ್ರಮಾಣ ಹೆಚ್ಚಳ ಮಾಡಲು ಬಿಬಿಎಂಪಿ ಸರ್ವ ಪ್ರಯತ್ನ ಮಾಡುತ್ತಿದೆ. ಆದರೆ ಇದು ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅಂತಾ ಕಾದು ನೋಡಬೇಕು.

  First published: