ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಗೆ (BJP) ಆಗಿರೋ ಡ್ಯಾಮೇಜ್ ಕಂಟ್ರೋಲ್ಗೆ ದೊಡ್ಡಮಟ್ಟದಲ್ಲೇ ಸಭೆಗಳು ನಡೆಯುತ್ತಿದೆ. ನಾಗ್ಪುರದಿಂದ (Nagpur) ಆರ್ಎಸ್ಎಸ್ ಟೀಂ ಎಂಟ್ರಿ ಕೊಟ್ಟಿದ್ದು, ಇತ್ತ ದೆಹಲಿಯಿಂದ (Delhi) ಅಮಿತ್ ಶಾ ಆಗಮನವೂ ಆಗಿದೆ. ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ಕೇಂದ್ರ ಸಚಿವರ ಟೀಂ ಲಗ್ಗೆ ಹಾಕಿದೆ. ಹೌದು, ದಕ್ಷಿಣ ಕರ್ನಾಟಕದ ಹೆಬ್ಬಾಗಿಲು ಬಿಜೆಪಿ ಪಾಲಿಗೆ ಮುಚ್ಚಿಬಿಡುತ್ತೆ ಅನ್ನುವ ಮಟ್ಟಿಗೆ ಚುನಾವಣೆ (Election) ಕಾವೇರಿದೆ. ಎಲೆಕ್ಷನ್ಗೂ ಮುನ್ನ ಆಪರೇಷನ್ ಕಮಲ (Operation Kamala) ಮಾಡುತ್ತಿದ್ದ ಬಿಜೆಪಿಗೆ ಜೆಡಿಎಸ್(JDS), ಕಾಂಗ್ರೆಸ್ (Congress) ಎಲೆಕ್ಷನ್ ಟೈಂನಲ್ಲಿ ಸರಣಿ ಆಪರೇಷನ್ ಮಾಡುತ್ತಿವೆ. ಇದರ ನಡುವೆ ಹೊಸಬರಿಗೆ ಮನ್ನಣೆ ನೀಡಲು ಕೈ ಹಾಕಿದ ಬಿಜೆಪಿಗೆ ಹಿರಿಯ ನಾಯಕರು ಕೊಡುತ್ತಿರುವ ಶಾಕಿಂಗ್ ನಡೆಗಳು ಬಿಜೆಪಿಯ ನಿದ್ದೆಗೆಡಿಸಿವೆ.
ಬೆಂಗಳೂರಲ್ಲಿ ಅಮಿತ್ ಶಾ ಸರಣಿ ಸಭೆ
ಬೆಂಗಳೂರಿಗೆ ಅಮಿತ್ ಶಾ ಎಂಟ್ರಿ ಆಗಿದೆ. ಏರ್ಪೋರ್ಟ್ಗೆ ಬಂದಿಳಿದ ಅಮಿತ್ ಶಾ ದೇವನಹಳ್ಳಿಯಲ್ಲಿ ಭರ್ಜರಿ ರೋಡ್ಶೋಗೆ ಹೊರಟ್ಟಿದ್ದರು. ಸಾವಿರ ಸಾವಿರ ಬಿಜೆಪಿ ಕಾರ್ಯಕರ್ತರು ರೆಡಿಯಾಗಿದ್ದರು. ಅಭ್ಯರ್ಥಿ ಪಿಳ್ಳಮುನಿಶಾಮಪ್ಪರಂತೂ ಅಮಿತ್ ಶಾ ಬರ್ತಾರೆ ಅಂತ ಹಿರಿಹಿರಿ ಹಿಗ್ಗಿದ್ದರು.
ಇದನ್ನೂ ಓದಿ: Ramadan: ಶನಿವಾರ ಬೆಂಗಳೂರಲ್ಲಿ ರಂಜಾನ್ ಸಂಭ್ರಮ, ಮೈಸೂರು ರಸ್ತೆಯಲ್ಲಿ ಸಂಚಾರ ಬದಲಾವಣೆ
ಶೆಟ್ಟರ್ ರಾಜೀನಾಮೆ ಲಿಂಗಾಯತ ಮತ ವಿಭಜನೆ!
ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಶೆಟ್ಟರ್ ಆರ್ಭಟವನ್ನ ಮಟ್ಟಹಾಕಲು ಚುನಾವಣಾ ಅಖಾಡಕ್ಕೆ ನಾಗಪುರದಿಂದ 50 ಆರ್ಎಸ್ಎಸ್ ಪ್ರಮುಖರ ತಂಡ ಎಂಟ್ರಿ ಕೊಟ್ಟಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಜೊತೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಾರೆ.
ಇತ್ತ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ 40ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ಹುಮ್ಮಸ್ಸಲ್ಲಿದೆ. ವರುಣಾದಲ್ಲಿ ಸಿದ್ದರಾಮಯ್ಯರನ್ನ ಸೋಲಿಸುವ ಹಠಕ್ಕೆ ಬಿದ್ದಿರುವ ಬಿಜೆಪಿ ವಿ.ಸೋಮಣ್ಣ ಅವರನ್ನು ಅಖಾಡಕ್ಕಿಳಿಸಿದೆ. ಆದರೆ ಟಿಕೆಟ್ ಸಿಗದವರ ಸಿಟ್ಟು ಬಿಜೆಪಿಗೆ ದೊಡ್ಡ ಸಂಕಷ್ಟ ಎದುರಾಗಿದ್ದು ಬಿ.ಎಲ್.ಸಂತೋಷ್ ಖುದ್ದು ಅಖಾಡಕ್ಕಿಳಿದು ಸರಣಿ ಸಭೆ ಮಾಡಿದ್ದಾರೆ.
ಬೀದರ್ನ ಶಿವನಗರದಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿನಡ್ಡಾ ಭೇಟಿಕೊಟ್ಟಿದ್ದಾರೆ. ಗೋಪೂಜೆ ಸಲ್ಲಿಸಿ ಬಳಿಕ ಆಶ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಆಮೇಲೆ ಬೀದರ್ ಖಾಸಗಿ ಹೊಟೇಲ್‌ನಲ್ಲಿ ವ್ಯಾಪಾರಿಗಳು, ಸಮುದಾಯದ ಮುಖಂಡರುಗಳ ಜೊತೆ ಸಭೆ ಮಾಡಿ ಮತಬೇಟೆ ನಡೆಸಿದ್ದಾರೆ.
ಇನ್ನು ಕೊಪ್ಪಳದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಬಳಿಕ ಬಳ್ಳಾರಿಯಲ್ಲೂ ಮಾಂಡವಿಯಾ ಬಿಜೆಪಿ ಪ್ರಮುಖರ ಜೊತೆ ಸಭೆ ಮಾಡಿದ್ದರು. ಅಮಿತ್ಷಾ, ಜೆ.ಪಿನಡ್ಡಾ, ಬಿ.ಎಲ್.ಸಂತೋಷ್ ಜೊತೆ ಸಂಘ ಪರಿವಾರದ ಪ್ರಮುಖರು ಕರ್ನಾಟಕದಲ್ಲಿ ಠಿಕಾಣಿ ಹೂಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನ ಶತಾಯಗತಾಯ ಅಧಿಕಾರಕ್ಕೆ ತರಬೇಕು ಅನ್ನೋದಷ್ಟೇ ಬಿಜೆಪಿ ಗುರಿ ಇಟ್ಟುಕೊಂಡು ಸಭೆ ಮೇಲೆ ಸಭೆ ಮಾಡಿದ್ದಾರೆ. ಆದರೆ ಎಷ್ಟರ ಮಟ್ಟಿಗೆ ಸಫಲತೆ ಸಿಗುತ್ತೆ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ