ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (BJP Leader CT Ravi) ಅವರಿಗೆ ಚುನಾವಣೆಯಲ್ಲಿ ಸೋಲುಂಟಾಗಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಿ.ಟಿ.ರವಿ ಕಾಂಗ್ರೆಸ್ನ ಹೆಚ್.ಡಿ.ತಮ್ಮಯ್ಯ (HD Tammaiah) ವಿರುದ್ಧ ಸೋತಿದ್ದಾರೆ. ಹೆಚ್ಡಿ ತಮ್ಮಯ್ಯ 60,101 ಮತಗಳನ್ನು ಪಡೆದುಕೊಂಡಿದ್ರೆ, ಸಿ.ಟಿ.ರವಿ 52,201 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ.ರವಿ 26,314 ಮತಗಳ ಅಂತರದಿಂದ ಗೆದಿದ್ದರು. ಹೆಚ್ಡಿ ತಮ್ಮಯ್ಯ ಒಂದು ಕಾಲದಲ್ಲಿ ಸಿ.ಟಿ.ರವಿ ಅವರ ಆಪ್ತ ವಲಯದಲ್ಲಿಯೇ ಗುರುತಿಸಿಕೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಸಿ.ಟಿ.ರವಿ ಭಾವನಾತ್ಮಕ ಪತ್ರ
ಆತ್ಮೀಯ ನನ್ನ ಚಿಕ್ಕಮಗಳೂರಿನ ಮತದಾರ ಬಂಧುಗಳೆ ಕಳೆದ 20 ವರ್ಷದಿಂದ ನನ್ನನ್ನು ಆಯ್ಕೆ ಮಾಡಿ ಗೆಲ್ಲಿಸಿದ್ದಾಕ್ಕಾಗಿ ನಿಮಗೆ ಚಿರಋಣಿ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಅದರಂತೆ ಸಮಚಿತ್ತದಿಂದ ಸೋಲನ್ನು ಸ್ವೀಕರಿಸಿದ್ದೇನೆ. ಕಾರ್ಯಕರ್ತರು ದೃತಿಗೆಡದೆ ಮತ್ತೊಮ್ಮೆ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಶ್ರಮಿಸೋಣ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಧೃತಿ ಗೆಡುವುವುದು ಬೇಡ
ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಅವರ ತೀರ್ಮಾನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುತ್ತೇನೆ. ಕಾರ್ಯಕರ್ತರು ಶಕ್ತಿ ಮೀರಿ ಪ್ರಯತ್ನಪಟ್ಟಿದ್ದಾರೆ. ಪಕ್ಷದ ಜವಾಬ್ದಾರಿ ಜೊತೆಗೆ ಇರುವ ಸಮಯದಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಸಮಯ ನೀಡಿದ್ದೇನೆ.
ಇದನ್ನೂ ಓದಿ: Karnataka Election Results: ಅತಿ ಕಡಿಮೆ & ಹೆಚ್ಚು ಮತಗಳ ಅಂತರದಿಂದ ಗೆದ್ದವರು ಯಾರು?
ಕಾರ್ಯಕರ್ತರು ಧೃತಿ ಗೆಡುವುವುದು ಬೇಡ. ಕಾರ್ಯಕರ್ತರಿಗೆ ಸದಾ ಬೆನ್ನಲುಬಾಗಿ ನಿಂತು ಧೈರ್ಯ ತುಂಬುವ ಕೆಲಸ ಮಾಡುತ್ತೇನೆ. ಮತ ನೀಡಿದ ಎಲ್ಲಾ ಮತದಾರರಿಗೆ, ಕಾರ್ಯಕರ್ತರಿಗೆ, ಹಿತೈಷಿಗಳಿಗೆ ತುಂಬು ಹೃದಯದ ಧನ್ಯವಾದಗಳು.
ತಮ್ಮ ವಿಶ್ವಾಸಿ,
ಸಿ.ಟಿ.ರವಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ