• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election Results 2023: ಕೆಲವೇ ಕ್ಷಣಗಳಲ್ಲಿ ಕದನ ಕುತೂಹಲಕ್ಕೆ ತೆರೆ: ರಾಜ್ಯದ ಹೈವೋಲ್ಟೇಜ್‌ ಕ್ಷೇತ್ರಗಳ ಬಗ್ಗೆ ಇಲ್ಲಿದೆ ಸಣ್ಣ ಝಲಕ್!

Karnataka Election Results 2023: ಕೆಲವೇ ಕ್ಷಣಗಳಲ್ಲಿ ಕದನ ಕುತೂಹಲಕ್ಕೆ ತೆರೆ: ರಾಜ್ಯದ ಹೈವೋಲ್ಟೇಜ್‌ ಕ್ಷೇತ್ರಗಳ ಬಗ್ಗೆ ಇಲ್ಲಿದೆ ಸಣ್ಣ ಝಲಕ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವೇ ಕ್ಷಣಗಳಲ್ಲಿ ರಾಜ್ಯದ ಎಲ್ಲಾ ಅಭ್ಯರ್ಥಿಗಳ ಹಣೆಬರಹ ಬಟಾಬಯಲಾಗಲಿದೆ. ಯಾರದ್ದು ಮೇಲುಗೈ, ಯಾರು ಅತಂತ್ರ, ಯಾರಿಗೆ ಚುಕ್ಕಾಣಿ ಎಂಬ ಬಹುದಿನದ ಕುತೂಹಲ, ಪ್ರಶ್ನೆಗಳಿಗೆ ತೆರೆ ಬೀಳಲಿದೆ. ಹೀಗಿರುವಾಘ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳು ಯಾವುವು? ಇಲ್ಲಿದೆ ವಿವರ. 

  • Trending Desk
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು(ಮೇ.13): ಇಡೀ ರಾಜ್ಯಕ್ಕೆ ರಾಜ್ಯವೇ ಕಾತುರದಿಂದ ಎದುರು ನೋಡುತ್ತಿದ್ದ ಸಂದರ್ಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬುಧವಾರ ಮತದಾರ ಪ್ರಭು ನಾಯಕರ ಭವಿಷ್ಯ ನಿರ್ಧಾರ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ರಾಜ್ಯದ ಎಲ್ಲಾ ಅಭ್ಯರ್ಥಿಗಳ ಹಣೆಬರಹ ಬಟಾಬಯಲಾಗಲಿದೆ. ಯಾರದ್ದು ಮೇಲುಗೈ, ಯಾರು ಅತಂತ್ರ, ಯಾರಿಗೆ ಚುಕ್ಕಾಣಿ ಎಂಬ ಬಹುದಿನದ ಕುತೂಹಲ, ಪ್ರಶ್ನೆಗಳಿಗೆ ತೆರೆ ಬೀಳಲಿದೆ. ಹೀಗಿರುವಾಗ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳು ಯಾವುವು? ಇಲ್ಲಿದೆ ವಿವರ. 


ಕದನ ಕುತೂಹಲಕ್ಕೆ ನಾಳೆ ತೆರೆ


ಹೌದು, ಮೇ 10 ರಂದು ನಡೆದಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದೆ. ರಾಜ್ಯದ 36 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯಾದ್ಯಂತ, ವಿಶೇಷವಾಗಿ ಮತ ಎಣಿಕೆ ಕೇಂದ್ರಗಳು ಮತ್ತು ಸುತ್ತಮುತ್ತ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ಇದನ್ನೂ ಓದಿ:  Karnataka Election Results 2023 Live: ಕರ್ನಾಟಕ ಚುನಾವಣಾ ಫಲಿತಾಂಶ, ಸ್ಟ್ರಾಂಗ್ ರೂಂನಲ್ಲಿ ನಾಯಕರ ಭವಿಷ್ಯ ಭದ್ರ - ಮತಗಣನೆಗೆ ಕೌಂಟ್ಡೌನ್ ಆರಂಭ


ಯಾರದ್ದು ಮೇಲುಗೈ?


ಈವರೆಗೆ ನಡೆದ ಸಮೀಕ್ಷೆಗಳು ಕಾಂಗ್ರೆಸ್‌ ಪರವಾಗಿದ್ದರೂ, ಬಿಜೆಪಿ-ಕಾಂಗ್ರೆಸ್‌ ನಡುವೆ ಭಾರಿ ಪೈಪೋಟಿ ಇರಲಿದೆ ಎಂದಿವೆ. ಇತ್ತ ಜೆಡಿಎಸ್‌ ತನ್ನ ದಾಳವನ್ನು ಪ್ರಯೋಗಿಸಲು ಸರ್ವಸಿದ್ಧವಾಗಿದೆ. ಒಟ್ಟಾರೆ ಬಿಜೆಪಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವರ ಚುನಾವಣಾ ಭವಿಷ್ಯಕ್ಕೆ ಉತ್ತರ ದೊರಕಲಿದೆ.


ರಾಜ್ಯದ 224 ಕ್ಷೇತ್ರಗಳ ಪೈಕಿ ಕೆಲವು ಹೈವೋಲ್ಟೇಜ್‌ ಕ್ಷೇತ್ರ ಅಂತಾನೇ ಗುರುತಿಸಿಕೊಂಡಿದ್ದವು. ಹಾಗಾದರೆ ಆ ವಿಧಾನಸಭಾ ಕ್ಷೇತ್ರದಲ್ಲಿ ಹೇಗಿದೆ ಚುನಾವಣಾ ಕಾವು? ಇಲ್ಲಿದೆ ಒಂದು ಝಲಕ್.



ವರುಣಾ


ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರ ಯಾವಾಗಲೂ ಸಖತ್‌ ಹವಾ ಮಾಡುತ್ತದೆ. ಈ ಬಾರಿಯೂ ಇಲ್ಲಿಂದ ಸ್ಪರ್ಧಿಸಿದ ಸಿದ್ದರಾಮಯ್ಯ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿರುವುದು ಬಿಜೆಪಿಯ ವಿ. ಸೋಮಣ್ಣ ಮತ್ತು ಜೆಡಿಎಸ್‌ನ ಡಾ.ಭಾರತಿ ಶಂಕರ್‌. ವರುಣಾ ಕ್ಷೇತ್ರದಲ್ಲಿ ಈ ಮೂವರು ಪ್ರಮುಖ ಸ್ಪರ್ಧಿಗಳು. ಇಷ್ಟು ವರ್ಷ ತವರು ಕ್ಷೇತ್ರದಲ್ಲಿ ಸುಲಭವಾಗಿ ಗೆದ್ದ ಸಿದ್ದರಾಮಯ್ಯ ಅವರಿಗೆ ಈ ಭಾರಿ ಸ್ಪರ್ಧೆ ಕಠಿಣವಾಗಿತ್ತು. ಇದಕ್ಕೆ ಟಕ್ಕರ್‌ ಕೊಡುವಂತೆ ಬಿಜೆಪಿಯೂ ತನ್ನ ಪಕ್ಷದಿಂದ ಪ್ರಬಲ ಅಭ್ಯರ್ಥಿ ವಿ ಸೋಮಣ್ಣನವರನ್ನೇ ಅಖಾಡಕ್ಕೆ ಇಳಿಸಿದೆ.


ರಾಜ್ಯ ರಾಜಕೀಯದಲ್ಲಿ ಮಹತ್ವ ಪಡೆದಿರುವ ಈ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಇದ್ದು ಯಾರಿಗೆ ʻವರುಣಾʼ ವರಪ್ರಸಾದವಾಗಲಿದೆ ಎಂಬುವುದು ಶೀಘ್ರದಲ್ಲೇ ತಿಳಿಯಲಿದೆ


ಕನಕಪುರ


ಕನಕಪುರ ಬಂಡೆ ಅಂತಾನೇ ಖ್ಯಾತಿಯಾಗಿರುವ ಡಿಕೆಶಿಯವರ ಭದ್ರ ಕ್ಷೇತ್ರ. ಕಾಂಗ್ರೆಸ್‌ಗೆ ಟಫ್‌ ಫೈಟ್‌ ಕೊಡಲು ಬಿಜೆಪಿ ಇಲ್ಲಿಂದ ಹಾಲಿ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಡಿಕೆ ವಿರುದ್ಧ ಕಣಕ್ಕಿಳಿಸಿದೆ. ಜೆಡಿಎಸ್‌ನಿಂದ ನಾಗರಾಜ್‌ ಸ್ಪರ್ಧಿಸಿದ್ದಾರೆ. 2008 ರಿಂದ ಚುಕ್ಕಾಣಿ ಹಿಡಿದಿರುವ ಒಕ್ಕಲಿಗ ಪ್ರಬಲ ಶಿವಕುಮಾರ್ ಅವರಿಗೆ ಕನಕಪುರ ಭದ್ರಕೋಟೆಯಾಗಿದೆ. ಹೀಗಾಗಿ ಇಬ್ಬರೂ ರಾಜಕೀಯ ದೈತ್ಯರ ಬಲಪ್ರದರ್ಶನಕ್ಕೆ ಕಾರಣವಾಗಿದ್ದ ಕನಕಪುರ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರ ಚಿತ್ತ ಇದೆ.



ಶಿಗ್ಗಾಂವಿ


ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿದ್ದ ಕ್ಷೇತ್ರವಾದ ಕಾರಣ ಶಿಗ್ಗಾಂವ್‌ ಈಗ ಎಲ್ಲರ ಕುತೂಹಲದ ಕ್ಷೇತ್ರ. ಬೊಮ್ಮಾಯಿ ಅವರಿಗೆ ಇಲ್ಲಿ ಕೈ ಅಭ್ಯರ್ಥಿ ಯಾಸೀರ್ ಅಹಮದ್ ಖಾನ್ ಪಠಾಣ್ ಪೈಪೋಟಿ ನೀಡಿದ್ದಾರೆ. ಶಿಗ್ಗಾಂವಿಯಲ್ಲಿ ಲಿಂಗಾಯತ ಅದರಲ್ಲೂ ಪಂಚಮ ಸಾಲಿಗಳ ಮತಬ್ಯಾಂಕ್‌ ದೊಡ್ಡದಿದೆ. ನಂತರ ಮುಸ್ಲಿಂ ಸಮುದಾಯದವರು ಹೆಚ್ಚಿದ್ದಾರೆ. ಜಾತಿವಾರು ಲೆಕ್ಕಾಚಾರದಲ್ಲಿ ಬೊಮ್ಮಾಯಿ ಸುಲಭವಾಗಿ ಗೆಲ್ಲುತ್ತಾರೆ ಎಂಬ ನಂಬಿಕೆ ಇದೆ.


ಚನ್ನಪಟ್ಟಣ


ಈ ಕ್ಷೇತ್ರದಲ್ಲಿ ರಾಜಕೀಯ ದುರೀಣರ ನಡುವೆ ತ್ರಿಕೋನ ಸ್ಫರ್ಧೆ ಇತ್ತು. ಬಿಜೆಪಿಯಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್‌ನಿಂಸ ಗಂಗಾಧರ್ ಎಸ್. ಇನ್ನೂ ಜೆಡಿಎಸ್‌ನಿಂದ ಎಚ್‌.ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಪ್ರತಿ ಬಾರಿ ಕುತೂಹಲಕ್ಕೆ ಕಾರಣವಾಗುತ್ತದೆ. ಇಲ್ಲಿರುವ ಜೆಡಿಎಸ್‌ ಮತ್ತು ಬಿಜೆಪಿ ಇಬ್ಬರೂ ನಾಯಕರು ವೈಯಕ್ತಿಕ ವರ್ಚಸ್ಸು ಹೊಂದಿರುವವರೇ. ಈ ಇಬ್ಬರಲ್ಲಿ ಈ ಬಾರಿ ಯಾರು ಗೆಲ್ತಾರೆ ಅನ್ನೋದೇ ಕದನ ಕುತೂಹಲ.


ಹುಬ್ಬಳ್ಳಿ-ಧಾರವಾಡ ಕೇಂದ್ರ


ಬಿಜೆಪಿಯ ನಿಷ್ಠಾವಂತ ನಾಯಕನಾಗಿ ಗುರುತಿಸಿಕೊಂಡ ಜಗದೀಶ್‌ ಶೆಟ್ಟರ್‌ ರಾಜೀನಾಮೆ ಚುನಾವಣೆಯಲ್ಲಿ ಸಾಕಷ್ಟು ಸುದ್ದಿ ಮಾಡಿದ ವಿಷಯ. ಹೀಗಾಗಿಯೇ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರವು ರಾಷ್ಟ್ರದ ಗಮನ ಸೆಳೆದಿದೆ. ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರಿಗೆ ಬಿಜೆಪಿಯ ಮಹೇಶ್ ಟೆಂಗಿನಕಾಯಿ ಮತ್ತು ಜೆಡಿಎಸ್‌ನ ಸಿದ್ದಲಿಂಗೇಗೌಡ ಒಡೆಯರ್ ಪೈಪೋಟಿ ನೀಡಿದ್ದಾರೆ. ಶೆಟ್ಟರ್‌ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಈ ಬಾರಿ ವಿಜಯ ಯಾವ ಪಕ್ಷಕ್ಕೆ ಅನ್ನೋದನ್ನ ತಿಳಿಯಲು ನಾಳೆವರೆಗೆ ನೀವು ಕಾಯಲೇಬೇಕು.


ಉಡುಪಿ


ಸೂಕ್ಷ್ಮವಾಗಿರುವ ಉಡುಪಿ ಕ್ಷೇತ್ರ ತ್ರಿಕೋನ ಕದನಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಹಿಜಾಬ್ ಚರ್ಚೆಯ ಸಮಯದಲ್ಲಿ ಕುಖ್ಯಾತಿ ಗಳಿಸಿದ ಪ್ರಬಲ ಹಿಂದುತ್ವವಾದಿ ಯಶಪಾಲ್ ಸುವರ್ಣ ಅವರು ಬಿಜೆಪಿ ಅಭ್ಯರ್ಥಿ. ಇವರಿಗೆ ಕಾಂಗ್ರೆಸ್‌ನ ಪ್ರಸಾದ್‌ರಾಜ್ ಕಾಂಚನ್ ಮತ್ತು ಜೆಡಿಎಸ್‌ನ ದಕ್ಷತ್ ಆರ್ ಶೆಟ್ಟಿ ಎದುರಾಳಿಗಳು. ಈ ಮೂವರಲ್ಲಿ ಯಾರಿಗೆ ಉಡುಪಿ ಕ್ಷೇತ್ರದ ಚುಕ್ಕಾಣಿ ಅಂತಾ ಕಾದು ನೋಡಬೇಕು.


ಅಥಣಿ


ಅಥಣಿಯಲ್ಲಿ, ಇಬ್ಬರು ಹಳೆಯ ಪ್ರತಿಸ್ಪರ್ಧಿಗಳ ನಡುವೆ ರೋಚಕ ಹಣಾಹಣಿ ನಡೆಯುತ್ತಿದೆ: ಹಾಲಿ ಬಿಜೆಪಿ ಶಾಸಕ ಮಹೇಶ ಕುಮಠಳ್ಳಿ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನಡುವೆ ಗುದ್ದಾಟ ನಡೆದಿದೆ. ಸವದಿ ಬಿಜೆಪಿಯಿಂದ ಪಕ್ಷಾಂತರಗೊಂಡು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಬಿಜೆಪಿ ಅಭ್ಯರ್ಥಿಯಾಗಿ ಮೂರು ಬಾರಿ ಗೆದ್ದಿರುವ ಸವದಿ ಮತ್ತೆ ಕ್ಷೇತ್ರವನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಾರಾ ಇಲ್ಲಾ ಮಹೇಶ ಕುಮಠಳ್ಳಿ ಗೆದ್ದು ಬೀಗ್ತಾರಾ ನೋಡಬೇಕು.


ಇದನ್ನೂ ಓದಿ: Election Results 2023: ತಡರಾತ್ರಿ ಬೆಂಗಳೂರಿಗೆ HDK; ಷರತ್ತು ಬದ್ಧ ಮೈತ್ರಿಗೆ ಕುಮಾರಸ್ವಾಮಿ ಹೇಳಿದ್ದೇನು?


ಹಾಸನ


ಬಿಜೆಪಿಯಿಂದ ಪ್ರೀತಂ ಗೌಡ, ಕಾಂಗ್ರೆಸ್‌ನಿಂದ ಬನವಾಸಿ ರಂಗಸ್ವಾಮಿ ಮತ್ತು ಸ್ವರೂಪ್‌ ಪ್ರಕಾಶ್‌ ಅವರು ಜೆಡಿಎಸ್‌ ಪರವಾಗಿ ಸ್ಪರ್ಧಿಸಿದ್ದಾರೆ, ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಗೆಲುವು ನಮ್ಮದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

First published: