ಚುನಾವಣೆ 2018: ವೋಟಿಂಗ್​ನಲ್ಲೂ ಮಹಿಳೆಯರದ್ದೇ ಮೇಲುಗೈ!

news18
Updated:May 13, 2018, 5:03 PM IST
ಚುನಾವಣೆ 2018: ವೋಟಿಂಗ್​ನಲ್ಲೂ ಮಹಿಳೆಯರದ್ದೇ ಮೇಲುಗೈ!
news18
Updated: May 13, 2018, 5:03 PM IST
ನ್ಯೂಸ್​ 18 ಕನ್ನಡ

ಬೆಂಗಳೂರು:  ಎಸ್​ಎಸ್​ಎಲ್​ಸಿ, ಪಿಯುಸಿ ಸೇರಿದಂತೆ ಯಾವುದೇ ವಿಚಾರದಲ್ಲಿ ಪುರುಷರಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಮಹಿಳೆಯರು ಶನಿವಾರ ನಡೆದ ಕರ್ನಾಟಕ ಚುನಾವಣೆಯ ಮತದಾನ ಪ್ರಕ್ರಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ತಮ್ಮ ಮತಚಲಾಯಿಸುವ ಮೂಲಕ ಹಕ್ಕನ್ನು ಪ್ರದರ್ಶಿಸಿದ್ದಾರೆ.

ಈ ಬಾರಿಯ ಕರ್ನಾಟಕ ಚುನಾವಣೆ ಮತದಾನದಲ್ಲಿ  ಮಹಿಳೆಯರು ಮತ್ತು ಯುವಕರ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿರುವುದು ಉತ್ತಮ ಬೆಳವಣಿಗೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್​ ಕುಮಾರ್​ ಹೇಳಿದ್ದಾರೆ.

ಶನಿವಾರ ಮತದಾನ ಅಂತ್ಯವಾದ ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಸಂಜೀವ್​ ಕುಮಾರ್, ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಮತದಾನ ಪ್ರಮಾಣ ಕಂಡುಬಂದಿತ್ತು. ಅದರಲ್ಲೂ ಪ್ರಮುಖವಾಗಿ ಮತದಾನದಲ್ಲಿ ಯುವಜನತೆ ಸಂಖ್ಯೆ ಮತ್ತು ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿ ಕಂಡು ಬಂದಿದೆ. ನಾವು ಶೇ.70ರಷ್ಟು ಮತದಾನವಾಗಬಹುದು ಎಂದು ಗ್ರಹಿಸಲಾಗಿತ್ತು ಎಂದು ಕುಮಾರ್​ ಹೇಳಿದ್ದಾರೆ.

ರಾಜ್ಯದೆಲ್ಲೆಡೆ ಶನಿವಾರ ಮುಂಜಾನೆ 7ರಿಂದ ಆರಂಭವಾದ ಮತದಾನ ಸಂಜೆ 6.30ರ ಹೊತ್ತಿಗೆ ಅಂತ್ಯವಾಗಿತ್ತು. ಅಧಿಕೃತ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ ಸುಮಾರು ಶೇ. 73ರಷ್ಟು ಮತದಾನ ವಾಗಿತ್ತು. ವಿಪರ್ಯಾಸವೆಂದರೆ ಸಿಲಿಕಾನ್​ ಸಿಟಿಯ ಸಮಸ್ಯೆಗಳ ಕುರಿತು ಸದಾ ಬೊಬ್ಬೆಯಿಡುತ್ತಿದ್ದ ಮಂದಿಯ ನಿರುತ್ಸಾಹದ ಪರಿಣಾಮ ಬೆಂಗಳೂರಿನಲ್ಲಿ ಕಳೆದ ಬಾರಿಗಿಂತ ಶೇ.10ರಷ್ಟು ಮತದಾನ ಕೊರತೆ ಕಂಡು ಬಂದಿತ್ತು.

ಇನ್ನು ಕಳೆದ ಚುನಾವಣೆ ಸಂದರ್ಬದಲ್ಲಿ ನಡೆದ ಆಮಿಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಎಂಟು ಪಟ್ಟು ಅಧಿಕ ನಗದು, ಮದ್ಯ ಸೇರಿದಂತೆ ಮತದಾರರಿಗೆ ಆಮಿಷಕ್ಕೆಂದು ಬಳಕೆ ಮಾಡಲು ತಂದಿದ್ದ ಅಕ್ರಮ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಾಹಿತಿಗಳ ಪ್ರಕಾರ ಚುನಾವಣಾ ಅಧಿಕಾರಿ ಮತ್ತು ಪೊಲೀಸರು ಒಟ್ಟಾರೆ 94 ಕೋಟಿ ನಗದು, 24.7 ಕೋಟಿ ಮೌಲ್ಯದ ಮದ್ಯ, ಸೀರೆ, ವಾಹನ, ಕುಕ್ಕರ್​ ಹೀಗೆ ಸುಮಾರು 66 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕುಮಾರ್​ ಹೇಳಿದ್ದಾರೆ.
First published:May 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ