ಬೆಂಗಳೂರು: ಜೆಡಿಎಸ್ (JDS) ಭದ್ರ ಕೋಟೆ ಎಂದೇ ಕರೆಯಲಾಗುತ್ತಿದ್ದ ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಈ ಬಾರಿ ಮತದಾರ ಪ್ರಭು ಕಾಂಗ್ರೆಸ್ (Congress) ಕೈ ಹಿಡಿದಿದ್ದಾರೆ. 7 ಕ್ಷೇತ್ರಗಳಲ್ಲಿ 5 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಕಳೆದ ಬಾರಿ 7ಕ್ಕೆ 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು ಬೀಗಿತ್ತು. ಆದರೆ ಕೆಆರ್ ಪೇಟೆ ಶಾಸಕ ಬಿಜೆಪಿ ಸೇರಿದ್ದರಿಂದ ಒಂದು ಕ್ಷೇತ್ರ ಕಳೆದುಕೊಂಡಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮಂಡ್ಯ ಜಿಲ್ಲೆಯಲ್ಲಿ ಅಭೂತಪರ್ವ ಯಶಸ್ಸು ಸಾಧಿಸಿದೆ. ಕಾಂಗ್ರೆಸ್ ಸ್ಪರ್ಧಿಸಿದ್ದ 6 ಕ್ಷೇತ್ರಗಳಲ್ಲಿ 5ರಲ್ಲಿ ಜಯ ಸಾಧಿಸಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರ ಫಲಿತಾಂಶ
ಕಾಂಗ್ರೆಸ್ - ಗಣಿಗ ರವಿಕುಮಾರ್ ಗೌಡ - 60845.
ಜೆಡಿಎಸ್ - ಬಿಆರ್ ರಾಮಚಂದ್ರು - 58996.
ಬಿಜೆಪಿ - ಅಶೋಕ್ ಜಯರಾಂ - 30240
ಗಣಿಗ ರವಿಕುಮಾರ್ ಅವರಿಗೆ 1849 ಮತಗಳ ಅಂತರದಲ್ಲಿ ಗೆಲುವು
ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ - ಬಿಎಲ್ ದೇವರಾಜು - 57939.
ಜೆಡಿಎಸ್ - ಹೆಚ್‌ಟಿ ಮಂಜು - 79844
ಬಿಜೆಪಿ - ಕೆಸಿ ನಾರಾಯಣ್ ಗೌಡ - 37793
21905 ಮತಗಳ ಅಂತರದಲ್ಲಿ ಜೆಡಿಎಸ್ನ ಹೆಚ್ ಟಿ ಮಂಜು ಗೆಲುವು
ನಾಗಮಂಗಲ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ - ಚಲುವರಾಯಸ್ವಾಮಿ - 89801.
ಜೆಡಿಎಸ್ - ಸುರೇಶ್ ಗೌಡ - 85688.
ಬಿಜೆಪಿ - ಸುಧಾ ಶಿವರಾಮ್ - 7683
4113 ಮತಗಳ ಅಂತರದಲ್ಲಿ ಚೆಲುವರಾಯಸ್ವಾಮಿ ಗೆಲುವು
ಮೇಲುಕೋಟೆ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಬೆಂಬಲಿತ ರೈತ ಸಂಘ - ದರ್ಶನ್ ಪುಟ್ಟಣ್ಣಯ್ಯ - 90387.
ಜೆಡಿಎಸ್ - ಸಿಎಸ್ ಪುಟ್ಟರಾಜು - 79424
ಬಿಜೆಪಿ - ಡಾ ಇಂದ್ರೇಶ್ - 6378
10963 ಮತಗಳ ಅಂತರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆಲುವು
ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲುವು
ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿಎಂ ನರೇಂದ್ರಸ್ವಾಮಿ ಗೆಲುವು ಸಾಧಿಸಿದ್ದಾರೆ, ಆದರೆ ಅಧಿಕೃತ ಘೋಷಣೆ ಬಾಕಿ ಉಳಿದಿದೆ.
ಮದ್ದೂರಿನಲ್ಲಿ ಉದಯ್ ಕೆಎಂ ಗೆಲುವು
ಸುಮಾರು 15 ವರ್ಷಗಳ ನಂತರ ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದೆ. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಉದಯ್ ಕದಲೂರು ಭರ್ಜರಿ ಹಾಲಿ ಶಾಸಕ ಹಾಗೂ ಎಚ್ಡಿ ದೇವೇಗೌಡ ಅವರ ಬೀಗರಾದ ಡಿಸಿ ತಮ್ಮಣ್ಣ ವಿರುದ್ಧ ಜಯ ಸಾಧಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ನ ರಮೇಶ್ ಬಂಡಿಸಿದ್ದೇಗೌಡ ಗೆಲುವು
ಜೆಡಿಎಸ್ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಾಂಗ್ರೆಸ್ನ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಜಯ ಸಾಧಿಸಿದ್ದಾರೆ. ಅಧಿಕೃತ ಘೋಷಣೆ ಬಾಕಿಯಿದೆ.
ದಾಖಲೆಯ ಮತದಾನ
ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10ರಂದು ನಡೆದಿತ್ತು. ರಾಜ್ಯದಲ್ಲಿ ಬರೋಬ್ಬರಿ 66 ವರ್ಷಗಳ ನಂತರ ಗರಿಷ್ಠ ಮತದಾನವಾಗಿತ್ತು. ಶೇಕಡಾ 72.81 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆ ಮೂಲಕ ಮತದಾನದಲ್ಲಿ ಕರ್ನಾಟಕ ತನ್ನದೇ ಆದ ಹೊಸ ಐತಿಹಾಸಿಕ ದಾಖಲೆ ಸೃಷ್ಟಿಸಿದೆ.
ರಾಜ್ಯದ 224 ಕ್ಷೇತ್ರಗಳಲ್ಲಿ ಒಟ್ಟು 2600ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯವನ್ನು 3 ಕೋಟಿಗೂ ಹೆಚ್ಚು ಮತದಾರರು ನಿರ್ಧರಿಸಿದ್ದಾರೆ. ರಾಜ್ಯದ 5,30,85,566 ಮತದಾರರ ಪೈಕಿ 3,88,51,807 ಮತದಾರರಿಂದ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಒಟ್ಟು 1,96,58,398 ಪುರುಷ ಮತದಾರರಿಂದ ಹಕ್ಕು ಚಲಾಯಿಸಿದರೆ, 1,91,92,372 ಮಹಿಳಾ ಮತದಾರರಿಂದ ಮತದಾನ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 1037 ಇತರೆ ಮತದಾರರಿಂದ ಹಕ್ಕು ಚಲಾಯಿಸಲಾಗಿದೆ.
ಹೆಚ್ಚು ಮತ್ತು ಕಡಿಮೆ ಮತದಾನ ನಡೆದಿದ್ದೆಲ್ಲಿ?
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ರಾಜ್ಯದ ಅತಿ ಹೆಚ್ಚು ಮತದಾನವಾಗಿದೆ. ಅಲ್ಲಿ ಶೇ.90.93ರಷ್ಟು ಮತದಾನವಾಗಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಲ್ಲಿ ಶೇ.90.9ರಷ್ಟು ಮತದಾನವಾಗಿದೆ. ಬೆಂಗಳೂರಿನ ಸರ್ ಸಿವಿ ರಾಮನ್ ಕ್ಷೇತ್ರದಲ್ಲಿ ಶೇಕಡಾ 42.1 ರಷ್ಟು ಮತದಾನವಾಗಿದ್ದು, ರಾಜ್ಯದಲ್ಲಿ ಅತ್ಯಂತ ಕಡಿಮೆ ಮತದಾನವಾದ ಕ್ಷೇತ್ರವಾಗಿದೆ.
ಈ ವರ್ಷವೂ ರಾಜಧಾನಿಯಲ್ಲಿ ಕಡಿಮೆ ಮತದಾನ
ಬೆಂಗಳೂರು ಕೇಂದ್ರ- ಶೇ.54.45, ಬೆಂಗಳೂರು ಉತ್ತರ ಶೇ.50.02, ಬೆಂಗಳೂರು ದಕ್ಷಿಣ-ಶೇ.51.15, ಬೆಂಗಳೂರು ನಗರ ಶೇ.53.71ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಈ ಮೂಲಕ ರಾಜ್ಯ ರಾಜಧಾನಿಯ ಮತದಾರರು ಈ ಚುನಾವಣೆಯಲ್ಲೂ ಕಡಿಮೆ ಮತದಾನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ