ಬೆಂಗಳೂರು: ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಬಜರಂಗದಳನಾ (Bajrang Dal) ಬ್ಯಾನ್ ಮಾಡುತ್ತೇವೆ ಅಂತ ಭರವಸೆ ಕೊಟ್ಟಿದೆ. ಬಿಜೆಪಿಯವರು (BJP) ಜೈ ಬಜರಂಗಬಲಿ ಅಂತ ರಾಜ್ಯಾದ್ಯಂತ ಹನುಮ ಚಾಲೀಸಾ (Hanuman Chalisa) ಪಠಿಸುತ್ತಿದ್ದಾರೆ. ದೇವರನ್ನೂ ಬಿಡದ ಈ ಎಲೆಕ್ಷನ್ ಅಖಾಡದಲ್ಲಿ ಬಜರಂಗದಳದ ನಿಷೇಧದ ಭರವಸೆಯನ್ನು ಸಮರ್ಥಿಸಿಕೊಂಡರು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹಿಂದೂ ಸಂಘಟನೆಗಳ ಪರ ಕಾರ್ಯಕರ್ತರು (Hindu Activists) ಹನುಮ ಚಾಲೀಸಾ ಪಠಿಸಿ ಪ್ರತಿಭಟನೆ ಮಾಡಿದ್ದಾರೆ. ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು, ಚುನಾವಣೆಯಲ್ಲಿ ಆಂಜನೇಯ ತಂದವರು ಕಾಂಗ್ರೆಸ್ ನವರು, ಬಜರಂಗದಳ ನಿಷೇಧ ಮಾಡುವ ಪ್ರಣಾಳಿಕೆ ತಂದರು ಎಂದು ಆರೋಪಿಸಿದರು.
ಅಲ್ಲದೇ, ಇಂದು ಹನುಮಾನ್ ಚಾಲೀಸಾ ಪಠಣೆ ಮಾಡುವ ಮೂಲಕ ಸವಾಲು ಕೊಟ್ಟಿದ್ದೇವೆ. ಎಸ್ಡಿಪಿಐಗೆ (SDPI) ಖುಷಿ ಪಡಿಸಲು ಕಾಂಗ್ರೆಸ್ ಬಜರಂಗದಳದ ನಿಷೇಧದ ಬಗ್ಗೆ ಮಾತನಾಡಿದೆ. ಇದನ್ನು ಕೇಳಿ ನಾವು ಸುಮ್ಮನೆ ಸಹಿಸಿಕೊಂಡು ಕೂರುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದರು.
ಇದನ್ನೂ ಓದಿ: Siddaramaiah: ಮಾಜಿ ಸಿಎಂ ಪರ ನಟಿ ರಮ್ಯಾ ಅಬ್ಬರದ ಪ್ರಚಾರ, ಸಿದ್ದುಗೆ ಸಾಥ್ ಕೊಟ್ಟ ಶಿವಣ್ಣಗೆ ಪ್ರತಾಪ್ ಸಿಂಹ ಟಾಂಗ್!
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ವಿಚಾರವಾಗಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘದ ಕಾರ್ಯಕರ್ತರು ಗದಗ ನಗರದ ಮಾರುತೇಶ್ವರ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣ ಹಾಗೂ ಭಜನೆ ಮಾಡಿ ಶ್ರೀ ರಾಮ್ ಹಾಗೂ ಹನುಮಾನ್ ಪರ ಘೋಷಣೆ ಕೂಗಿದರು. ಇನ್ನು ರಾಯಚೂರಿನ ಬಗೀಚಿ ಹನುಮಾನ್ ಟೆಂಪಲ್ ನಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಣೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ