News18 India World Cup 2019

Karnataka Exit Poll 2019: ರಾಜ್ಯದಲ್ಲಿ ಯಾರೆಷ್ಟು ಗೆಲ್ಲಬಹುದು? ವಿವಿಧ ಸಮೀಕ್ಷೆಗಳು ಏನು ಹೇಳುತ್ತವೆ? ಮಂಡ್ಯದಲ್ಲಿ ಸುಮಲತಾ ಗೆಲ್ಲಬಹುದೆನ್ನುತ್ತೆ ಸಿವೋಟರ್

Karnataka Lok Sabha Elections 2019 Exit Poll: ನಾಲ್ಕೈದು ಸಂಸ್ಥೆಗಳ ಸಮೀಕ್ಷೆಗಳೆಲ್ಲವೂ ಬಿಜೆಪಿಯೇ ಅತಿ ಹೆಚ್ಚು ಸ್ಥಾನ ಗೆಲ್ಲುತ್ತವೆಂದು ಹೇಳಿವೆ. ಇಂಡಿಯಾ ಟುಡೇ ಸಮೀಕ್ಷೆಯಂತೂ ಬಿಜೆಪಿ 25 ಕ್ಷೇತ್ರದವರೆಗೆ ಗೆಲ್ಲಬಹುದು ಎಂದಿದೆ.

news18
Updated:May 19, 2019, 11:13 PM IST
Karnataka Exit Poll 2019: ರಾಜ್ಯದಲ್ಲಿ ಯಾರೆಷ್ಟು ಗೆಲ್ಲಬಹುದು? ವಿವಿಧ ಸಮೀಕ್ಷೆಗಳು ಏನು ಹೇಳುತ್ತವೆ? ಮಂಡ್ಯದಲ್ಲಿ ಸುಮಲತಾ ಗೆಲ್ಲಬಹುದೆನ್ನುತ್ತೆ ಸಿವೋಟರ್
ಬಿ.ಎಸ್.ಯಡಿಯೂರಪ್ಪ ಮತದಾನ ಮಾಡುತ್ತಿರುವ ಚಿತ್ರ
news18
Updated: May 19, 2019, 11:13 PM IST
ಬೆಂಗಳೂರು(ಮೇ 19): ಕರ್ನಾಟಕದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಬಿಜೆಪಿ ಬರೋಬ್ಬರಿ 15-25 ಸ್ಥಾನಗಳನ್ನ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ. ನ್ಯೂಸ್18 ಮತ್ತು IPSOS ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ 21-23 ಸ್ಥಾನ ಸಿಗಬಹುದೆಂದು ನಂಬಲಾಗಿದೆ. ಎಬಿಪಿ ನೀಲ್ಸನ್ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 15 ಮತ್ತು ಮೈತ್ರಿಪಕ್ಷಕ್ಕೆ 13 ಸ್ಥಾನ ಸಿಗುವ ನಿರೀಕ್ಷೆ ಇದೆ.

ಐಎಎನ್​ಎಸ್ ಸುದ್ದಿ ಸಂಸ್ಥೆ ಮತ್ತು ಸಿವೋಟರ್ ಸಂಸ್ಥೆಗಳು ನಡೆಸಿದ ಸಮೀಕ್ಷೆಯ ಪ್ರಕಾರ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಲಿದ್ದಾರಂತೆ. ಸದ್ಯ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಸೆಂಟ್ರಲ್​ನಲ್ಲಿ ಪ್ರಕಾಶ್ ರಾಜ್ ಮತ್ತು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಮಾತ್ರ ಪ್ರಬಲ ಪಕ್ಷೇತರ ಅಭ್ಯರ್ಥಿಗಳೆನಿಸಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಜೊತೆ ಸುಮಲತಾ ಭಾರೀ ಜಿದ್ದಾಜಿದ್ದಿ ಪೈಪೋಟಿ ನಡೆದಿತ್ತು. ಸಿವೋಟರ್ ಅವರು ಸುಮಲತಾ ಗೆಲ್ಲಬಹುದೆಂದು ಅಂದಾಜಿಸಿರುವ ಸಾಧ್ಯತೆ ಇದೆ. ಹಾಗೆಯೇ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯಲ್ಲೂ ಸುಮಲತಾ ಗೆದ್ದರೆ ಗೆಲ್ಲಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನು, ಚಾಣಕ್ಯ ಸಮೀಕ್ಷೆಯು ಬಿಜೆಪಿಗೆ ರಾಜ್ಯದಲ್ಲಿ 23 ಸೀಟುಗಳು ಸಿಗುತ್ತವೆ ಎಂದಿದೆ. ಇದು ಸತ್ಯವೇ ಆದಲ್ಲಿ ಯಡಿಯೂರಪ್ಪ ಹೇಳಿದ 22 ಸೀಟಿನ ಗುರಿ ಈಡೇರಿದಂತಾಗುತ್ತದೆ. ಕೇಂದ್ರದಲ್ಲಿ ಎನ್​ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸೂಚನೆಯನ್ನು ಸಮೀಕ್ಷೆಗಳು ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರಾಜಕೀಯ ಸಮೀಕರಣದ ಬದಲಾವಣೆಗೆ ಈಗಲೇ ಪ್ರಯತ್ನಗಳು ಆರಂಭವಾಗಬಹುದು. ಮೇ 23ರಂದು ಫಲಿತಾಂಶ ಪ್ರಕಟಗೊಳ್ಳುವವರೆಗೂ ಯಡಿಯೂರಪ್ಪ ಅಂಡ್ ಟೀಮ್​ನವರು ಕಾಯುವುದು ಅನುಮಾನ.

ಕರ್ನಾಟಕದಲ್ಲಿ ವಿವಿಧ ಮತಗಟ್ಟೆ ಸಮೀಕ್ಷೆಗಳು ಹೇಳಿದ್ದು:


Loading...






































ಸಮೀಕ್ಷೆ ಸಂಸ್ಥೆ ಬಿಜೆಪಿ ಜೆಡಿಎಸ್-ಕಾಂಗ್ರೆಸ್ ಇತರೆ
ನ್ಯೂಸ್18-IPSOS 21-23 5-7 0
IANS-ಸಿವೋಟರ್ 18 9 1
ನ್ಯೂಸ್24-ಚಾಣಕ್ಯ 23 5 0
ಎಬಿಪಿ ನೀಲ್ಸನ್ 15 13 0
ಇಂಡಿಯಾಟುಡೇ-ಎಕ್ಸಿಸ್ 21-25 3-5 0-1

ಈ ಸಮೀಕ್ಷೆಗಳು ಏನೇ  ಹೇಳಿದ್ದರೂ ವಾಸ್ತವ ಸ್ಥಿತಿ ಮೇ 23ರಂದು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟ ಮಾಡುವ ಫಲಿತಾಂಶದಿಂದ ಗೊತ್ತಾಗಲಿದೆ.
First published:May 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...