• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Polls Result: ಮಂಡ್ಯ ಜಿಲ್ಲೆಯಲ್ಲಿ ಇರೋ ಒಂದು ಕ್ಷೇತ್ರವನ್ನ ಕಳೆದುಕೊಂಡ ಬಿಜೆಪಿ

Karnataka Polls Result: ಮಂಡ್ಯ ಜಿಲ್ಲೆಯಲ್ಲಿ ಇರೋ ಒಂದು ಕ್ಷೇತ್ರವನ್ನ ಕಳೆದುಕೊಂಡ ಬಿಜೆಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Election Results 2023: ಪ್ರತಿ ಚುನಾವಣೆಯಂತೆ ಈ ಬಾರಿಯೂ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ (Congress And JDS) ನಡುವೆಯೇ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು.

 • News18 Kannada
 • 3-MIN READ
 • Last Updated :
 • Karnataka, India
 • Share this:

ಬೆಂಗಳೂರು: ಚುನಾವಣೆಗೂ ಮುನ್ನವೇ ಬಿಜೆಪಿ ಈ ಬಾರಿ ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ (BJP) ಕಣ್ಣಿಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿ (PM Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಸೇರಿದಂತೆ  ಘಟಾನುಘಟಿ ನಾಯಕರೇ ಮಂಡ್ಯ ಅಖಾಡಕ್ಕೆ ಇಳಿದಿದ್ದರು. ಇಷ್ಟು ದೊಡ್ಡ ಮಟ್ಟದ ಪ್ರಚಾರ ನಡೆಸಿದರೂ ಮಂಡ್ಯ ಕೋಟೆಯಲ್ಲಿ ಕಮಲ ಅರಳಿಲ್ಲ. ಬದಲಾಗಿ ಇರೋ ಒಂದು ಕ್ಷೇತ್ರವನ್ನು ಸಹ ಕಳೆದುಕೊಂಡಿದೆ. ಪ್ರತಿ ಚುನಾವಣೆಯಂತೆ ಈ ಬಾರಿಯೂ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್(Congress And JDS) ನಡುವೆಯೇ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ಕಳೆದ ಬಾರಿ ಜೆಡಿಎಸ್​ ತೊರೆದು ಬಿಜೆಪಿ ಸೇರಿದ್ದ ನಾರಾಯಣಗೌಡರು ಮೊದಲ ಬಾರಿಗೆ ಮಂಡ್ಯ ಕೋಟೆಯಲ್ಲಿ ಕಮಲ ಅರಳಿಸಿದ್ರು.


ಗೆದ್ದ ಅಭ್ಯರ್ಥಿಗಳು


ಒಟ್ಟು ಏಳು ವಿಧಾನಸಭಾ ಕ್ಷೇತ್ರದಲ್ಲಿ  ಐದರಲ್ಲಿ ಕಾಂಗ್ರೆಸ್ ಗೆದ್ದಿದೆ. ಒಂದು ಕ್ಷೇತ್ರದಲ್ಲಿ ಜೆಡಿಎಸ್ ಮತ್ತೊಂದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಾರೆ. ಮಂಡ್ಯದಲ್ಲಿ ಗಣಿಗ ರವಿಕುಮಾರ ಗೌಡ (ಕಾಂಗ್ರೆಸ್), ಕೆಆರ್ ಪೇಟೆ-  ಹೆಚ್​​ಟಿ ಮಂಜು (ಜೆಡಿಎಸ್), ನಾಗಮಂಗಲ-ಚಲುವರಾಯಸ್ವಾಮಿ (ಕಾಂಗ್ರೆಸ್ ),  ಮೇಲುಕೋಟೆ-ದರ್ಶನ್ ಪುಟ್ಟಣ್ಣಯ್ಯ (ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ), ಮಳವಳ್ಳಿ- ಪಿಎಂ ನರೇಂದ್ರಸ್ವಾಮಿ (ಕಾಂಗ್ರೆಸ್) ಮತ್ತು ಮದ್ದೂರು-ಉದಯ್ ಕೆಎಂ ಮತ್ತು ಶ್ರೀರಂಗಪಟ್ಟಣ- ರಮೇಶ್ ಬಂಡಿಸಿದ್ದೇಗೌಡ (ಕಾಂಗ್ರೆಸ್ )


224 ಕ್ಷೇತ್ರಗಳಿಗೆ ಮತದಾನ


ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಪ್ರಕಟವಾಗ್ತಿದೆ.  ಮಾರ್ಚ್​ 30ರಂದು ಸುದ್ದಿಗೋಷ್ಠಿ ನಡೆಸಿದ್ದ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿತ್ತು. ಚುನಾವಣಾ ಕಣದಲ್ಲಿ 2,600ಕ್ಕೂ ಅಧಿಕ ಅಭ್ಯರ್ಥಿಗಳಿದ್ದಾರೆ. ಸಣ್ಣ ಪುಟ್ಟ ಗಲಾಟೆ ಹೊರತುಪಡಿಸಿದ್ರೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.


ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ


ಈ ಬಾರಿ ಮೊದಲ ಬಾರಿಗೆ ಕರ್ನಾಟಕ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು, ದಿವ್ಯಾಂಗರಿಗೆ ಮನೆಯಲ್ಲಿಯೇ ಕುಳಿತು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ನೋಂದಣಿ ಮಾಡಿಕೊಂಡ ಮತದಾರರ ಮನೆಗಳಿಗೆ ಅಧಿಕಾರಿಗಳೇ ತೆರಳಿ ಮತದಾನ ಮಾಡಿಸಿದ್ದು ಈ ಬಾರಿಯ ಚುನಾವಣೆಯ ವಿಶೇಷವಾಗಿತ್ತು.


ಈ ಬಾರಿ ಗರಿಷ್ಠ ಮತದಾನ


ಚುನಾವಣಾ ಆಯೋಗ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಇಡೀ ರಾಜ್ಯದಲ್ಲಿ ಇರುವ 5,30,85,566 ಮತದಾರರ ಪೈಕಿ ಶೇ.72.67 ರಷ್ಟು ಮತದಾನವಾಗಿದೆ. ಅಂದರೆ ರಾಜ್ಯದ ಮತದಾರರ ಪೈಕಿ ಒಟ್ಟು 3.85 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಬಾರಿ ಮತದಾನದಲ್ಲಿ 66 ವರ್ಷಗಳ ನಂತರ ಗರಿಷ್ಠ ಮತದಾನ ಆಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.


ಅತ್ಯಧಿಕ ಮತ್ತು ಕಡಿಮೆ ಮತದಾನ ಎಲ್ಲಿ?


ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ರಾಜ್ಯದ ಅತಿ ಹೆಚ್ಚು ಮತದಾನವಾಗಿದೆ. ಅಲ್ಲಿ ಶೇ.90.93ರಷ್ಟು ಮತದಾನವಾಗಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಲ್ಲಿ ಶೇ.90.9ರಷ್ಟು ಮತದಾನವಾಗಿದೆ. ಬೆಂಗಳೂರಿನ ಸರ್​ ಸಿವಿ ರಾಮನ್ ಕ್ಷೇತ್ರದಲ್ಲಿ ಶೇಕಡಾ 42.1 ರಷ್ಟು ಮತದಾನವಾಗಿದ್ದು, ರಾಜ್ಯದಲ್ಲಿ ಅತ್ಯಂತ ಕಡಿಮೆ ಮತದಾನವಾದ ಕ್ಷೇತ್ರವಾಗಿದೆ.
ಇದನ್ನೂ ಓದಿ:  KM Shivalingegowda: ಮತ ಎಣಿಕೆಗೂ ಮುನ್ನವೇ ಕಾಂಗ್ರೆಸ್‌ ಅಭ್ಯರ್ಥಿ ಶಿವಲಿಂಗೇಗೌಡ ಹಿಂಗಂದ್ರು!


ಈ ವರ್ಷವೂ ರಾಜಧಾನಿಯಲ್ಲಿ ಕಡಿಮೆ ಮತದಾನ


ಬೆಂಗಳೂರು ಕೇಂದ್ರ- ಶೇ.54.45, ಬೆಂಗಳೂರು ಉತ್ತರ ಶೇ.50.02, ಬೆಂಗಳೂರು ದಕ್ಷಿಣ-ಶೇ.51.15, ಬೆಂಗಳೂರು ನಗರ ಶೇ.53.71ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಈ ಮೂಲಕ ರಾಜ್ಯ ರಾಜಧಾನಿಯ ಮತದಾರರು ಈ ಚುನಾವಣೆಯಲ್ಲೂ ಕಡಿಮೆ ಮತದಾನ ಮಾಡಿದ್ದಾರೆ.


ಇದನ್ನೂ ಓದಿ:  ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಯಾರಿಗೆ ಸಿಕ್ತು ಹಿರಿಯರ ಆಶೀರ್ವಾದ? ಬ್ಯಾಲೆಟ್ ಪೇಪರ್ ರಿಸಲ್ಟ್ ಔಟ್​


ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ವ್ಯಕ್ತಿ ಸಾವು

top videos


  ಮತದಾನ ಮಾಡಿದ ಕೆಲವೇ ಕ್ಷಣಗಳ ಬಳಿಕ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 49 ವರ್ಷದ ಜಯಣ್ಣ ಎಂದು ಗುರುತಿಸಲಾಗಿದೆ. ಮತದಾನ ಮಾಡಲು ಮತಕೇಂದ್ರಕ್ಕೆ (Polling Booth) ಬಂದಿದ್ದ ಜಯಣ್ಣ ಸಾರತಿ ಸಾಲಿನಲ್ಲಿ ನಿಂತುಕೊಂಡು ತಮ್ಮ ಹಕ್ಕು ಚಲಾಯಿಸಿದ್ದರು.

  First published: