ಬೆಳಗಾವಿ: ಕುಡಚಿಯಲ್ಲಿ (Kudachi) ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯದ ಬೀಡು ಕುಡಚಿ, ಕರ್ನಾಟಕಕ್ಕೆ ಏನನ್ನಾದರೂ ಮಾಡಬೇಕು ಅನ್ನಿಸುತ್ತಿದೆ. ಮಾತೃಶಕ್ತಿ ಮಾತಾಡೋವಾಗ ಬೆಳಗಾವಿ (Belagavi) ನೆನಪಾಗುತ್ತೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಬಲಿದಾನ ನೆನಪಾಗುತ್ತದೆ. ನಿಮ್ಮನ್ನು ನೋಡಿದರೆ ಕರ್ನಾಟಕ (Karnataka) ನಂಬರ್ 01 ಮಾಡಲು ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ (BJP) ಸರ್ಕಾರ ಎಂದು ಕನ್ನಡಿಗರ ಬೆಂಬಲವನ್ನು ಕೇಳಿದ್ದಾರೆ.
ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರವನ್ನು ಮತ್ತೆ ರಚನೆ ಮಾಡಲು ಬಿಜೆಪಿಗೆ ಮತ ನೀಡಿ. ಕರ್ನಾಟಕಕ್ಕೆ ಓರ್ವ ಸೇವಕನಾಗಿ ಕೆಲಸ ಮಾಡಲು ಬಂದಿದ್ದೇನೆ, ಆದ್ದರಿಂದ ನೀವು ನನಗೆ ಸಹಕಾರ ಕೊಡುತ್ತೀರಾ? ಕರ್ನಾಟಕ ನನಗೆ ಪ್ರಮುಖ ರಾಜ್ಯವಾಗಿದೆ ಆದ್ದರಿಂದ ಬಿಜೆಪಿಗೆ ಮತ ನೀಡಿ. ಸಂಪ್ರದಾಯ ಹಾಗೂ ತಂತ್ರಜ್ಞಾನದ ಸಮ್ಮಿಲನ ರಾಜ್ಯ ಸರ್ಕಾರ, ಸಂಸ್ಕೃತಿ ಹಾಗೂ ಸ್ಟಾರ್ಟ್ ಅಪ್ ಜೊತೆ ಜೊತೆಯಾಗಿದೆ.
ಬಿಜೆಪಿ ಕರ್ನಾಟದ ವಿಕಾಸಕ್ಕೆ ಹೊಸ ಉತ್ಸಾಹಿ ಹಾಗೂ ಅನುಭವಿಗಳ ತಂಡವನ್ನು ಸಿದ್ಧ ಮಾಡುತ್ತಿದೆ. ಈ ತಂಡ ಕರ್ನಾಟಕ ಅಭಿವೃದ್ಧಿಗೆ ಕಾರ್ಯನಿರ್ವಹಿಸಲಿದೆ. ಆದ್ದರಿಂದ ನೀವು ಈ ತಂಡಕ್ಕೆ ಆಶೀರ್ವಾದ ನೀಡಬೇಕಿದೆ. ನಿಮ್ಮ ಉತ್ಸಾಹ ನೋಡಿದರೆ, ಈ ಬಾರಿಯ ನಿರ್ಧಾರ ಬಹುಮತ ಸರ್ಕಾರ ಎಂಬ ಮಾತು ನನಗೆ ನೆನಪಾಗುತ್ತೆ ಎಂದು ಒತ್ತಿ ಒತ್ತಿ ಹೇಳಿದರು.
ಕಾಂಗ್ರೆಸ್ ಜಾತಿ ಆಧಾರದಲ್ಲಿ ಸಮಾಜ ಒಡೆದಿದೆ. 91 ಬಾರಿ ನನ್ನ ವಿರುದ್ಧ ಬೈಗುಳ ಪ್ರಯೋಗ ಮಾಡಿದೆ. ನನ್ನನ್ನು ಬೈದಷ್ಟೂ ಕಾಂಗ್ರೆಸ್ ದುರ್ಗತಿಗೆ ಹೋಗಿದೆ. ಇನ್ನು ಕಾಂಗ್ರೆಸ್ ನಾಯಕರು, ಬಾಬಾ ಸಾಹೇಬ್‌ರನ್ನ ರಾಷ್ಟ್ರದ್ರೋಹಿ, ರಾಕ್ಷಸ ಅಂದಿದ್ದರು. ಅಂದು ಮಹಾಪುರುಷರನ್ನ ಬೈದವರು, ಇಂದು ಮೋದಿಯನ್ನ ಬೈತಿದ್ದಾರೆ. ಅವರ ಬೈಗುಳಗಳೇ ನನಗೆ ಸನ್ಮಾನ ಅಂತ ಭಾವಿಸುತ್ತೇನೆ ಎಂದು ಮೋದಿ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: HD Kumaraswamy: ಪರಮೇಶ್ವರ್ ವಿರುದ್ಧ ಕಲ್ಲು ತೂರಾಟ ಅಲ್ಲ, ಬಾವುಟದ ಕಂಬಿ ಚುಚ್ಚಿಕೊಂಡು ಗಾಯ ಆಗಿರಬಹುದು; ಎಚ್ಡಿಕೆ
ಮೇ 10ರಂದು ನೀವು ವೋಟ್ ಮಾಡುವುದು ಕರ್ನಾಟಕವನ್ನು ನಂಬರ್ 1 ಮಾಡುವುದಕ್ಕಾಗಿ. ಡಬಲ್ ಎಂಜಿನ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ನೀವು ಮತ ನೀಡಲಿದ್ದೀರಿ. ಕರ್ನಾಟಕ ನನಗೆ ಬಹುಮುಖ್ಯ ರಾಜ್ಯ. ಹಾಗಾಗಿ ನಿಮ್ಮ ಆಶೀರ್ವಾದ ಬೇಡಲು ಬಂದಿದ್ದೇನೆ. ಕಾಂಗ್ರೆಸ್ ಎಂದೂ ಬಹುಸಂಖ್ಯಾತ ಸಮುದಾಯವಾದ ಬಂಜಾರ ಸಮುದಾಯಗಳ ಕಾಳಜಿಯನ್ನು ವಹಿಸಿರಲಿಲ್ಲ, ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದಮೇಲೆ ವಿಶೇಷ ನಿಗಮ ಸ್ಥಾಪಿಸಿದ್ದೇವೆ. ತಾಂಡಾ ಮತ್ತು ಕುರುಬರಹಟ್ಟಿಗಳಿಗೆ ಕಂದಾಯ ಗ್ರಾಮದ ಸ್ಥಾನ ನೀಡಿ ಅವರಿಗೆ ಹಕ್ಕುಪತ್ರಗಳನ್ನು ನೀಡಿದ್ದೇವೆ.
ಕರ್ನಾಟಕದಲ್ಲಿ ತಂತ್ರಜ್ಞಾನವೂ ಇದೆ, ಸಂಸ್ಕೃತಿಯೂ ಇದೆ. ಇಲ್ಲಿ ಸಂಸ್ಕೃತಿ ಹಾಗೂ ಸ್ಟಾರ್ಟಪ್‌ಗಳು ಎರಡೂ ಏಕಕಾಲಕ್ಕೆ ಗಟ್ಟಿಗೊಳ್ಳುತ್ತದೆ. ಇಲ್ಲಿ ಪುರಾತನ ಮತ್ತು ಆಧುನಿಕ ಅಸ್ಮಿತೆಗಳೆರಡೂ ಬೆಳೆಯುತ್ತದೆ. ಇದು ಡಬಲ್ ಎಂಜಿನ್ ಸರ್ಕಾರದ ಮಾಡೆಲ್ ಕೂಡ ಹೌದು. ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿಯ ಅದ್ಭುತ ಮಾದರಿ ಸಿದ್ದವಾಗುತ್ತಿದೆ. ಬಿಜೆಪಿಗೆ ಜನ ಸೇವೆಯೇ ರಾಷ್ಟ್ರಸೇವೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ