ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Elections 2023) ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಕಮಲ ಪಾಳಯ ಕೊತ ಕೊತನೆ ಕುದಿಯುತ್ತಿದೆ. ಉತ್ತರ ಕರ್ನಾಟಕದಿಂದ ದಕ್ಷಿಣದವರೆಗೆ ಕಮಲದಲ್ಲಿ ಬಂಡಾಯದ ಬೇಗೆ ಭುಗಿಲೆದ್ದಿದೆ. 189ರ ಪೈಕಿ 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಮಲ ಕಂಪನವಾಗಿದೆ. ಬಂಡಾಯ ಸ್ಪರ್ಧೆಗೆ ಬಿಜೆಪಿ (BJP) ರೆಬೆಲ್ಸ್ ಮನಸ್ಸು ಮಾಡುತ್ತಿದ್ದಾರೆ. ಕಮಲ ಪಡೆ ವಿರುದ್ಧ ಬಂಡೆದ್ದವರು ಆಕ್ರೋಶ ಹೊರಹಾಕಿದ್ದಾರೆ, ಮತ್ತೆ ಕೆಲವರು ಕಣ್ಣೀರು ಹಾಕಿದ್ದಾರೆ. ಈ ಎಲ್ಲದರ ನಡುವೆ ಬಿಜೆಪಿಯ ಸುಳ್ಯ (Sullia) ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ (S Angara) ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ (Politics Retirement) ಮಾಡಿದ್ದಾರೆ.
ಆರು ಬಾರಿ ಶಾಸಕರಾಗಿದ್ದ ಎಸ್.ಅಂಗಾರ
ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಸಚಿವ ಅಂಗಾರ ಇಂದು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ರಾಜಕೀಯದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಹೋಗದಿರಲು ನಿರ್ಧಾರ ಮಾಡಿದ್ದಾರೆ. ಆರು ಬಾರಿ ಶಾಸಕರಾಗಿದ್ದ ಎಸ್.ಅಂಗಾರ ಅವರಿಗೆ ಟಿಕೆಟ್ ನೀಡುವ ಬದಲು ಆದಿ ದ್ರಾವಿಡ ಸಮಾಜದ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು.
ಇದರೊಂದಿಗೆ ಬಿಜೆಪಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಮುಖ ಪರಿಚಯಿಸಿತ್ತು. ಆ ಮೂಲಕ ಅಭ್ಯರ್ಥಿ ಯಾರು ಎಂಬ ಗೊಂದಲ್ಲೆ ತೆರ ಎಳೆಯುವ ಕೆಲಸ ಮಾಡಿತ್ತು. ಸುಳ್ಯ ಕ್ಷೇತ್ರವೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ಇನ್ನೂ ದಕ್ಷಿಣ ಜಿಲ್ಲೆಯಲ್ಲಿ ಪುತ್ತೂರು ಕ್ಷೇತ್ರಕ್ಕೆ ಅಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರಿಗೆ ಟಿಕೆಟ್ ತಪ್ಪಿದೆ. ಉಳಿದಂತೆ ಬೆಳ್ತಂಗಡಿಕ್ಕೆ ಹರೀಶ್ ಪೂಂಜಾ ಮತ್ತು ಬಂಟ್ಚಾಳಕ್ಕೆ ರಾಜೇಶ್ ನಾಯ್ಕ್ ಅವರಿಗೆ ಟಿಕೆಟ್ ನೀಡಲಾಗಿದೆ.
ಅಸಮಾಧಾನಗೊಂಡ ಎಲ್ಲರ ಬಳಿ ಮಾತನಾಡುತ್ತಿದ್ದೇನೆ. ಪಕ್ಷ ಅವರನ್ನ ಗೌರವದಿಂದ ಕಂಡು ಶಾಸಕರಾಗಿ ಮಾಡಿದೆ. ಅವರ ರಾಜಕೀಯ ಭವಿಷ್ಯವನ್ನ ಗೌರವ ಪೂರ್ವಕವಾಗಿ ಇರುವ ಹಾಗೆ ನಾನು ನೋಡಿಕೊಳ್ತೇನೆ. ಸವದಿಗೆ ನನ್ನ ಮತ್ತು ಪಕ್ಷದ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಸ್ವಲ್ಪ ಕೋಪದಲ್ಲಿ ಕೆಲ ವಿಷಯ ಹೇಳಿದ್ದಾರೆ, ಮಾತನಾಡಿ ಬಗೆ ಹರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ