ಚಿಕ್ಕೋಡಿ: ನನ್ನನ್ನು ಒಂದು ಜಾತಿಗೆ (Caste) ಸೀಮಿತ ಮಾಡಬೇಡಿ. ನಾನು ಇಲ್ಲಿ ಒಬ್ಬ ಸ್ನೇಹಿತನಾಗಿ (Friend) ಬಂದಿದ್ದೇನೆ ಎಲ್ಲಾ ಧರ್ಮದವರು (Religion) ನಮ್ಮವರೇ ಎಂದು ನಟ ಕಿಚ್ಚ ಸುದೀಪ್ (Kichcha Sudeepa) ಮನವಿ ಮಾಡಿದ್ದಾರೆ. ಯಮಕನಮರಡಿ (Yamakanamardi) ಮತಕ್ಷೇತ್ರದಲ್ಲಿ ಸುದೀಪ್ ಇಂದು ಭರ್ಜರಿ ಮತಬೇಟೆ ನಡೆಸಿದರು. ಬಿಜೆಪಿ (BJP) ಅಭ್ಯರ್ಥಿ ಬಸವರಾಜ ಹುಂದ್ರಿ (Basavaraj Hundri ) ಪರ ಮತಯಾಚನೆ ಮಾಡಿದ ಅವರು, ತಮ್ಮನ್ನು ನೋಡಲು ಬಂದ ಜನರ (People) ಬಳಿ ವಿಶೇಷ ಮನವಿಯೊಂದನ್ನು ಮಾಡಿದರು.
ನಾನು ಇಲ್ಲಿ ಒಬ್ಬ ಸ್ನೇಹಿತನಾಗಿ ಬಂದಿದ್ದೇನೆ
ಬರಿ ಜನ ಸೇರುವುದಷ್ಟೇ ಅಲ್ಲ, ಬಸವರಾಜ ಹುಂದ್ರಿ ಅವರಿಗೆ ಆಶೀರ್ವಾದ ಮಾಡಬೇಕು. ನಾನು ಬಂದಾಗ ನೋಡಿದೆ ಇಲ್ಲಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗೆದ್ದ ಬಳಿಕ ರಸ್ತೆ ಮಾಡಿಸುವಂತೆ ಬಸವರಾಜ ಹುಂದ್ರಿಗೆ ಹೇಳಿದ ಕಿಚ್ಚ, ನೀವು ರಸ್ತೆ ಮಾಡಿಸಿದ ಬಳಿಕ ನಾನು ಮತ್ತೊಮ್ಮೆ ಇಲ್ಲಿಗೆ ಬರ್ತಿನಿ, ಇಲ್ಲಿನ ರಸ್ತೆಗಳನ್ನ ನೋಡುತ್ತೇನೆ ಎಂದು ಹೇಳಿದರು. ಅಲ್ಲದೆ, ನನ್ನನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ. ನಾನು ಇಲ್ಲಿ ಒಬ್ಬ ಸ್ನೇಹಿತನಾಗಿ ಬಂದಿದ್ದೇನೆ, ಎಲ್ಲಾ ಧರ್ಮದವರು ನಮ್ಮವರೇ ಎಂದು ಸುದೀಪ್ ಮನವಿ ಮಾಡಿದರು.
ಬೊಮ್ಮಾಯಿಯವರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಸುದೀಪ್ ಮಾತನಾಡಿದರು. ಕಾಂಗ್ರೆಸ್ನಲ್ಲಿಯೂ ನೀವು ಪ್ರಚಾರ ಮಾಡ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನಲ್ಲಿಯೂ ಕೂಡ ನನಗೆ ಸ್ನೇಹಿತರಿದ್ದಾರೆ ಎಂದು ಹೇಳಿದರು. ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ಇವತ್ತು ಪ್ರಚಾರ ಮಾಡುತ್ತೇನೆ. ನಾನು ಬೊಮ್ಮಾಯಿಯವರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಈಗಾಗಲೇ ಸಾಕಷ್ಟು ಬಾರಿ ಈ ವಿಚಾರವನ್ನ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಕೆಲವು ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ
ಇನ್ನು, ಪ್ರಚಾರ ವೇಳೆ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸುದೀಪ್, ಬೇಸರ ಆಯ್ತು ಅಂದರೂ ತಪ್ಪಾಗುತ್ತೆ, ಬೇಸರ ಅಗಿಲ್ಲ ಅಂದರೂ ತಪ್ಪಾಗುತ್ತೆ. ನಾವು ಹೋದಾಗ ಚುನಾವಣಾ ಪ್ರಚಾರ ಬೇರೆ ರೀತಿ ಆಗುತ್ತೆ. ಬಿಜೆಪಿಯವರು ಆರ್ಗನೈಜ್ ಚೆನ್ನಾಗಿಯೇ ಮಾಡಿದ್ದಾರೆ, ಆದರೆ ಕೆಲವು ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ. ಮಿಸ್ ಅಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇನೆ ಎಂದರು.
ಅಭಿಮಾನಿಗಳ ಪ್ರತಿಕ್ರಿಯೆ ಬಗ್ಗೆ ಹೇಳಿಕೆ ನೀಡಿದ ಸುದೀಪ್, ಜನ ಅಲ್ಲ ಜನಸಾಗರ ಸೇರುತ್ತಿದ್ದಾರೆ. ಅದನ್ನ ನೋಡಿ ಇನ್ನೂ ಒಳ್ಳೆ ಕೆಲಸ ಮಾಡಬೇಕು ಅಂತಾ ಅನಿಸುತ್ತೆ. ಪ್ರಚಾರಕ್ಕೆ ಹೋಗದಿದ್ದಕ್ಕೆ ಡಿಕೆಶಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಏನಾದರೂ ಒಂದು ಕಾರಣ ಇರುತ್ತಲ್ವಾ. ಅವರು ಕೂಡ ನಮ್ಮವರೇ ಚುನಾವಣೆಗಾಗಿ ಸಂಬಂಧ ಹಾಳು ಮಾಡಿಕೊಳ್ಳಲು ಆಗುವುದಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ